ಬಿ.ಜೆ.ಪಿ. ಪಕ್ಷದ ಭಿನ್ನಮತ ತಾರಕಕ್ಕೆ

ಬೆಂಗಳೂರು : ಶಿಸ್ತಿನ ಪಕ್ಷದಲ್ಲೀಗ ಬಂಡಾಯದ ಸುನಾಮಿ ಅಪ್ಪಳಿಸಿದೆ. ಬಿ.ಜೆ.ಪಿ. ಭಿನ್ನಮತ ತಾರಕಕ್ಕೇರಿದ್ದು, ಸರ್ಕಾರವನ್ನು ಅಸ್ಥಿರತೆಯ ಹೊಸ್ತಿಲಿಗೆ ತಂದಿದೆ. ಅತೃಪ್ತ ಶಾಸಕರು ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಪರ ಹಾಗೂ ವಿರುದ್ಧ ಸಭೆಗಳು ನಡೆದವು. ಸಭೆ ಹಾಗೂ ಪ್ರತಿ ಸಭೆಗಳನ್ನು ನಡೆಸಿರುವ ರೆಡ್ಡಿ ಹಾಗೂ ಯಡಿಯೂರಪ್ಪ ಬಣದ ನಡುವೆ ಅಸಮಾಧಾನ ಭುಗಿಲೆದ್ದಿದೆ. ಸಂಧಾನ ಯತ್ನಕ್ಕೆ ಮೊರೆ ಹೋದರೂ ಪ್ರಯೋಜನವಾಗಿಲ್ಲ.ಈ ಸಂಧಾನವನ್ನು ರೆಡ್ಡಿ ಧಣಿಗಳು ಒಪ್ಪಿಲ್ಲ. ಹಾಗಾಗಿ ಮುಂದಿನ ಬೆಳವಣಿಗೆಯು ತೀವ್ರ ಕುತೂಹಲವನ್ನು ಸೃಷ್ಟಿಸಿದೆ. ಬಂಡಾಯದ ಸೂತ್ರಧಾರ ಜನಾ ರ್ಧನ ರೆಡ್ಡಿ ಜೊತೆಗೆ ಸಚಿವರಾದ ಬಸವ ರಾಜ ಬೊಮ್ಮಾಯಿ ಮತ್ತು ಅರವಿಂದ ಲಿಂಬಾವಳಿ ರಾಯಭಾರಿಗಳಾಗಿ ನಡೆ ಸಿದ ಸಂಧಾನ ಫಲಪ್ರದವಾಗಿಲ್ಲ. ಗಣಿ ರೆಡ್ಡಿಗಳು ರೇಣುಕಾಚಾರ್ಯ ಮತ್ತು ಸಿ.ಎಂ. ನೇತೃತ್ವದಲ್ಲಿ ಮೂರು ಕಡೆ ನಡೆದ ಪ್ರತ್ಯೇಕ ಸಭೆಗಳು ಸರ್ಕಾರದ ಅಳಿವು-ಉಳಿವಿನಚರ್ಚೆಗೆಗ್ರಾಸಒದಗಿಸಿದೆ. ಈ ಮಧ್ಯೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಅತೃಪ್ತ ಶಾಸಕರು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ನಾಯ ಕತ್ವದ ವಿರುದ್ಧ ಸೆಟೆದು ನಿಂತಿದ್ದಾರೆ. ಅವರನ್ನು ಕೆಳಗಿಳಿಸಲೇಬೇಕೆಂದು ಹಠ ತೊಟ್ಟಿದ್ದಾರೆ. ಹೀಗಾಗಿ ಅತೃಪ್ತ ಶಾಸಕರು ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ. ಬಿ.ಜೆ.ಪಿ.ಯಲ್ಲಿ ಇಷ್ಟೆಲ್ಲಾ ಬೆಳವಣಿಗೆ ಆಗುತ್ತಿದ್ದಂತೆಯೇ ಭಿನ್ನಮತ ಶಮನಕ್ಕಾಗಿ ಬಿ.ಜೆ.ಪಿ. ಪ್ರಮುಖ ವೆಂಕಯ್ಯನಾಯ್ಡು ಬುಧವಾರಬೆಂಗಳೂರಿಗೆ ಆಗಮಿಸಿದರು. ಗುರುವಾರ ಅವರು ಭಿನ್ನಮತೀಯ ಶಾಸಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಪ್ರತ್ಯೇಕವಾಗಿ ಮುಖ್ಯಮಂತ್ರಿ ವಿರುದ್ಧ ಸೆಟೆದು ನಿಂತಿರುವ ಗಣಿಧಣಿಗಳೊಂದಿಗೂ ಚರ್ಚೆನಡೆಸಲಿದ್ದಾರೆ.

No Comments to “ಬಿ.ಜೆ.ಪಿ. ಪಕ್ಷದ ಭಿನ್ನಮತ ತಾರಕಕ್ಕೆ”

add a comment.

Leave a Reply

You must be logged in to post a comment.