ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್ !

ಐಪಿಎಲ್ ಪಂದ್ಯಾವಳಿಗಳ ಮೂಲಕ ಕ್ರಿಕೆಟ್ನ ಸ್ವರೂಪವನ್ನು ಬದಲಾಯಿಸಿದ ಘನತೆ ಲಲಿತ್ ಮೋದಿಗೆ ಸಲ್ಲುತ್ತದೆ. ಚುನಾವಣೆ … ಭದ್ರತಾ ಕಾರಣಗಳಿಂದ ಐಪಿಎಲ್ ಸೀಜನ್ ೨ ನ್ನು ೧೭ ದಿನಗಳ ಕಾಲಾವಧಿಯಲ್ಲಿ ದಕ್ಷಿಣ ಆಫ್ರಿಕಾಗೆ ವರ್ಗಾಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕ್ರಿಕೆಟ್ನಲ್ಲಿ ಬದಲಾವಣೆಯ ಗಾಳಿಗೆ ಕಾರಣರಾದ ಲಲಿತ್ಮೋದಿ ಜೀವನ ಚರಿತ್ರೆ ಹಿಂದಿ ಬೆಳ್ಳಿ ತೆರೆಗೆ ದಾಂಗುಡಿಯಿಡುವ ಸಿದ್ಧತೆಯಲ್ಲಿದೆ. ಶೈಲೇಂದ್ರ ಸಿಂಗ್ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಶೈಲೇಂದ್ರ ಸಿಂಗ್ ಮಾತನಾಡುತ್ತಾ, ಒಂದು ವರ್ಷ ಕಾಲ ಲಲಿತ್ ಮೋದಿ ಕುರಿತು ಸಂಶೋಧನೆ ಮಾಡಿದ್ದೇವೆ. ಅವರ ಬಾಲ್ಯಜೀವನ, ಯೌವನ .. ಹೀಗೆ ಬಹಳಷ್ಟು ಅಂಶಗಳನ್ನು ಸಂಗ್ರಹಿಸಿದ್ದೇವೆ. ಅವರ ಜೀವನ ಬಗ್ಗೆ ಅವರಿಗೆ ಗೊತ್ತಿಲ್ಲದಷ್ಟು ಅಂಶಗಳನ್ನು ತಿಳಿದುಕೊಂಡಿದ್ದೇವೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎನ್ನುತ್ತಾರೆ. ಇತ್ತೀಚೆಗೆ ಚಾಂಪಿಯನ್ಸ್ ಲೀಗ್ ಸಂದರ್ಭದಲ್ಲಿ ಲಲಿತ್ ಮೋದಿಯೊಂದಿಗೆಈವಿಷಯವನ್ನು ಪ್ರಸ್ತಾಪಿಸಲಾಯಿತು. ತಮ್ಮ ಜೀವನ ಕತೆಯನ್ನು ತೆರೆಗೆ ತರುತ್ತಿರುವುದರ ಬಗ್ಗೆ ಅವರು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅವರ ಪಾತ್ರವನ್ನು ಶಾರುಖ್ ಖಾನ್ಗೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದ್ದೇವೆ. ಕತೆಯನ್ನು ಅವರಿಗೆ ಈಗಾಗಲೇ ಹೇಳಿದ್ದೇವೆ. ಚಿತ್ರದಲ್ಲಿ ಅವರು ನಟಿಸಲು ಒಪ್ಪಿದರೆ ಕೂಡಲೆ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಇಲ್ಲದಿದ್ದರೆ ಶಾಹಿದ್ ಕಪೂರ್, ಇರ್ಫಾನ್ಖಾನ್ ಇಬ್ಬರಲ್ಲಿ ಒಬ್ಬರನ್ನು ಮುಖ್ಯಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದೇವೆ ಎನ್ನುತ್ತಾರೆ ಶೈಲೇಂದ್ರ ಸಿಂಗ್.

No Comments to “ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್ !”

add a comment.

Leave a Reply

You must be logged in to post a comment.