ದಿಕ್ಕುಕಾಣದಾದಅನ್ನದಾತ

ಬೆಂಗಳೂರು: ಉತ್ತರ ಕರ್ನಾಟಕ ದಲ್ಲಿ ವರುಣನ ಆರ್ಭಟ ಕಡಿಮೆ ಯಾಗಿದ್ದು, ಜನರು ಚೇತರಿಸಿಕೊಳ್ಳು ತ್ತಿದ್ದಾರೆ. ಆದರೆ ಎಲ್ಲೆಡೆ ಸಾಂಕ್ರಾಮಿಕ ರೋಗದ ಭೀತಿ ಹರಡಿದೆ. ನೊಂದವರ ಬಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳು ಧಾವಿಸಿ, ಸಹಾಯಹಸ್ತ ಚಾಚಿವೆ. ಈ ನಡುವೆ ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ ರೈತರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ದಿಕ್ಕು ಕಾಣದಾದ ಅನ್ನದಾತ ಚಿಂತೆಯಲ್ಲಿ ದ್ದಾನೆ. ತಾವೇ ಉತ್ತಿ ಬೆಳೆದ ಬೆಳೆಯು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಶ್ರೀ ಕ್ಷೇತ್ರ ಮಂತ್ರಾಲಯ ನಲುಗಿ ಹೋಗಿದೆ. ಕಸದ ರಾಶಿಯ ಮಧ್ಯೆ ಹೆಣಗಳು ಕಾಣ ಸಿಕ್ಕುತ್ತಿವೆ. ಮಂತ್ರಾ ಲಯ ಇದರಿಂದ ಬೆಚ್ಚಿ ಬಿದ್ದಿದೆ. ರಾಯರ ಮಠದಲ್ಲಿ ಮೌನ ಆವರಿಸಿದೆ. ಉತ್ತರ ಕರ್ನಾಟಕದಲ್ಲಿ ಮಳೆ ನಿಂತಿ ದ್ದರೂ ಪ್ರವಾಹಕ್ಕೆ ತುತ್ತಾಗಿರುವ ಜನ ಗೋಳಿಡುತ್ತಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಆಹಾರದ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಯಮ ಸ್ವರೂಪಿ ಮಳೆಯಿಂದ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಆಹಾರ ಮತ್ತು ನೀರಿಗಾಗಿ ಹಾಹಾಕಾರವೆದ್ದಿದೆ. ಜನರಿಗೆ ನಿಲ್ಲಲು ನೆಲೆಯೂ ಇಲ್ಲ. ಕುಡಿಯಲು ನೀರಿಲ್ಲ. ಕಳೆದ ಮೂರು ದಿನಗಳಿಂದ ಹಸಿವಿನಿಂದ ಬಳಲುತ್ತಿರುವ ಜನತೆಗೆ ಸರ್ಕಾರ ತಲುಪಿಸುತ್ತಿರುವ ಆಹಾರದ ಪೊಟ್ಟಣಗಳು ಸಾಲದಾಗುತ್ತಿಲ್ಲ. ಉತ್ತರ ಕರ್ನಾಟಕದ ಇಡೀ ಭಾಗವೇ ಜಲಮಯವಾಗಿರುವುದರಿಂದ ಸಂತ್ರಸ್ತರಿಗೆ ಆಹಾರ ಮತ್ತು ನೀರನ್ನು ಒದಗಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದ್ದರೂ ಆಹಾರವನ್ನು ತಲು ಪಿಸಲು ವರುಣದೇವ ಸೃಷ್ಟಿಸಿರುವ ಅವಾಂತರಗಳು ಸಾಕಷ್ಟು ಅಡ್ಡಿಪಡಿಸಿವೆ. ಸಂತ್ರಸ್ತರಿಗಾಗಿ ನಿರ್ಮಿಸಿರುವ ಗಂಜಿ ಕೇಂದ್ರಗಳಲ್ಲೂ ಬದುಕು ಕಳೆದುಕೊಂಡ ಜನರ ನೋವು ಕಾಣುತ್ತಿದ್ದು, ಈಗಾ ಗಲೇ ಮಳೆಯಿಂದಾಗಿ ಮೃತಪಟ್ಟ ತನ್ನ ವರನು ್ನ ನೆನೆದು ದುಃಖಿಸುತ್ತಿರುವ ಅನೇಕ ಮಂದಿಯ ನೋವು ಪ್ರದರ್ಶಿತಗೊಳ್ಳುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಕರುಣಾಕರ ರೆಡ್ಡಿ ಸೇರಿದಂತೆ ಉಸ್ತುವಾರಿ ಸಚಿವರುಗಳು ವೈಮಾನಿಕ ಸಮೀಕ್ಷೆ ನಡೆಸಿ, ಸಂತ್ರಸ್ತಗೊಂಡಿರುವ ಲಕ್ಷಾಂತರ ಮಂದಿಗೆ ಆಹಾರ ಪೂರೈಕೆ ಹಾಗೂ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿದ್ದಾರೆ. ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಸೈನಿಕರ ಸಹ ಯೋಗದೊಂದಿಗೆ ಕೈಗೊಂಡಿದ್ದರೂ ನಿರಾಶ್ರಿತರಿಗೆ ಪರಿಹಾರದ ಸಾಮಗ್ರಿ ಗಳನ್ನು ತಲುಪಿಸುವುದಕ್ಕೆ ಸಾಕಷ್ಟು ಎಡರು-ತೊಡರುಗಳು ಉಂಟಾಗಿವೆ.

No Comments to “ದಿಕ್ಕುಕಾಣದಾದಅನ್ನದಾತ”

add a comment.

Leave a Reply

You must be logged in to post a comment.