ನೆರೆಪರಿಹಾರಕ್ಕೆ೨೫೦೦ಕೋಟಿರೂ.

ಬೆಂಗಳೂರು : ನೆರೆ ಪರಿಹಾರಕ್ಕೆ ೨೫೦೦ ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದೇ ವೇಳೆ ರಾಜ್ಯ ಪಾಲರುಇದಕ್ಕೆಅಂಕಿತಹಾಕಿದ್ದಾರೆ. ನೆರೆ ಪರಿಹಾರ ಕಾರ್ಯ ಸಂಬಂಧ ಇಂದು ತುರ್ತು ಸಂಪುಟ ಸಭೆಯಲ್ಲಿಈ ನಿರ್ಣಯ ಕೈಗೊಳ್ಳಲಾಗಿದ್ದು, ಸುಗ್ರೀ ವಾಜ್ಞೆ ಕುರಿತಂತೆ ಆದೇಶ ಹೊರಡಿಸ ಲಾಗಿದೆ. ತಕ್ಷಣಕ್ಕೆ ೧೭೩ ಕೋಟಿ ರೂ. ಬಿಡು ಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ೨೫೦೦ ಸಾವಿರ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯ ನಿರ್ಧಾರವನ್ನು ರಾಜ್ಯಪಾಲರಿಗೆ ವಿವರಿಸಲಾಯಿತು. ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ದೀಪಾವಳಿಯ ನಂತರ ಶೇ.೧ರಷ್ಟು ವ್ಯಾಟ್ ವಿಧಿಸಲು ಸಭೆ ಅನುಮೋದನೆ ನೀಡಿತು. ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ವಿವರ ಒದಗಿಸಿದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ , ಮನೆ ನಿರ್ಮಾಣ ಸೇರಿದಂತೆ ನೆರೆ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳುವ ಪರಿಹಾರ ಕಾಮಗಾರಿಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಶೇ.೧ರಷ್ಟು ಹೊಸ ತೆರಿಗೆ ಪದ್ಧತಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

No Comments to “ನೆರೆಪರಿಹಾರಕ್ಕೆ೨೫೦೦ಕೋಟಿರೂ.”

add a comment.

Leave a Reply

You must be logged in to post a comment.