ರೇವಣ್ಣ ಡಿ.ಸಿ.ಎಂ. ಆಗುತ್ತಾರಂತೆ ಹೌದಾ?

ರಾಜ್ಯದ ರಾಜಕಾರಣ ಕುತೂಹಲ ಕಾರಿ ತಿರುವು ಪಡೆಯುತ್ತಿದೆ. ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ರೆಡ್ಡಿ ಸಹೋದರರು ಅಸಮಾಧಾನ ಗೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದಾಗ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಯಡಿಯೂರಪ್ಪ ಹೇಳುತ್ತ ಬಂದಿದ್ದರು. ಆದರೆ ರಾಜ್ಯ ಬಿ.ಜೆ.ಪಿ.ಯಲ್ಲಿ ಬಿಕ್ಕಟ್ಟು ತೀವ್ರವಾಗಿಯೇ ಇದೆ ಎಂಬುದು ಕಳೆದ ಎರಡು ದಿನಗಳ ಬೆಳವಣಿಗೆಯಿಂದ ಗೊತ್ತಾಗಿದೆ. ರೆಡ್ಡಿಗಳು ಸವಾಲು ಹಾಕು ತ್ತಿದ್ದಾರೆ. ಅವರ ಬಾಲ ಕತ್ತರಿಸಲು ಬಳ್ಳಾರಿಯ ಆಯಕಟ್ಟಿನ ಸ್ಥಾನದಲ್ಲಿದ್ದ ಅಧಿ ಕಾರಿಗಳನ್ನು ಯಡಿಯೂರಪ್ಪ ಸಾಮೂ ಹಿಕವಾಗಿಯೇ ವರ್ಗಾವಣೆ ಮಾಡಿದ್ದಾರೆ. ಹಾಗೆ ನೋಡಿದರೆ ಈ ಬಿಕ್ಕಟ್ಟು ಅನಿರೀಕ್ಷಿತವಾದುದೇನೂ ಅಲ್ಲ. ಅತ್ಯಲ್ಪ ಅವಧಿಯಲ್ಲಿ ಅಪಾರ ಪ್ರಮಾಣದ ಸಂಪತ್ತು ಕ್ರೋಢೀಕರಿಸಿರುವ ಬಳ್ಳಾರಿಯ ರೆಡ್ಡಿಗಳು, ಹಣದ ಬಲದಿಂದಲೇ ರಾಜ್ಯದ ರಾಜಕಾರಣದಲ್ಲಿ ಮಹತ್ವದ ಸ್ಥಾನ ಪಡೆ ದಿದ್ದಾರೆ. ಬಿ.ಜೆ.ಪಿ.ಯ ಗೆಲುವಿನಲ್ಲಿ ರೆಡ್ಡಿ ಗಳ ದುಡ್ಡು ದೊಡ್ಡ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಪ ರೇಷನ್ ಕಮಲದ ಯಶಸ್ಸಿನಲ್ಲೂ ರೆಡ್ಡಿಗಳದೇ ಪ್ರಮುಖ ಪಾತ್ರ. ಮಹತ್ವಾಕಾಂಕ್ಷಿಗಳಾದ ರೆಡ್ಡಿಗಳು ಕರ್ನಾಟಕದ ರಾಜಕಾರಣದ ಮೇಲೆ ಪ್ರಭುತ್ವ ಸ್ಥಾಪಿಸುವ ಹವಣಿಕೆಯಲ್ಲಿದ್ದರು. ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಅವರು ಯಡಿ ಯೂರಪ್ಪ ಸಂಪುಟದಲ್ಲಿ ಸಚಿವರಾಗಿ ದ್ದರೂ, ಅವರು ಒಂದು ರೀತಿಯಲ್ಲಿ ಭಿನ್ನ ಮತೀಯರಂತೆಯೇ ನಡೆದುಕೊಳ್ಳುತ್ತಾ ಬಂದಿದ್ದರು. ತಮ್ಮ ಬಳಗಕ್ಕೆ ಉಪಮುಖ್ಯ ಮಂತ್ರಿ ಸ್ಥಾನಕ್ಕಾಗಿಯೂ ಪಟ್ಟು ಹಿಡಿ ದಿದ್ದರು. ಸಚಿವ ಸಂಪುಟದ ಸಭೆಗಳಲ್ಲೂ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರ ಲಿಲ್ಲ. ಯಡಿಯೂರಪ್ಪ ಅವರ ವಿರುದ್ಧ ತಿರುಗಿ ಬೀಳಲು ಅವರು ಒಂದು ನೆಪಕ್ಕಾಗಿ ಕಾಯುತ್ತಿದ್ದಾರಷ್ಟೇ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಅದಿರಿನ ಲಾರಿಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲು ಯಡಿಯೂರಪ್ಪ ಕೈಗೊಂಡ ನಿರ್ಧಾರವು ಭಿನ್ನಮತ ಸೊ–ಟ ಗೊಳ್ಳಲು ಒಂದು ನೆಪ ಆಯಿತು. ಈಹಿಂದೆಯೇಹಿರಿಯಸಚಿವಈಶ್ವರಪ್ಪ ಅವರು ಯಡಿಯೂರಪ್ಪ ಕಾರ್ಯ ಶೈಲಿಯ ಬಗ್ಗೆ ಅಸಮಾಧಾನಗೊಂಡಿ ದ್ದರು. ತಮ್ಮನ್ನು