ಜಗದೀಶ್ಶೆಟ್ಟರ್ಗೆಭಿನ್ನಮತೀಯನಾಯಕತ್ವ

ಬೆಂಗಳೂರು : ಬಳ್ಳಾರಿ ಗಣಿಧಣಿಗಳು ಹಾಗೂ ಮುಖ್ಯಮಂತ್ರಿ ಯಡಿ ಯೂರಪ್ಪ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಪರಸ್ಪರರ ರಾಜಕೀಯ ಧಮನಕ್ಕೆ ಸಮರ ಸಾರಿದ್ದಾರೆ. ರೆಡ್ಡಿ ಸಚಿವತ್ರಯರ ವಜಾಕ್ಕೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರೆ, ನಾಯಕತ್ವದ ಬದಲಾವಣೆಗೆ ರೆಡ್ಡಿ ಗುಂಪು ಹಠ ಹಿಡಿದಿದೆ. ಇದರ ಲಾಭ ಪಡೆಯಲು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಯತ್ನಿಸಿದ್ದು, ಶಾಸಕರ ಅಭಿಪ್ರಾಯ ಪಡೆಯಲು ಗುರುವಾರ ಗೌಪ್ಯ ಸಭೆ ಕರೆದಿದ್ದಾರೆ. ಆಂತರಿಕವಾಗಿ ನಡೆಯುತ್ತಿದ್ದ ಭಿನ್ನ ಮತ ಈಗ ಬೀದಿಗೆ ಬಂದಿದೆ. ರೆಡ್ಡಿ ಸಹೋದರರು ಬಳ್ಳಾರಿಯ ಸಿರಗುಪ್ಪ ದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೂ ತರದೆ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗೆ ಅಡಿಗಲ್ಲನ್ನಿಟ್ಟರು. ಇದರಿಂದ ಕೆರಳಿದ ಮುಖ್ಯಮಂತ್ರಿಗಳು ಗಣಿರೆಡ್ಡಿಗಳ ಆಪ್ತರಾಗಿದ್ದ ಬಳ್ಳಾರಿ ಜಿಲ್ಲೆಯ ಎಸ್.ಪಿ. ಸೀಮಂತ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಮುತ್ತಯ್ಯ, ಜಿಲ್ಲಾಧಿಕಾರಿ ಶಿವಪ್ಪ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪೆರುಮಾಳ್ ಅವರು ಗಳನ್ನು ದಿಢೀರನೇ ವರ್ಗಾವಣೆಮಾಡಿದ್ದಾರೆ. ಇದರಿಂದಾಗಿ ಸರ್ಕಾರದಲ್ಲಿ ಯಾರು ಹೆಚ್ಚು ಎನ್ನುವ ಸ್ಪರ್ಧೆ ಎರಡು ಗುಂಪುಗಳ ನಡುವೆ ನಡೆಯುತ್ತಿದೆ. ಈ ನಡುವೆ ಬಿ.ಜೆ.ಪಿ.ಯ ರಾಜ್ಯ ಉಸ್ತು ವಾರಿ ವಹಿಸಿರುವ ಅರುಣ್ ಜೇಟ್ಲಿ, ಮಧ್ಯಾಹ್ನ ನಗರಕ್ಕಾಗಮಿಸಿ ಭಿನ್ನ ಮತಕ್ಕೆ ತೇಪೆ ಹಚ್ಚಲು ವಿಫಲ ಪ್ರಯತ್ನ ನಡೆಸಿ ದರು. ಗಣಿರೆಡ್ಡಿಗಳು, ಯಡಿಯೂರಪ್ಪ ಮತ್ತು ರೇಣುಕಾಚಾರ್ಯ ಬಣಗಳಿಂದ ಮಾಹಿತಿ ಕಲೆ ಹಾಕಿದ ಜೇಟ್ಲಿ, ಬಂಡಾಯ ಶಮನಕ್ಕೆ ಹರಸಾಹಸ ಪಡುತ್ತಿದ್ದಾರೆ. ಅಚ್ಚರಿ ಬೆಳವಣಿಗೆಯೊಂದರಲ್ಲಿ ಭಿನ್ನಮತೀಯ ಬಣದ ನಾಯಕತ್ವ ವಹಿ ಸಲು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ನಿರ್ಧರಿಸಿದ್ದು, ಶಾಸಕರ ಅಭಿ ಪ್ರಾಯ ಕೇಳಲು ಗುರುವಾರ ಔತಣ ಕೂಟ ಕರೆದಿದ್ದಾರೆ. ಸುತ್ತೂರು ಮಠಕ್ಕೆ ತುರ್ತು ಭೇಟಿ ಕೊಟ್ಟ ಜಗದೀಶ್ ಶೆಟ್ಟರ್, ಒಂದು ಗಂಟೆಗೂ ಹೆಚ್ಚು ಕಾಲ ಸುತ್ತೂರು ಶ್ರೀಗಳೊಂದಿಗೆ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎಲ್ಲವನ್ನು ಕಾದು ನೋಡಿ. ನನ್ನ ಕೈಯಲ್ಲಿ ಏನೂ ಇಲ್ಲ. ಎಲ್ಲವೂ ದೇವರ ಕೈಯ ಲ್ಲಿದೆ ಎಂದು ಮಾರ್ಮಿಕವಾಗಿ ಮಾತ ನಾಡಿದರು. ಈ ಸುದ್ದಿ ತಿಳಿದ ಯಡಿಯೂರಪ್ಪ ಅವರು, ಗೃಹ ಸಚಿವ ವಿ.ಎಸ್. ಆಚಾರ್ಯ ಹಾಗೂ ಸುರೇಶ್ ಕುಮಾರ್ ಅವರು ಗಳನ್ನು ಜಗದೀಶ್ ಶೆಟ್ಟರ್ ಬಳಿಗೆ ಸಂಧಾನಕ್ಕೆ ಕಳುಹಿಸಿದರಾದರೂ, ಮಾತುಕತೆ ವಿಫಲವಾಯಿತು. ರೆಡ್ಡಿ ಸಹೋದರರು ಹಚ್ಚಿರುವ ಬಂಡಾಯದ ಕಿಚ್ಚು ಲಿಂಗಾಯಿತ ಮಠ ಗಳಿಗೂ ಹಬ್ಬಿದ್ದು, ಯಡಿಯೂರಪ್ಪ ಅವ ರನ್ನು ಉಳಿಸಬೇಕೇ? ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡ ಬೇಕೇ? ಎಂಬ ಬಗ್ಗೆ ಚರ್ಚಿಸುತ್ತಿವೆ.

No Comments to “ಜಗದೀಶ್ಶೆಟ್ಟರ್ಗೆಭಿನ್ನಮತೀಯನಾಯಕತ್ವ”

add a comment.

Leave a Reply

You must be logged in to post a comment.