ಫರಾಷ್ಟ್ರೀಯವಿಪತ್ತುಫಘೊಷಿಸಿ:ಸಿ.ಎಂ.

ಬೆಂಗಳೂರು: ರಾಜ್ಯದಲ್ಲಿ ಆತಿವೃಷ್ಟಿ ಅಟ್ಟಹಾಸದಿಂದ ಮೆರೆದಿರುವ ಹಿನ್ನಲೆಯಲ್ಲಿ ಘಿಫರಾಷ್ಟ್ರೀಯ ವಿಪತ್ತುಘಿಫ ಎಂದು ಘೊಷಿಸ ಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಕೇಂದ್ರ ಸರ್ಕಾರವನ್ನು ಒತ್ತಾ ಯಿಸಿದ್ದು, ೧೦ ಸಾವಿರ ಕೋಟಿ ರೂ. ಪರಿ ಹಾರವನ್ನು ಕೂಡಲೇ ಬಿಡುಗಡೆ ಮಾಡು ವಂತೆ ಮನವಿ ಮಾಡಿದ್ದಾರೆ. ಇಂತಹ ವಿಪತ್ತಿನ ಸಮಯದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿ ಸುವುದನ್ನು ಬಿಟ್ಟು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಗಳು ವಿನಂತಿಸಿದ್ದಾರೆ. ಈ ನಡುವೆ ಜಲ ಪ್ರಳಯಕ್ಕೆ ತುತ್ತಾಗಿದ್ದ ೧೧ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಎಲ್ಲೆಲ್ಲೂ ನೀರನ್ನು ಕಾಣುತ್ತಿರುವ ಜನರು ಕಣ್ಣೀರು ಸುರಿಸು ತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿ ಸತ್ತವರ ಸಂಖ್ಯೆ ೧೬೦ ದಾಟಿದೆ. ಲಕ್ಷಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಪ್ರವಾಹ ಭೀಕರತೆ ಮುಂದೆ ರಕ್ಷಣಾ ತಂಡ ಕೂಡ ಅಸಹಾಯಕವಾಗಿದೆ. ಬಾಗಲ ಕೋಟೆಯ ಹುನಗುಂದ ಬಳಿಯ ಹಿರೇ ಮಾಗಿಯಲ್ಲಿ ರಕ್ಷಣಾ ಕಾರ್ಯದಲ್ಲಿ ಬಳಸಿದ್ದ ದೋಣಿಯೇ ಪ್ರವಾಹಕ್ಕೆ ಸಿಲುಕಿದ್ದರಿಂದ ರಕ್ಷಣಾ ಸಿಬ್ಬಂದಿಯೇ ಮರವೇರಿ ಇನ್ನೊಬ್ಬರ ರಕ್ಷಣೆಗಾಗಿ ಗೋಗರೆಯಬೇಕಾಯಿತು. ಈ ಸಂದರ್ಭದಲ್ಲಿ ಓರ್ವ ಮಹಿಳೆ ಮತ್ತು ನಾಲ್ವರು ಮಕ್ಕಳು ಜಲಸಮಾಧಿ ಯಾಗಿದ್ದಾರೆ. ಹೆದರಿಕೆಯಿಂದ ದೋಣಿ ಯಲ್ಲಿದ್ದ ಏಳು ಜನ ನೀರಿಗೆ ಜಿಗಿದಿದ್ದರಿಂದ ಅನಾಹುತ ಸಂಭವಿಸಿತು. ಇಬ್ಬರನ್ನು ಪಾರು ಮಾಡಲಾಗಿದೆ. ರಕ್ಷಣಾ ಕಾರ್ಯ ಸೂಕ್ತ ಸಮಯದಲ್ಲಿ ನಡೆಯದೆ ಆಹಾರ ಪದಾರ್ಥ ಗಳು ತಲು ಪದೆ ಒದ್ದಾಡುತ್ತಿರುವ ಸಂತ್ರಸ್ತರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅನೇಕ ಕಡೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ದಿಗ್ಬಂಧನ ಹಾಕಲಾಗಿದೆ. ಸಂತ್ರಸ್ತರ ನೆರವಿನಲ್ಲಿ ನಿರ್ಲಕ್ಷ್ಯ ತೋರಿದ ಇಂಡಿ ಹಾಗೂ ಮುಂಡರಗಿ ತಹಸೀಲ್ದಾರ್ ಗಳನ್ನು ಹಾಗೂ ಕೊಪ್ಪಳ ಮತ್ತು ಬಿಜಾ ಪುರದ ವಾರ್ತಾಧಿಕಾರಿಗಳನ್ನು ಸರ್ಕಾರ ಅಮಾನತ್ತುಗೊಳಿಸಿದೆ.

No Comments to “ಫರಾಷ್ಟ್ರೀಯವಿಪತ್ತುಫಘೊಷಿಸಿ:ಸಿ.ಎಂ.”

add a comment.

Leave a Reply