ಕುಂದ್ರಾನಿಂದ ಶಿಲ್ಪಾಗೆ ಭರ್ಜರಿ ಉಂಗುರ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ನಿಶ್ಚಿತಾರ್ಥದಲ್ಲಿ ಆಕೆಯ ಭಾವಿ ಪತಿ ರಾಜ್ ಕುಂದ್ರಾ ರೂ. ೩ ಕೋಟಿ ಬೆಲೆಯ ಉಂಗುರವನ್ನು ತೊಡಿಸಿದ್ದಾರೆ. ನಿಶ್ಚಿತಾರ್ಥ ಮುಗಿದ ಬಳಿಕ ಪತ್ರಕರ್ತರಿಗೆ ಶಿಲ್ಪಾ ಈ ಉಂಗುರವನ್ನು ಪದೇ ಪದೇ ತೋರಿಸುತ್ತಿದ್ದರಂತೆ ಛಾಯಾಗ್ರಾಹಕರು ಸುಖಾ ಸುಮ್ಮನೆ ಕ್ಯಾಮೆರಾಗಳನ್ನು ಕ್ಲಿಕ್ಕಿಸುತ್ತಿದ್ದರಂತೆ ! ಆದರೆ ಅದು ದುಬಾರಿ ಬೆಲೆಯ ಉಂಗುರ ಎಂಬುದು ಅವರಿಗೆ ಗೊತ್ತಿರಲಿಲ್ಲವಂತೆ. ನಿಶ್ಚಿತಾರ್ಥವಾಯಿತು ಎಂಬ ಕಾರಣ ಶಿಲ್ಪಾಶೆಟ್ಟಿ ಹೀಗೆ ತೋರಿಸುತ್ತಿರಬೇಕು ಎಂದುಕೊಂಡರು. ಆದರೆ ಅದೂ ಬರೀ ನಿಶ್ಚಿತಾರ್ಥದ ಉಂಗುರವಲ್ಲ ರೂ. ೩ ಕೋಟಿ ಬೆಲೆ ಬಾಳುವ ಉಂಗುರ ಎಂಬುದು ಗೊತ್ತಾದ ಬಳಿಕ ಪತ್ರಕರ್ತರು ಹೌಹಾರಿದ್ದಾರೆ! ಮುಂಬೈ ಜುಹುನಲ್ಲಿರುವ ರಾಜ್ ಕುಂದ್ರಾ ಸ್ವಗೃಹದಲ್ಲಿ ಶನಿವಾರ (ಅ. ೨೪) ರಂದು ಶಿಲ್ಪಾಶೆಟ್ಟಿ ನಿಶ್ಚಿತಾರ್ಥ ನೆರವೇರಿದ್ದು ಗೊತ್ತೇ ಇದೆ. ಶಿಲ್ಪಾಶೆಟ್ಟಿ ಮತ್ತು ರಾಜ್ ಕುಂದ್ರಾ ಮದುವೆ ಡಿಸೆಂಬರ್ ತಿಂಗಳಲ್ಲಿ ಮುಂಬೈನಲ್ಲಿ ನಡೆಯಲಿದೆ. ಆರತಕ್ಷತೆಯನ್ನು ಲಂಡನ್ನಲ್ಲಿ ಆಯೋಜಿಸಲಾಗಿದೆ ಎನ್ನುತ್ತವೆ ಮೂಲಗಳು.

No Comments to “ಕುಂದ್ರಾನಿಂದ ಶಿಲ್ಪಾಗೆ ಭರ್ಜರಿ ಉಂಗುರ”

add a comment.

Leave a Reply