ಪ್ರವಾಹ:ಅ.೨೧ರಂದುರಾಜ್ಯಕ್ಕೆಕೇಂದ್ರದತಂಡ

ಬೆಂಗಳೂರು : ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿಯ ಕುರಿತು ಮೂರು ದಿನಗಳ ಕಾಲ ಅಧ್ಯಯನ ನಡೆಸಲು ಕೇಂದ್ರದ ತಂಡವು ಅಕ್ಟೋಬರ್ ೨೧ಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದೆ. ಯೋಜನಾ ಆಯೋಗದ ಅಧಿ ಕಾರಿಗಳಲ್ಲದೆ, ತಂಡದಲ್ಲಿ ಕೃಷಿ, ಹಣ ಕಾಸು, ರಸ್ತೆ, ಸಾರಿಗೆ, ಗ್ರಾಮೀಣಾಭಿ ವೃದ್ಧಿ, ಇಂಧನ ಹಾಗೂ ಜಲ ಸಂಪ ನ್ಮೂಲ ಹಾಗೂ ಸಹಕಾರ ಸಚಿ ವಾಲಯದ ಅಧಿಕಾರಿಗಳು ಇರ ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಹಿಂದೆಂದೂ ಕಂಡು ಕೇಳರಿಯ ದಂತೆ ಬಂದೆರಗಿರುವ ಪ್ರವಾಹ ಪರಿ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೇಂದ್ರವು ಹತ್ತು ಸಾವಿರ ಕೋಟಿ ರೂ. ಪರಿಹಾರ ನೀಡಬೇಕು ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಪ್ರವಾಹ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರವಾಹ ಪೀಡಿತ ಕರ್ನಾ ಟಕ ಹಾಗೂ ಆಂಧ್ರಕ್ಕೆ ತಲಾ ಸಾವಿರ ಕೋಟಿ ರೂ.ಗಳ ಪರಿಹಾರ ಘೊಷಿಸಿ ದ್ದಾರೆ. ಇದಲ್ಲದೆ ಪ್ರವಾಹ ಕುರಿತು ವರದಿಯನ್ನು ಸಲ್ಲಿಸಿದ ಬಳಿಕ ಹೆಚ್ಚುವರಿ ಸಹಾಯನೀಡುವ ಭರವಸೆ ನೀಡಿದ್ದಾರೆ.

No Comments to “ಪ್ರವಾಹ:ಅ.೨೧ರಂದುರಾಜ್ಯಕ್ಕೆಕೇಂದ್ರದತಂಡ”

add a comment.

Leave a Reply