ನಾಯಕತ್ವ ಬದಲಾವಣೆಗೆಹೈಕಮಾಂಡ್ಸ್ಪಷ್ಟ ನಕಾರ

ನವದೆಹಲಿ:ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಿ.ಜೆ.ಪಿ. ಹೈಕಮಾಂಡ್ ಸ್ಪಷ್ಟವಾಗಿ ನಿರಾಕರಿಸಿದೆ. ಭಿನ್ನಮತ ಶಮನಕ್ಕಾಗಿ ಪರಿಹಾರ ಸೂತ್ರವನ್ನು ರಚಿಸಲಾಗಿದೆ. ಇದರಂತೆ ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಕಡಿಮೆಗೊಳಿಸಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈ ಬಿಡುವಂತೆಯೂ ಹೈ ಕಮಾಂಡ್ ತಿಳಿಸಿದೆ. ಪಕ್ಷದ ಹಿರಿಯ ಮುಖಂಡ ಆಡ್ವಾಣಿ ನಿವಾಸದಲ್ಲಿಈಕುರಿತು ಪಕ್ಷದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಈ ಸಭೆಯಲ್ಲಿ ರಾಜನಾಥ್ಸಿಂಗ್, ಅನಂತ ಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತಿತರರು ಹಾಜರಿದ್ದರು. ಸಭೆಯ ನಂತರ ಸುದ್ದಿಗಾರರಿಗೆ ವಿವರ ಒದಗಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಸೋಮವಾರ ಪ್ರವಾ ಸೋದ್ಯಮ ಸಚಿವ ಜನಾರ್ಧನ ರೆಡ್ಡಿ ದೆಹಲಿಗೆ ದೌಡಾಯಿಸಿದರು. ಅವರು ಅರುಣ್ ಜೇಟ್ಲಿ ಮತ್ತು ಅನಂತ ಕುಮಾರ್ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ನಾಯಕತ್ವ ಬದಲಾವಣೆಯಾಗಲೇ ಬೇಕೆಂದು ಜನಾರ್ಧನ ರೆಡ್ಡಿ ಬಿಗಿ ಪಟ್ಟು ಹಿಡಿದಿದ್ದಾರೆ. ಜನಾರ್ಧನ ರೆಡ್ಡಿ, ಈ ಕುರಿತು ಪ್ರತಿ ಕ್ರಿಯಿಸಿ, ಕರ್ನಾಟಕದ ಭವಿಷ್ಯ ಬಿ.ಜೆ.ಪಿ. ನಾಯಕರ ಬಳಿ ಇದೆ. ಭವಿಷ್ಯ ದಲ್ಲಿ ಉತ್ತಮ ನಾಯಕರೊಬ್ಬರನ್ನು ನಿಯೋ ಜಿಸುವಂತೆ ಹೇಳಿದ್ದಾರೆ. ದೆಹಲಿಯಲ್ಲಿ ಸಚಿವ ಡಾ।। ವಿ.ಎಸ್.ಆಚಾರ್ಯ, ಧನಂಜಯ ಕುಮಾರ್ ಮತ್ತಿತರರು ಇದ್ದಾರೆ. ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಸದಾನಂದ ಗೌಡ ಕೂಡ ರೆಡ್ಡಿ ಸಹೋದರ ರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸದಾನಂದಗೌಡ ಮಾತನಾಡಿ, ಅನಂತಕುಮಾರ್ಹಾಗೂಯಡಿಯೂರಪ್ಪ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದು ಮಹತ್ವದ ಬೆಳವಣಿಗೆ ಯೊಂದರಲ್ಲಿ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಗೃಹ ಸಚಿವ ಡಾ।। ವಿ.ಎಸ್.ಆಚಾರ್ಯ, ರಾಜ್ಯ ಪಾಲರನ್ನು ಭೇಟಿಯಾದರು. ಸರ್ಕಾ ರದ ಭದ್ರತೆಗೆ ಯಾವುದೇ ಅಪಾಯ ವಿಲ್ಲಎಂದುರಾಜ್ಯಪಾಲರಿಗೆತಿಳಿಸಿದ್ದಾರೆ.

No Comments to “ನಾಯಕತ್ವ ಬದಲಾವಣೆಗೆಹೈಕಮಾಂಡ್ಸ್ಪಷ್ಟ ನಕಾರ”

add a comment.

Leave a Reply

You must be logged in to post a comment.