ಕಾನೂನುಮೀರಿದರೆಕಠಿಣಕ್ರಮ

ಬೆಂಗಳೂರು : ವಿರೋಧ ಪಕ್ಷಗಳು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುವುದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೋರಾಟ ಸಂದರ್ಭ ದಲ್ಲಿ ಕಾನೂನು ಉಲ್ಲಂಘಿಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಗಳ ಗೃಹಕಛೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟ ನಡೆಸುವುದಕ್ಕೆ ಕಾಂಗ್ರೆಸ್ಗೆ ಅವಕಾಶ ವಿದೆ. ಆದರೆಈಹೋರಾಟ ಕಾನೂನು ಚೌಕಟ್ಟಿನಲ್ಲಿ ಇರಬೇಕು ಎಂದರು. ಸೆ.೨೬ರಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಚಳುವಳಿ ನಡೆಸಿ, ಘಿ‘ವಿಧಾನ ಸೌಧ ದಿಗ್ಬಂಧನಘಿ’ ಕಾರ್ಯಕ್ರಮ ನಡೆಸು ತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,ಈ ಹೋರಾಟ ಕಾನೂನು ಮೀರಿದರೆ ಕಾನೂನಿನನ್ವಯ ಕ್ರಮ ಜರುಗಿಸಲಾಗು ವುದು ಎಂದು ತಿಳಿಸಿದರು. ರಾಜ್ಯದ ಪರಿಸ್ಥಿತಿಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಯಾವುದೇ ಲೋಪಗಳು ಆಗಿಲ್ಲ ಎಂದು ಹೇಳಿದರು. ಬರ ಪರಿಸ್ಥಿತಿಯ ನಿರ್ವಹಣೆಯನ್ನು ಖುದ್ದಾಗಿ ವೀಕ್ಷಿಸಲು ಬುಧವಾರ ಗುಲ್ಬರ್ಗಾ ಹಾಗೂ ಧಾರವಾಡ ಜಿಲ್ಲೆ ಗಳಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಪ್ರತಿಪಕ್ಷಗಳ ಬಗ್ಗೆ ನಾನು ಟೀಕಿಸಲು ಹೋಗುವುದಿಲ್ಲ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪರಸ್ಪರ ಆರೋಪಿಸಿ ಕೊಳ್ಳುತ್ತಿವೆ. ಬಿ.ಬಿ.ಎಂ.ಪಿ. ಚುನಾವಣೆ ಈಗ ಎದುರಾಗಿದೆ. ಹಾಗಾಗಿ ತಮ್ಮ ಆಸ್ತಿತ್ವ ಉಳಿಸಿಕೊಳ್ಳಲು ಈ ಎರಡೂ ಪಕ್ಷಗಳು ಪ್ರಯತ್ನ ನಡೆಸಿವೆ ಎಂದರು. ಈ ಎರಡೂ ಪಕ್ಷಗಳಿಗೆ ಸರ್ಕಾರ ವನ್ನು ಟೀಕಿಸುವುದನ್ನು ಬಿಟ್ಟರೆ ಬೇರೆ ಕೆಲಸವೇ ಇಲ್ಲ ಎಂದು ಭಾವಿಸಬೇಕಾ ಗಿದೆ. ಅಭಿವೃದ್ಧಿ ಗೆ ಸಹಕರಿಸಬೇಕು. ಆದರೆ ಪ್ರತಿಪಕ್ಷಗಳು ಟೀಕೆಯನ್ನೇ ಅಸ್ತ್ರ ಮಾಡಿಕೊಂಡಿವೆ ಎಂದು ಕುಟುಕಿದರು.

No Comments to “ಕಾನೂನುಮೀರಿದರೆಕಠಿಣಕ್ರಮ”

add a comment.

Leave a Reply