ಪರಿಹಾರ ಸಂಪನ್ಮೂಲಕ್ಕಾಗಿ ಹೊಸ ತೆರಿಗೆ

ಬೆಂಗಳೂರು : ಪ್ರವಾಹ ಪೀಡಿತ ಜನತೆಗೆ ಪುನರ್ವಸತಿ ಕಲ್ಪಿಸಲು ಹೆಚ್ಚಿನ ಹಣದ ಅವಶ್ಯವಿರುವ ಹಿನ್ನಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕ್ಕಾಗಿ ಜನಸಾಮಾನ್ಯನಿಗೆ ಹೊರೆಯಾಗ ದಂತೆ, ಶ್ರೀಮಂತರಿಗೆ ಹೆಚ್ಚಿನ ಪ್ರಮಾಣ ದಲ್ಲಿರುವ ಹೊಸ ತೆರಿಗೆಗಳನ್ನು ಹೇರಲು ಸರ್ಕಾರ ನಿರ್ಧರಿಸಿದ್ದು, ಈ ತೆರಿಗೆಗಳು ೬ ತಿಂಗಳು ಅಥವಾ ೧ ವರ್ಷದವರೆಗೆ ಚಾಲ್ತಿಯಲ್ಲಿರುತ್ತವೆ. ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸು ವಲ್ಲಿ ಪ್ರತಿಪಕ್ಷಗಳ ಸಹಕಾರ ಪಡೆಯಲು ಭಾನುವಾರ ಕರೆದಿದ್ದ ಸರ್ವ ಪಕ್ಷಗಳ ಸಭೆಯ ನಂತರ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದರು. ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಸರ್ವ ಪಕ್ಷಗಳ ನಾಯಕರೊಂದಿಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಅನೇಕ ಸಲಹೆ-ಸೂಚನೆಗಳನ್ನು ವಿರೋಧ ಪಕ್ಷಗಳು ನೀಡಿವೆ. ಹೊಸ ತೆರಿಗೆ ಪದ್ಧತಿಗೆ ಚಿಂತಿಸಲಾಗಿದೆ. ಈ ಮೂಲದಲ್ಲೂ ನಿರೀಕ್ಷಿತ ಆದಾಯ ಬಾರದಿದ್ದಲ್ಲಿ ವಿವಿಧ ಮೂಲಗಳಿಂದ ಸಾಲ ಪಡೆಯಲಾಗು ವುದು. ಇದಕ್ಕಾಗಿ ವಿಶೇಷ ಅಧಿವೇಶನ ವನ್ನೂ ಕರೆಯಲಾಗುವುದು ಎಂದರು. ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತು ವಾರಿ ಸಚಿವರುಗಳನ್ನು ಒಂದು ವಾರ ಕಾಲ ಆಯಾ ಜಿಲ್ಲೆಗಳಲ್ಲೇ ವಾಸ್ತವ್ಯ ಹೂಡಿ ಪರಿಹಾರ ಕ್ರಮಗಳ ನೇತೃತ್ವ ವಹಿಸಲು ಆದೇಶಿಸಲಾಗಿದೆ. ಪ್ರವಾಹ ದಿಂದ ಮುಳುಗಿರುವ ಗ್ರಾಮಗಳ ಸ್ಥಳಾಂತರಕ್ಕೆ ಭೂ ಸ್ವಾಧೀನ ನಡೆಸಿ, ಮಾದರಿ ಗ್ರಾಮಗಳ ನಿರ್ಮಾಣಕ್ಕೂ ಚರ್ಚಿಸಿದ್ದು, ಸೋಮವಾರ ಉನ್ನತಅಧಿ ಕಾರಿಗಳ ಸಭೆ ಕರೆಯಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಇದಕ್ಕೂ ಮುನ್ನ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದವು. ಪರಿಹಾರದ ಬಗ್ಗೆ ಟೀಕೆ- ಟಿಪ್ಪಣಿ ಗಳು ಬೇಡ. ಪಕ್ಷಭೇದ ಮರೆತು ರಾಜ ಕೀಯ ಲಾಭವನ್ನು ಬದಿಗೊತ್ತಿ ಬೀದಿ ಪಾಲಾಗಿರುವ ಕುಟುಂಬಗಳನ್ನು ರಕ್ಷಿಸು ವುದು ನಮ್ಮೆಲ್ಲರ ಹೊಣೆ. ಪರಿ ಹಾರ ಕಾರ್ಯದಲ್ಲಿ ಕೈ ಜೋಡಿಸಿ ಪ್ರಾಮಾ ಣಿಕ ಪ್ರಯತ್ನ ನಡೆಸೋಣ ಎಂದು ಪ್ರತಿ ಪಕ್ಷಗಳ ಮುಖಂಡರು ಸಲಹೆ ನೀಡಿದರು. ಹಾನಿಗೊಳಗಾದ ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಪರಿಹಾರ ಕಾರ್ಯ ರೂಪಿಸುವುದು, ಸಂಕಷ್ಟಕ್ಕೆ ತುತ್ತಾಗಿರುವವರಿಗೆ ತಕ್ಷಣ ಪರಿ ಹಾರ ಕಲ್ಪಿಸಿ, ಪದೇ ಪದೇ ಪ್ರವಾಹಕ್ಕೆ ಸಿಲುಕದಂತೆ ಶಾಶ್ವತ ಪರಿಹಾರ ಒದಗಿಸು ವುದು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಪ್ರಧಾನಿ ಬಳಿಗೆ ನಿಯೋಗ ತೆರಳಲು ಪ್ರತಿಪಕ್ಷಗಳ ಮುಖಂಡರು ಸೂಚಿಸಿದರು. ಕೇಂದ್ರ ಸಚಿವ ವೀರಪ್ಪಮೊಯ್ಲಿ , ಕೆ.ಹೆಚ್.ಮುನಿಯಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿ.ಎಸ್. ಉಗ್ರಪ್ಪ , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸದಾನಂದ ಗೌಡ, ಅನಂತಕುಮಾರ್, ಚೆಲುವ ರಾಯಸ್ವಾಮಿ, ಆರ್.ವಿ.ದೇಶಪಾಂಡೆ ಮುಂತಾದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

No Comments to “ಪರಿಹಾರ ಸಂಪನ್ಮೂಲಕ್ಕಾಗಿ ಹೊಸ ತೆರಿಗೆ”

add a comment.

Leave a Reply