ನಿಷ್ಕಿೃಯಗೊಳಿಸಲು ವಿಧಾನಸಭಾಧ್ಯಕ್ಷರ ಹುದ್ದೆಯಲ್ಲಿ ಕಟ್ಟಿ ಹಾಕಲಾಯಿತೆಂದು ಜಗದೀಶ್ ಶೆಟ್ಟರ್ ಆಕ್ರೋಶಗೊಂಡಿದ್ದಾರೆ. ಶೋಭಾ ಕರಂದ್ಲಾಜೆಗೆ ಯಡಿಯೂರಪ್ಪ ನೀಡು ತ್ತಿರುವ ವಿಪರೀತ ಪ್ರಾಮುಖ್ಯತೆಯಿಂದ ಅನೇಕ ಸಚಿವರು ಹಾಗೂ ಶಾಸಕರು ರೋಸಿ ಹೋಗಿದ್ದರು. ಯಡ್ಡಿ ಮೇಲೆ ಕೋಪಗೊಂಡಿದ್ದ ಉತ್ತರ ಕರ್ನಾಟಕದ ಪ್ರಮುಖ ಬಿ.ಜೆ.ಪಿ. ನಾಯಕ ಬಸವರಾಜ ಯತ್ನಾಳ್ ಅವರು ಸೇಡು ತೀರಿಸಿಕೊಳ್ಳುವ ಸಮಯಕ್ಕಾಗಿ ಕಾಯುತ್ತಿದ್ದರು. ಇಂತಹ ಹಲವು ಅಂಶ ಗಳು ಸೇರಿ ಬಿ.ಜೆ.ಪಿ. ಬಿಕ್ಕಟ್ಟನ್ನು ಉಲ್ಬಣ ಗೊಳಿಸಿವೆ. ಇದು ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳಿಲ್ಲ. ಲಿಂಗಾಯಿತರು ಅಸಮಾಧಾನ ಗೊಳ್ಳಬಾರದೆಂಬ ತಂತ್ರಗಾರಿಕೆಯಿಂದ ಭಿನ್ನಮತೀಯ ಗುಂಪಿನವರು, ಜಗದೀಶ್ ಶೆಟ್ಟರ್ ಅವರನ್ನು ಮುಂದೆ ತಂದಿಟ್ಟು ಕೊಂಡಿದ್ದಾರೆ. ಯಡ್ಡಿ ಸ್ಥಾನಕ್ಕೆ ಶೆಟ್ಟರ್ ತರು ವುದಕ್ಕೆ ಅವರು ಪ್ರಯತ್ನ ನಡೆಸಿದ್ದಾರೆ. ಈ ಪ್ರಯತ್ನಕ್ಕೆ ಯಶ ಸಿಗದಿದ್ದರೆ ರೆಡ್ಡಿ ಗುಂಪು ಗಳ ಪಕ್ಷದಿಂದ ಆಚೆ ಹೋಗಲು ತಯಾ ರಾಗಿದೆ. ರೆಡ್ಡಿ ಗುಂಪಿನಲ್ಲಿ ಗಟ್ಟಿಯಾಗಿ ೧೭ ಶಾಸಕರು ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಈಶಾಸಕರು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ತಯಾ ರಾಗಿದ್ದಾರೆ. ದಳ (ಎಸ್)ನ ಬೆಂಬಲವನ್ನೂ ಕೋರಿದ್ದಾರೆ.ಈಬೆಳವಣಿಗೆಗಳನ್ನು ಸೂಕ್ಷ್ಮ ವಾಗಿ ಅವಲೋಕಿಸುತ್ತಿರುವ ಕಾಂಗ್ರೆಸ್ ಪಕ್ಷ , ಬಿ.ಜೆ.ಪಿ. ಸರ್ಕಾರವನ್ನು ತಾನು ಬೀಳಿಸಿದೆ ಎಂಬ ಆಪಾದನೆ ಬರಬಾರ ದೆಂದಷ್ಟೇ ಎಚ್ಚರಿಕೆ ವಹಿಸುತ್ತಿದೆ. ದಳ (ಎಸ್)ನ ಜೊತೆ ಸೇರಲು ಕಾಂಗ್ರೆಸ್ನ ಹಲವು ನಾಯಕರ ವಿರೋಧ ಇರುವುದರಿಂದ ರೆಡ್ಡಿಗಳ ಈ ಯತ್ನಕ್ಕೆ ಯಶಸ್ಸು ಸಿಗುವುದು ಕಷ್ಟ ಎಂದೇ ಕಾಣು ತ್ತದೆ. ಹಿಂದೆ ಬಿ.ಜೆ.ಪಿ. ಜೊತೆ ಮುಖ್ಯ ಮಂತ್ರಿ ಆಗಿದ್ದ ಹೆಚ್.ಡಿ. ಕುಮಾರ ಸ್ವಾಮಿ, ಈಬಾರಿ ಬಿ.ಜೆ.ಪಿ. ಗಿಂತ ಕಾಂಗ್ರೆಸ್ ಜೊತೆ ಸೇರುವುದೇ ಸೂಕ್ತ ಎಂದು ಅಭಿಪ್ರಾಯ ಹೊಂದಿದ್ದಾರೆ. ಅವರು ಡಿಸೆಂಬರ್ನಲ್ಲಿ ಕೇಂದ್ರದ ಮಂತ್ರಿ ಆಗಲಿದ್ದಾರೆಂಬ ವದಂತಿ ಕೆಲ ದಿನಗಳ ಹಿಂದೆಯೇ ಹಬ್ಬಿತ್ತು. ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಸಿದ್ಧರಿಲ್ಲ ಎಂದೇ ಹೇಳ ಲಾಗುತ್ತಿದೆ.

No Comments to “ರೇವಣ್ಣ ಡಿ.ಸಿ.ಎಂ. ಆಗುತ್ತಾರಂತೆ ಹೌದಾ?”

add a comment.

Leave a Reply

You must be logged in to post a comment.