ಬಿ.ಜೆ.ಪಿ. ಭಿನ್ನಮತ ಶಮನಕ್ಕೆ ಕಸರತ್ತು

ಬೆಂಗಳೂರು : ಬಿ.ಜೆ.ಪಿ. ಆಂತರಿಕ ಭಿನ್ನಮತ ಶಮನಗೊಂಡಿಲ್ಲ. ಗುರು ವಾರ ದಿನವಿಡೀ ಭಿನ್ನಮತ ಶಮನಕ್ಕಾಗಿ ತೀವ್ರ ಕಸರತ್ತು ನಡೆಯಿತು. ಆರ್.ಎಸ್.ಎಸ್. ಹಾಗೂ ಹೈ ಕಮಾಂಡ್ ರಾಜಿಸೂತ್ರಕ್ಕೆ ಯಶಸ್ಸು ಸಿಕ್ಕಿಲ್ಲ. ಜಗದೀಶ್ ಶೆಟ್ಟರ್ ನಿವಾಸದಲ್ಲಿ ಭಿನ್ನಮತೀಯ ಶಾಸಕರು ಪುನಃ ಸಭೆ ನಡೆಸಿದ್ದಾರೆ. ಆರ್.ಎಸ್.ಎಸ್. ಪ್ರಮುಖರು, ಕೇಂದ್ರದಿಂದ ಆಗಮಿಸಿರುವ ಬಿ.ಜೆ.ಪಿ. ವರಿಷ್ಠ ಅರುಣ್ ಜೇಟ್ಲಿ ಖಾಸಗಿ ಹೋಟೆಲ್ನಲ್ಲಿ ರೆಡ್ಡಿ ಬಣ ಹಾಗೂ ಸಿ.ಎಂ. ಬಣದ ಶಾಸಕರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಿ ಸೂತ್ರಗಳು ಫಲ ನೀಡಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಮುಂದಿ ಡಲಾಯಿತು. ಶೆಟ್ಟರ್ ಇದನ್ನು ನಯ ವಾಗಿಯೇ ತಿರಸ್ಕರಿಸಿದ್ದಾರೆ. ನಂತರ ಶೆಟ್ಟರ್ ನಿವಾಸದಲ್ಲಿ ಬೆಳವಣಿಗೆಯ ಕುರಿತು ಶಾಸಕರ ಗುಂಪು ಚರ್ಚೆ ನಡೆಸಿತು. ಈ ಮಧ್ಯೆ ಕಂದಾಯ ಸಚಿವ ಕರು ಣಾಕರ ರೆಡ್ಡಿ ಬೆಂಗಳೂರಿನ ಕೇಶವ ಕೃಪಾದಲ್ಲಿ ಜೇಟ್ಲಿ ಹಾಗೂಆರ್.ಎಸ್.ಎಸ್. ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಕರುಣಾಕರ ರೆಡ್ಡಿ ಅವರು ನಾಯ ಕತ್ವ ಬದಲಾವಣೆಗೆ ಬಿಗಿ ಪಟ್ಟು ಹಿಡಿ ದಿದ್ದಾರೆ. ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ತಮ್ಮ ನಿಲುವನ್ನು ಬದ ಲಿಸುತ್ತಲೇ ಇದ್ದಾರೆ. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಗೌರವವಿದೆ ಎಂದು ಹೇಳಿದ್ದ ಜನಾರ್ಧನ ರೆಡ್ಡಿ ಪುನಃ ಸಂಜೆ ನಾಯಕತ್ವ ಬದಲಾವಣೆಯಾಗ ಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಗೊಂದಲ ಮುಂದು ವರೆದಿದೆ. ಈ ನಡುವೆ ಸಾರಿಗೆ ಸಚಿವ ಅಶೋಕ್ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಂಧಾನ ನಡೆಸಿದ್ದಾರೆ. ಸಂಧಾ ನದ ವಿವರವನ್ನು ಅರುಣ್ ಜೇಟ್ಲಿ ಅವ ರಿಗೆ ತಿಳಿಸಿದ್ದಾರೆ. ರಾಜಿ ಸಂಧಾನ ಪ್ರಯೋಜನವಾಗಿಲ್ಲ.

No Comments to “ಬಿ.ಜೆ.ಪಿ. ಭಿನ್ನಮತ ಶಮನಕ್ಕೆ ಕಸರತ್ತು”

add a comment.

Leave a Reply

You must be logged in to post a comment.