ಸಿ.ಎಂ. ವಿರುದ್ಧ ಗಣಿಧಣಿಗಳ ರಹಸ್ಯ ಸಭ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗಣಿಧಣಿಗಳು ಬೆಂಗಳೂರಿನಲ್ಲಿ ಸೋಮವಾರ ರಹಸ್ಯ ಸಭೆ ನಡೆಸಿದ್ದಾರೆ. ಇದರಿಂದ ರಾಜಕೀಯ ಚಟುವಟಿಕೆ ಪುನಃ ಗರಿಗೆದರಿಕೊಂಡಿದೆ. ಬಳ್ಳಾರಿ ಗಣಿ ರೆಡ್ಡಿಗಳಿಂದ ಸಿ.ಎಂ. ವಿರುದ್ಧ ಬಂಡಾಯದ ರಣಕಹಳೆ ಮೊಳ ಗಿದೆ. ಸೋಮವಾರ ಸಭೆ ನಡೆದು, ಮುಂದಿನ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಎರಡನೇ ಬಾರಿಗೆ ಯಡಿಯೂರಪ್ಪ ವಿರುದ್ಧ ಗಣಿಧಣಿಗಳು ಸಮರ ಸಾರಿ ದ್ದಾರೆ. ಈಗ ರಣತಂತ್ರ ಹೆಣೆಯಲು ಕಾರ್ಯ ಮಗ್ನರಾಗಿದ್ದಾರೆ. ಸಚಿವ ಕರುಣಾಕರ ರೆಡ್ಡಿ ನಿವಾಸ ದಲ್ಲಿ ಸಭೆ ನಡೆದು, ತೀವ್ರವಾಗಿ ಚರ್ಚೆ ನಡೆಯಿತು.ಈಸಭೆಯಲ್ಲಿ ಶಾಸಕರಾದ ಬಾಲಕಚಂದ್ರ ಜಾರಕಿಹೊಳಿ, ಶಿವ ರಾಜ ತಂಗಡಗಿ ಮತ್ತಿತರ ಶಾಸಕರು ಪಾಲ್ಗೊಂಡಿದ್ದರು. ಸಚಿವ ಕರುಣಾಕರರೆಡ್ಡಿ ಸಭೆ ನಡೆ ದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಚರ್ಚೆ ಆಗಿದೆ. ಮುಂದಿನ ಬೆಳವಣಿಗೆಗಳನ್ನು ಕಾದುನೋಡಿಎಂದಷ್ಟೇಉತ್ತರಿಸಿದ್ದಾರೆ. ರಾಜ್ಯ ಬಿ.ಜೆ.ಪಿ.ಯಲ್ಲಿ ಇಂತಹ ಬೆಳವಣಿಗೆಗಳು ಹಿಂದೆ ಕೂಡ ನಡೆ ದಿತ್ತು. ಆ ಸಂದರ್ಭದಲ್ಲಿ ರಾಷ್ಟ್ರೀಯ ಬಿ.ಜೆ.ಪಿ. ನಾಯಕರು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ಹಾಗಾಗಿ ವಿವಾದ ಮೊಟುಕುಗೊಂಡಿತ್ತು ಆದರೆ ಈ ಬಾರಿ ಏನಾಗುತ್ತದೋ ಕಾದು ನೋಡಬೇಕು.

No Comments to “ಸಿ.ಎಂ. ವಿರುದ್ಧ ಗಣಿಧಣಿಗಳ ರಹಸ್ಯ ಸಭ”

add a comment.

Leave a Reply

You must be logged in to post a comment.