‘ಪ್ರೇಮಿಸಂ’ ಧ್ವನಿ ಸುರುಳಿ ಬಿಡುಗಡ

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಪ್ರೇಮಿಸಂ’. ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿಯ ಜೋಡಿ ಎಂದೇ ಗುರುತಿಸಿಕೊಂಡಿರುವ ಹಂಸಲೇಖ, ರತ್ನಜ ಮತ್ತು ಅಜಯ್ ಗೌಡ ಅವರು ‘ಪ್ರೇಮಿಸಂ’ ಎಂಬ ಹೊಸ ಅಸ್ತ್ರ ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ‘ಹೊಂಗನಸು’ ಚಿತ್ರದಲ್ಲಿ ಅಜಯ್, ಹಂಸ್ ಮತ್ತು ರತ್ನಜ ಎಡವಿದ್ದರು. ಹಾಗಾಗಿ ‘ಪ್ರೇಮಿಸಂ’ ಚಿತ್ರವನ್ನು ಜಾಗರೂಕತೆಯಿಂದ ತೆರೆಗೆ ತರುತ್ತಿದ್ದಾರೆ. ಆನಂದ್ ಆಡಿಯೋ ಹೊರತಂದಿರುವ ‘ಪ್ರೇಮಿಸಂ’ ಆಡಿಯೋ ಸಿಡಿಯ ಬೆಲೆ ಕೇವಲ ರೂ. ೨೫. ಧ್ವನಿಸುರುಳಿ ಬಿಡುಗಡೆ ಬಳಿಕ ಮಾತನಾಡಿದ ಹಂಸಲೇಖ, ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆ. ‘ಪ್ರೇಮಿಸಂ’ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು. ‘ಪ್ರೇಮಿಸಂ’ ಚಿತ್ರದ ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ರತ್ನಜ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೂ ಬಂದಿದ್ದರು. ಯಾವುದೇ ಚಿತ್ರಕ್ಕೆ ಪ್ರಚಾರ ಬಹಳ ಮುಖ್ಯ ಎಂದ ಅವರುಈಚಿತ್ರಕ್ಕಾಗಿ ಸಹಾಯ ಮಾಡಿದ ನಾಲ್ಕು ಮಂದಿ ಗೆಳೆಯರನ್ನು ನೆನೆಸಿಕೊಂಡರು. ಈ ಹಿಂದೆ ಬಂದ ತಮ್ಮ ಎರಡು ಚಿತ್ರಗಳಿಗೆ ಹೋಲಿಸಿದರೆ ‘ಪ್ರೇಮಿಸಂ’ ಚಿತ್ರ ವಿಭಿನ್ನವಾಗಿದೆ. ಕ್ಲೈಮ್ಯಾಕ್ಸ್ ಹಾಡಂತೂ ಅದ್ಭುತವಾಗಿದೆ. ಗುಲಾಬಿ ಕೆನ್ನೆ … ಎಂಬ ಹಾಡನ್ನು ಚೀನಾದ ಸುಮದರ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ ಎಂದು ಚಿತ್ರದ ನಾಯಕಿ ಅಮೂಲ್ಯ ತಿಳಿಸಿದರು.

No Comments to “‘ಪ್ರೇಮಿಸಂ’ ಧ್ವನಿ ಸುರುಳಿ ಬಿಡುಗಡ”

add a comment.

Leave a Reply