ನಗರಸಭೆಆಯಕ್ತಧರ್ಮಪ್ಪಭ್ರಷ್ಟಕುಬೇರ:ಕಛೇರಿ-ಶಿವಮೊಗ್ಗ ನಿವಾಸಗಳಮೇಲೆಲೋಕಾಯಕ್ತದಾಳಿ

ಬೆಂಗಳೂರು : ಹಾಸನ ನಗರಸಭೆಯ ನೂತನ ಆಯುಕ್ತ ಕೆ.ಎಂ.ಧರ್ಮಪ್ಪ ಸೇರಿದಂತೆ ರಾಜ್ಯದ ಎಂಟುಮಹಾ ಭ್ರಷ್ಟ ಅಧಿಕಾರಿಗಳ ಬೇಟೆಯನ್ನುಲೋಕಾಯುಕ್ತರು ಬುಧವಾರ ಏಕಕಾಲದಲ್ಲಿ ನಡೆಸಿ, ಒಟ್ಟು ೧೧.೫ ಕೋಟಿ ರೂ.ಗೂ ಹೆಚ್ಚಿನ ಅಕ್ರಮ ಆಸ್ತಿ, ನಗದನ್ನು ವಶಪಡಿಸಿಕೊಂಡಿದ್ದಾರೆ.ಹಾಸನ ನಗರಸಭೆಗೆ ಕಳೆದ ೨೫ ದಿನಗಳ ಹಿಂದೆಯಷ್ಟೇ ಆಯುಕ್ತರಾಗಿನೇಮಕಗೊಂಡಿದ್ದ ಕೆ.ಎಂ.ಧರ್ಮಪ್ಪಅವರು ಹಾಸನದಲ್ಲಿ ವಾಸವಿದ್ದಹೋಟೆಲ್, ನಗರಸಭಾ ಕಛೇರಿ ಹಾಗೂಶಿವಮೊಗ್ಗ, ಭದ್ರಾವತಿಗಳಲ್ಲಿರುವ ಅವರನಿವಾಸಗಳ ಮೇಲೆ ಲೋಕಾಯುಕ್ತರುಬೆಳಗಿನ ಜಾವ ಸುಮಾರು ೫-೩೦ರಲ್ಲಿಏಕಕಾಲದಲ್ಲಿ ದಾಳಿ ನಡೆಸಿ, ೧.೩೫ಕೋಟಿ ರೂ. ಅಕ್ರಮ ಗಳಿಕೆಯನ್ನು ಪತ್ತೆಹಚ್ಚಿದರು.ಹಾಸನದ ಲೋಕಾಯುಕ್ತ ಇನ್ಸ್ಪೆಕ್ಟರ್ ರುದ್ರಮುನಿ ಮತ್ತವರ ತಂಡವುರಾಜ್ಯ ಲೋಕಾಯುಕ್ತರ ಸೂಚನೆಯಹಿನ್ನಲೆಯಲ್ಲಿ ಅವರು ಉಳಿದುಕೊಂಡಿರುವ ಖಾಸಗಿ ಹೋಟೆಲ್ಗೆ ತೆರಳಿದಿಢೀರ್ ದಾಳಿ ನಡೆಸಿತು. ದಾಳಿಯವೇಳೆ ನಾಲ್ಕೂ ವರೆ ಸಾವಿರ ರೂ. ನಗದುಪತ್ತೆಯಾಗಿದೆ. ನಂತರ ಅವರನ್ನು ವಶಕ್ಕೆತೆಗೆದುಕೊಂಡ ಲೋಕಾಯುಕ್ತರು,ನಗರಸಭೆ ಕಛೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.ಅರ್ಧ ಗಂಟೆಗೂ ಹೆಚ್ಚು ವೇಳೆದಾಖಲೆ ಪರಿಶೀಲಿಸಿದ ನಂತರ ಕೆಲವುಮಹತ್ವದ ಸುಳಿವು ಲಭ್ಯವಾಯಿತು.ಹಾಸನ ನಗರಸಭೆಯ ಇತಿಹಾಸದಲ್ಲಿಯೇ ಆಯುಕ್ತರೊಬ್ಬರ ವಿರುದ್ಧಲೋಕಾಯುಕ್ತರು ದಾಳಿ ನಡೆಸಿ, ಬಂಧಿಸಿದ್ದು ಇದೇ ಪ್ರಥಮ ಎಂದು ಹೇಳಲಾಗಿದೆ.ಈತ ಶಿವಮೊಗ್ಗ ನಗರಸಭೆಯಿಂದಹಾಸನಕ್ಕೆ ಆಗಮಿಸುವ ವೇಳೆ ಬಿ.ಜೆ.ಪಿ.ಯಪ್ರಭಾವಿ ಸಚಿವರೊಬ್ಬರಿಗೆ ದೊಡ್ಡಪ್ರಮಾಣದಲ್ಲಿ ಲಂಚ ಕೊಟ್ಟಿದ್ದರು ಎಂಬಗುಸುಗುಸು ಹಬ್ಬಿತ್ತು.ಅವರ ಆಶೀರ್ವಾದದಿಂದಲೇ ಇಲ್ಲಿಒಕ್ಕರಿಸಿದ ಕೆ.ಎಂ.