ಅರಳಿದ ಸೂರ್ಯಕಾಂತಿ ಮಾರುಕಟ್ಟೆಗೆ ಸಿದ್ಧ

ಆ ದಿನಗಳು ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಎರಡನೇ ಚಿತ್ರ ‘ಸೂರ್ಯಕಾಂತಿ’ ಅರಳುವ ಸಮಯ ಹತ್ತಿರ ಬಂದಿದೆ. ಅವಿಘ್ನ ಮೀಡಿಯ ವತಿಯಿಂದ ಎಂ. ವಾಸು ಅರ್ಪಿಸುವ, ಬಿ.ಎನ್. ಸುಜಾತ ನಿರ್ಮಿಸಿರುವ ಸೂರ್ಯಕಾಂತಿ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಚಿತ್ರದ ನಾಯಕ ಚೇತನ್ ಹಾಗೂ ನಾಯಕಿ ರೆಜೀನಾ. ಇತರ ಮುಖ್ಯ ಪಾತ್ರಗಳಲ್ಲಿ ತಮಿಳಿನ ಖ್ಯಾತ ನಟ ನಾಸಿರ್, ಕನ್ನಡದ ರಾಮಕೃಷ್ಣ, ಕಿಶೋರಿ ಬಲ್ಲಾಳ, ಆಸಿಫ್ ಹಾಗೂ ರಾಮ್ ಗೋಪಾಲ ವರ್ಮಾ ಗರಡಿಯಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವಗಣೇಶ್ಯಾದವ್ ಇದ್ದಾರೆ.ಈಚಿತ್ರಕ್ಕೆ ಸಂಗೀತನೀಡಿರುವವರು ಇಳಯರಾಜ. ಹಾಡುಗಳನ್ನು ಯೋಗರಾಜ್ ಭಟ್ ಬರೆದಿದ್ದಾರೆ. ರವಿವರ್ಮಾ ಅವರ ಸಾಹಸ ದೃಶ್ಯಗಳು ಹಾಗೂ ರಾಮಕೃಷ್ಣ ಪ್ರಸಾದನ ನೀಡಿದ್ದಾರೆ. ಪ್ರೇಮ, ಸಾಹಸ, ಘರ್ಷಣೆ, ಕೌಂಟುಬಿಕ ವಾತ್ಸಲ್ಯ ಈ ಎಲ್ಲಾ ಗುಣಗಳೂ ಕಾಣಿಸಿಕೊಳ್ಳುವ ಸೂರ್ಯಕಾಂತಿಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದವರು ಕನ್ನಡದ ಶ್ರೇಷ್ಠ ಸಾಹಿತಿ ಕೆ.ವೈ. ನಾರಾಯಣಸ್ವಾಮಿ. ರಷ್ಯಾ ಗಡಿಗೆ ಅಂಟಿಕೊಂಡಿರುವ ಉಜ್ಬೇಕಿಸ್ತಾನ, ಉತ್ತರ ಭಾರತದ ಉತ್ತರಾಂಚಲ ಪರ್ವತ ಶ್ರೇಣಿ, ಗೋವಾ, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಸೂರ್ಯಕಾಂತಿ ಚಿತ್ರೀಕರಣ ನಡೆದಿದೆ. ಸುಮಾರು ೨೦ ದಿನಗಳ ಕಾಲ ಸುದೀರ್ಘ ಚಿತ್ರೀಕರಣ ನಡೆಸಿ ಕಳೆದ ವಾರಈಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿತು. ಅತ್ಯುತ್ತಮ ಚಿತ್ರಕಥೆ, ಇಂಪಾದ ಸಂಗೀತ, ಪಕ್ವವಾದ ನಟರು ಹಾಗೂ ನುರಿತ ತಂಡ ಹೊಂದಿರುವ ಸೂರ್ಯಕಾಂತಿ ಚಿತ್ರದ ಡಬ್ಬಿಂಗ್ಈಗ ಮುಗಿದಿದ್ದು, ಅತಿ ಶೀಘ್ರದಲ್ಲೇಈಚಿತ್ರ ತೆರೆ ಕಾಣಲಿದೆ.

No Comments to “ಅರಳಿದ ಸೂರ್ಯಕಾಂತಿ ಮಾರುಕಟ್ಟೆಗೆ ಸಿದ್ಧ”

add a comment.

Leave a Reply

You must be logged in to post a comment.