‘ರಮ್ಯ-ರಕ್ಷಿತಾ’ಮಂದಿನವಾರಬರ್ತಾರಂತೆ

‘ರಮ್ಯ-ರಕ್ಷಿತಾ’ ಈ ಇಬ್ಬರು ನಟನಾ ಮಣಿಯರು ಯಾರಿಗೆ ಗೊತ್ತಿಲ್ಲ ಹೇಳಿ. ಇವರಿಬ್ಬರನ್ನು ಗೊತ್ತಿರುವವರಿಗೆಲ್ಲಾ ಇವರ ನಡುವಿನ ಕೋಳಿ ಜಗಳವೂ ಅಷ್ಟೇ ಗೊತ್ತು. ರಮ್ಯಾ ಇನ್ನೂ ಚಿತ್ರರಂಗದಲ್ಲಿದ್ದರೆ, ಅತ್ತ ರಕ್ಷಿತಾ ನಿರ್ದೇಶಕ ಪ್ರೇಮ್ ಕೈಹಿಡಿದು ಮಗು ಪಡೆದು ಸುಖವಾಗಿರುವ ಮೂಲಕ ಇವರಿಬ್ಬರ ರಂಪಾಟ ನಿಂತಿದೆ. ಆದರೆ, ಅದೆಲ್ಲ ನಿಂತ ಮೇಲೆ ತೆರೆಯ ಮೇಲೆ ಬರಲಿದ್ದಾರೆ ಮತ್ತೆ ‘ರಮ್ಯ-ರಕ್ಷಿತಾ’!!! ಆಶ್ಚರ್ಯವಾಯಿತೇ…..? ಇದು ಅಂದು ‘ತನನಂ ತನನಂ’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ ರಮ್ಯ ರಕ್ಷಿತಾರಿಗೆ ಸಂಬಂಧಪಟ್ಟ ವಿಚಾರವಂತೂ ಖಂಡಿತಾ ಅಲ್ಲ. ಇದು ಒಂದು ಚಿತ್ರದ ಹೆಸರಷ್ಟೆ. ಚಿತ್ರಕ್ಕೆ ‘ರಮ್ಯ-ರಕ್ಷಿತಾ’ ಅನ್ನೋ ಹೆಸರಿಟ್ಟು ಪ್ರೇಕ್ಷಕರನ್ನು ಸೆಳೆಯುವ ತಂತ್ರವಾಗಿಸಿದ್ದಾರೋ ಗೊತ್ತಿಲ್ಲ. ಒಟ್ಟಾರೆ ಚಿತ್ರವಂತೂ ಹಲವು ಅಡೆತಡೆಗಳನ್ನು ಸಾಂಗವಾಗಿ ಎದುರಿಸಿ ವರ್ಷಗಳ ನಂತರ ಅಂತೂ ತೆರೆಗೆ ಬರಲು ಸಿದ್ಧವಾಗಿದೆ. ‘ರಮ್ಯ-ರಕ್ಷಿತಾ’ ಚಿತ್ರ ಇಬ್ಬರು ಕಾಲೇಜು ಹುಡುಗಿಯರ ಕಥೆ. ಮಾಡೆಲ್ ಆಗುವ ಕನಸನ್ನು ಹೊಂದಿದ ಇಬ್ಬರು ಕಾಲೇಜು ತರುಣಿಯರು ಹೇಗೆ ತಮ್ಮ ಪಾದವನ್ನು ಉದ್ಯಮದಲ್ಲಿಡುತ್ತಾರೆ ಎಂಬ ಎಳೆಯ ಸುತ್ತ ಕಥೆಯನ್ನು ಹೆಣೆಯಲಾಗಿದೆ. ನಿರ್ಮಾಪಕ ಹುತ್ತೇಶ್ ಮಾತನಾಡುತ್ತಾ, ಚಿತ್ರವನ್ನು ನ. ೬ ರಂದು ಬಿಡುಗಡೆಗೊಳಿಸಲಾಗುತ್ತದೆ. ಚಿತ್ರತಂಡ ಯಶಸ್ವಿಯಾಗಿ ಕಾರವಾರ, ಮೈಸೂರು ಹಾಗೂ ಮತ್ತಿತರ ಕೆಲವೆಡೆ ಶೂಟಿಂಗ್ ಮುಗಿಸಿ ಮರಳಿದ್ದು ಸಂಪೂರ್ಣ ಸಿದ್ಧವಾಗಿದೆ ಎಂದು ವಿವರಿಸಿದರು. ೨ ಕೋಟಿ ರೂಪಾಯಿಗಳ ಬಜೆಟ್ನ ಈ ಚಿತ್ರದಲ್ಲಿ ಕೊಡಗಿನ ಪ್ರದೀಪ್ ಮಾಚಯ್ಯ ನಾಯಕನಾದರೆ, ಸಂಗೀತಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರಾ ಶೆಣೈ, ರಮೇಶ್ ಭಟ್, ನಚಿಕೇತ, ಕರಿಬಸವಯ್ಯ, ಲಕ್ಷ್ಮಿದೇವಿ ಮತ್ತಿತರರಿದ್ದಾರೆ.

No Comments to “‘ರಮ್ಯ-ರಕ್ಷಿತಾ’ಮಂದಿನವಾರಬರ್ತಾರಂತೆ”

add a comment.

Leave a Reply

You must be logged in to post a comment.