ಧರ್ಮಪ್ಪ, ತಾನುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಹಾಗೂ ಇಂಧನ ಸಚಿವ ಈಶ್ವರಪ್ಪಅವರಿಗೆ ಹತ್ತಿರದವನು ಎಂದು ಹಲವರಬಳಿ ಹೇಳಿಕೊಂಡಿದ್ದರು.ಬಂದ ಅತ್ಯಲ್ಪ ದಿನಗಳಲ್ಲಿಯೇಹಾಸನ ನಗರಸಭೆಯಲ್ಲಿಯೂ ಭ್ರಷ್ಟಾಚಾರ ಎಸಗಲು ಪ್ರಯತ್ನ ನಡೆಸುತ್ತಿದ್ದರು.ಎಂಬ ಮಾಹಿತಿ ಪತ್ರಿಕೆಗೆ ದೊರೆತಿದೆ.ಈ ಹಿಂದೆ ನಗರಸಭೆ ಆಯುಕ್ತರಾಗಿದ್ದ ಶಿವನಂಜೇಗೌಡ ಬಂದ ಹೊಸದರಲ್ಲಿ ಅವರಿಗೆ ಜನಪರ ಕಾಳಜಿ ಇರಲಿಲ್ಲ. ನಂತರ ಅವರು ಚೆನ್ನಾಗಿಯೇಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತಿದ್ದರು. ಒಂದು ಕಾಲು ವರ್ಷ ಕಳೆಯುವುದರೊಳಗಾಗಿ ಕೆ.ಎಂ.ಧರ್ಮಪ್ಪತನಗಿರುವ ರಾಜಕೀಯ ಹಾಗೂಪ್ರಭಾವದಿಂದ ಹಾಸನ ನಗರಸಭೆಆಯುಕ್ತರಿಗೆ ನಿಯುಕ್ತಿಗೊಂಡರು.ಲೋಕಾಯುಕ್ತ ಪೊಲೀಸರು ಇವರನ್ನು ಬಂಧಿಸಿದ ಕೂಡಲೇ ನಗರಸಭೆಅಧಿಕಾರಿಗಳು ಕೆಲಕಾಲ ದಿಗ್ಭ†ಮೆಗೊಂಡಿದ್ದರು. ಹೆಚ್ಚಿನ ವಿಚಾರಣೆಗಾಗಿಇವರನ್ನು ವಶಕ್ಕೆ ತೆಗೆದುಕೊಂಡಲೋಕಾಯುಕ್ತ ಪೊಲೀಸರು, ಶಿವಮೊಗ್ಗಕ್ಕೆಕರೆದೊಯ್ದರು.ಹಾಸನಕ್ಕೆ ಬರುವ ಮುಂಚೆ ಶಿವಮೊಗ್ಗ ಮತ್ತು ಭದ್ರಾವತಿ ನಗರಸಭೆಗಳಲ್ಲಿ ಧರ್ಮಪ್ಪ ಪೌರಾಯುಕ್ತರಾಗಿದ್ದರು. ಇವರಿಗೆ ಸೇರಿದ ಶಿವಮೊಗ್ಗದಎರಡು ಮನೆ ಹಾಗೂ ಸಂತೆ ಕಡೂರಿನಲ್ಲಿರುವ ತೋಟದ ಮನೆಯ ಮೇಲೆಲೋಕಾಯುಕ್ತ ಎಸ್.ಪಿ. ನದಾಫ್ನೇತೃತ್ವದ ತಂಡ ದಾಳಿ ನಡೆಸಿತು. ವಿನೋಬಾನಗರದ ೬೦ ಅಡಿ ರಸ್ತೆಯ ೧೩ನೇ ಕ್ರಾಸ್ನಲ್ಲಿರುವ ಧರ್ಮಪ್ಪ ಅವರ ಮನೆಯಮೇಲೆ ದಾಳಿ ಮಾಡಿದಾಗ, ಅಲ್ಲಿದ್ದ ಅವರಪತ್ನಿ ಮಂಜುಳಮ್ಮ ಹಿತ್ತಲಲ್ಲಿ ಬಚ್ಚಿಟ್ಟಿದ್ದಅಕ್ರಮ ಆಸ್ತಿಯ ಕಾಗದ ಪತ್ರಗಳನ್ನುಅಲ್ಲೇ ಸುಟ್ಟು ಹಾಕಲು ಪ್ರಯತ್ನಿಸಿದರಲ್ಲದೆ, ಲೋಕಾಯುಕ್ತರ ಕಾರ್ಯಾಚರಣೆಗೆಅಡ್ಡಿಪಡಿಸಿದರು.

No Comments to “ನಗರಸಭೆಆಯಕ್ತಧರ್ಮಪ್ಪಭ್ರಷ್ಟಕುಬೇರ:ಕಛೇರಿ-ಶಿವಮೊಗ್ಗ ನಿವಾಸಗಳಮೇಲೆಲೋಕಾಯಕ್ತದಾಳಿ”

add a comment.

Leave a Reply

You must be logged in to post a comment.