ನೆರೆಪರಿಹಾರ:ಸಿ.ಎಂ.ನೇತೃತ್ವದಲ್ಲಿ ಸಭೆ

ಬೆಂಗಳೂರು : ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಿತು. ಕೇಂದ್ರ ಸರ್ಕಾರ ನೀಡಿರುವ ನೆರ ವನ್ನು ಶೀಘ್ರ ಬಳಸಿಕೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ವೇಳೆ ಸಂತ್ರಸ್ತ ರಿಗೆ ಪರಿಹಾರ ಕಾರ್ಯ ಕೈಗೊಳ್ಳಲು, ರೂಪುರೇಷೆ ತಯಾರಿಸಲು ಮುಖ್ಯ ಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ರಿಗೆ ದೀಪಾವಳಿಗೆ ಮೊದಲೇ ಕನಿಷ್ಠ ಸೌಲಭ್ಯ ಒದಗಿಸಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಪ್ರವಾಹದಲ್ಲಿ ಮನೆ-ಮಠ ಕಳೆದುಕೊಂಡವರಿಗೆ ಶೀಘ್ರವೇ ಪರಿಹಾರ ಧನ ನೀಡಲಾಗು ವುದು ಎಂದು ಘೊಷಿಸಿದರು. ಒಣಜಮೀನಿನಲ್ಲಿ ಭೂಮಿ ಕಳೆದು ಕೊಂಡವರಿಗೆ ಪ್ರತಿ ಹೆಕ್ಟೇರ್ಗೆ ೨ ಸಾವಿರ ರೂ., ನೀರಾವರಿ ಜಮೀನಿಗೆ ೪ ಸಾವಿರ ರೂ., ತೋಟಗಾರಿಕಾ ಭೂಮಿಗೆ ಆರು ಸಾವಿರ ರೂ. ಸಹಾಯಧನ ನೀಡಲಾಗು ವುದು ಎಂದು ತಿಳಿಸಿದರು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಜಾಗ ಖರೀದಿಸಲು ಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪ್ರತಿ ತಾಲ್ಲೂಕಿಗೆ ಜಾಗ ಖರೀದಿಸಲು ೨ ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು. ಕೇಂದ್ರದಿಂದ ಇನ್ನೂ ಹೆಚ್ಚಿನ ಅನು ದಾನ ದೊರೆತಿಲ್ಲ. ಹೆಚ್ಚಿನ ಪರಿಹಾರ ಧನ ನೀಡಲಾಗುವುದು. ಹಲವು ಇಲಾಖೆ ಗಳಿಗೆ ತೆರಿಗೆ ಹಾಕುವ ಬಗ್ಗೆ ದೀಪಾವಳಿ ಬಳಿಕ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.

No Comments to “ನೆರೆಪರಿಹಾರ:ಸಿ.ಎಂ.ನೇತೃತ್ವದಲ್ಲಿ ಸಭೆ”

add a comment.

Leave a Reply

You must be logged in to post a comment.