‘ನೆನಪಿರಲಿ’ ಪ್ರೇಮ್,ಕರೀಷ್ಮಾ ತುಟಿಗೆ ಮುತ್ತಿಕ್ಕಲಿದ್ದಾರೆ !

‘ಲವ್ಲೀ ಸ್ಟಾರ್’ ಹೆಗ್ಗಳಿಕೆಯ ಪ್ರೇಮ್ ಬದಲಾಗುತ್ತಿದ್ದಾರೆ. ಹೌದು, ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಈಗ ಬದಲಾಗಿದ್ದಾರೆ. ಹೊಸ ಹೇರ್ಸ್ಟೈಲ್ ಬಂದಿದೆ. ದೇಹ ಕಟ್ಟುಮಸ್ತಾಗಿದೆ. ಅಷ್ಟೇ ಅಲ್ಲ, ಪಕ್ಕದ್ಮನೆ ಹುಡುಗನಂತಿದ್ದ ಅವರ ಇಮೇಜ್ ಕೂಡಾ ಕೊಂಚ ಬದಲಾಗಿದೆಯಂತೆ. ಏನೇ ಇರಲಿ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಪ್ರೇಮ್ ಮುತ್ತಿಕ್ಕುವ ದೃಶ್ಯಕ್ಕೆ ಒಪ್ಪಿದ್ದಾರೆ ಅನ್ನೋದೇ ಸುದ್ದಿ. ಹೌದು. ಪ್ರೇಮ್ ತನ್ನ ಮುಂಬರುವ ಚಿತ್ರದಲ್ಲಿ ಬಾಲಿವುಡ್ನಿಂದ ಕನ್ನಡಕ್ಕೆ ಹಾರಿ ಬಂದ ಕರೀಷ್ಮಾ ಟನ್ನಾಳ ತುಟಿಗೆ ತುಟಿ ಸೇರಿಸಿ ಮುತ್ತು ಕೊಡಲಿದ್ದಾರೆ. ಬಾಲಿವುಡ್ನ ಹೆದರಿಸುವ ನಿರ್ದೇಶಕ ಎಂಬ ಹಣೆಪಟ್ಟಿ ಹೊತ್ತ ರಾಂಗೋಪಾಲ್ ವರ್ಮಾರ ಗರಡಿಯಲ್ಲಿ ಪಳಗಿ ಬಂದ ನಿರ್ದೇಶಕ ರವೀಂದ್ರ ಅವರ ಮುಂಬರುವ ಚಿತ್ರದಲ್ಲಿ ಪ್ರೇಮ್ ನಾಯಕ. ಗಂಡಹೆಂಡತಿ ಖ್ಯಾತಿಯ ಸಂಜನಾ ಹಾಗೂ ಬಾಲಿವುಡ್ನ ಕರೀಷ್ಮಾ ಟನ್ನಾ ಎಂಬ ಹೊಸಮುಖಈಚಿತ್ರದ ನಾಯಕಿಯರು. ಚಿತ್ರದಲ್ಲಿತುಟಿಗೆತುಟಿಸೇರಿಸುವಕಿಸ್ಗೆ ಯಾವ ಮುಜುಗರವೂ ಇಲ್ಲದೆ ಒಪ್ಪಲು ಕಾರಣವಾದ್ರೂ ಏನು ಎಂದರೆ ಪ್ರೇಮ್ ಥಟ್ಟನೆ ಉತ್ತರಿಸೋದು ಹೀಗೆ. ಕರೀಷ್ಮಾ ಟನ್ನಾ ಬಾಲಿವುಡ್ ನಟಿ, ಬಾಲಿವುಡ್ ಮೂಲವಿರುವವರು ಇಂಥದ್ದಕ್ಕೆಲ್ಲ ನಾಚಿಕೆ ಪಟ್ಟುಕೊಳ್ಳುವುದಿಲ್ಲ. ಪರಿಸ್ಥಿತಿಯೊಂದಿಗೆ ಬೇಗನೆ ರಾಜಿ ಮಾಡಿಕೊಳ್ಳುತ್ತಾರೆ. ಆಕೆ ಚುಂಬನಕ್ಕೆ ಒಪ್ಪಿದ್ದಾಳೆ. ಆದರೆ ಪಾತ್ರಕ್ಕೆ ಅಗತ್ಯವಿದ್ದರೆ ಚುಂಬಿಸುವುದು ಅಶ್ಲೀಲವೇನೂ ಅಲ್ಲ. ಹಾಗೆ ನೋಡಿದರೆ, ಕನ್ನಡ ಸಿನಿಮಾ ಉಳಿದ ಭಾಷಾ ಸಿನಿಮಾಕ್ಕಿಂತ ಬೋಲ್ಡ್ ಕಡಿಮೆಯೇ. ಬೇರೆ ಭಾಷಾ ಚಿತ್ರಗಳು ನಮ್ಮಿಂದ ಎಷ್ಟೋ ಬೋಲ್ಡ್ ಆಗಿವೆ. ಅಲ್ಲದೆ, ಈ ಚಿತ್ರದಲ್ಲಿ ಮೊಲದ ರಾತ್ರಿಯ ಸನ್ನಿವೇಶವಿದೆ. ಆ ರ ಾ ತಿ ್ರ ¿ ು ಲಿ ್ಲ ರ ೆ ೂ ವ ೂ ್ಯ ಂ ಟಿ ಕ ್ ದ ೃ ಶ ್ಯ ವಿ ರ ದಿ ದ ್ದ ರ ೆ ಅಭಾಸವಾಗುತ್ತದೆ. ಹಾಗಾಗಿ ಅಲ್ಲೊಂದು ತುಟಿಗೆ ತುಟಿ ಸೇರಿಸುವ ಪ್ರಥಮ ಚುಂಬನವಿದೆ. ಹಾಗಾಗಿ ಇಂತಹ ಅ ಗ ತ ್ಯ ವಿ ರ ು ವ ಸನ್ನಿವೇಶದಲ್ಲಿ ತುಟಿಗೆ ನಡೆಯಬೇಕಿದೆಎಂದರು.ಚಿತ್ರದಬಗ್ಗೆಹೇಳಿ ಅಂದರೆ, ಪ್ರೇಮ್ ಕಥೆಯ ಸುಳಿಯನ್ನು ಬಿಟ್ಟುಕೊಡಲಿಲ್ಲ. ಈಗಿನ ಕಾಲಕ್ಕೆ ತುಂಬ ಹತ್ತಿರವಿರುವ ಲವ್ಸ್ಟೋರಿ ಇದು. ಈಗಿನ ಯುವ ಜನಾಂಗ ಪ್ರೀತಿಯಲ್ಲಿ ಹೇಗೆ ಬೀಳುತ್ತಾರೆ ಎಂಬುದೇ ಚಿತ್ರದ ಅಂಶ ಎಂದರು. ಪ್ರೇಮ್ ಕೈಯಲ್ಲಿ ಇನ್ನೂ ಎರಡು ದೊಡ್ಡ ಬ್ಯಾನರ್ನ ಚಿತ್ರಗಳಿವೆ. ಜೊತೆಗಾರ ಹಾಗೂ ಜನುಮ ಜನುಮದಲ್ಲೂ ಜೊತೆಗಾರ ಚಿತ್ರೀಕರಣ ಪೂರ್ಣಗೊಳಿಸಿ ದರೂ, ಪ್ರೇಮ್ ಜತೆಗೆ ನಿರ್ಮಾಪಕರ ಜಗಳದಿಂದಾಗಿ ತೆವಳುತ್ತಲೇ ಇದೆ. ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಅದ್ಯಾಕೆ ಹೀಗಾಗಿದೆ ಜೊತೆಗಾರನ ಕಥೆ ಎಂದು ಪ್ರೇಮ್ ಬಳಿಯಲ್ಲೇ ಕೇಳಿದರೆ, ನಿರ್ಮಾ ಪಕರ ಅಸಡ್ಡೆ , ಎಂದು ನಾನು ಹೇಳದೆ ವಿಧಿ ಯೇ ಇಲ್ಲ. ನಾನು ಅಸಹಾಯಕ. ಏನೂ ಮಾಡಲಾರೆ, ಆದರೆ ಇದರಿಂದ ನಾನು ಈ ಚಿತ್ರೋದ್ಯಮದಲ್ಲಿ ಉತ್ತಮ ಪಾಠ ಕಲಿತೆ ಎಂದಷ್ಟೇ ಹೇಳಬಲ್ಲೆ ಎಂದರು ಪ್ರೇಮ್. ಪ್ರೇಮ್ ಅವರ ‘ಪ್ರಥಮ’ ಚುಂಬನ ಮತ್ತೆ ‘ದಂತಭಗ್ನ’ ವಾಗದಿರಲಿ ಎಂದೇ ಹಾರೈಸೋಣ.

No Comments to “‘ನೆನಪಿರಲಿ’ ಪ್ರೇಮ್,ಕರೀಷ್ಮಾ ತುಟಿಗೆ ಮುತ್ತಿಕ್ಕಲಿದ್ದಾರೆ !”

add a comment.

Leave a Reply

You must be logged in to post a comment.