ಸಿ.ಎಂ. ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು

ನವದೆಹಲಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿದೆ. ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸಂಧಾನವು ವಿಫಲವಾಗಿದೆ. ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾಗಲೇಬೇಕು ಎಂದು ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿರುವುದರಿಂದ ಬಿ.ಜೆ.ಪಿ. ಹೈಕಮಾಂಡ್ಗೆ ತೀವ್ರ ಚಿಂತೆಯಾಗಿದೆ. ಈಗ ಸಿ.ಎಂ. ತಲೆ ದಂಡ ಆಗಲೇಬೇಕು ಎಂದು ರೆಡ್ಡಿ ಬಣ ಒತ್ತಡ ಹೇರುತ್ತಿದೆ. ದೆಹಲಿಯಲ್ಲಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಜನಾರ್ಧನ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದರು. ಬಿಕ್ಕಟ್ಟು ಪರಿಹಾರಕ್ಕೆ ಸಂಬಂಧಿಸಿದಂತೆ ಏನೇ ಪರಿಹಾರ ಸೂಚಿಸಿದರೂ ಜನಾ ರ್ಧನ ರೆಡ್ಡಿ ಅದಕ್ಕೆ ಒಪ್ಪಿಗೆ ನೀಡಿಲ್ಲ. ಹಾಗಾಗಿ ಬಿಕ್ಕಟ್ಟು ತೀವ್ರಗೊಂಡಿದೆ. ಇದು ಹೈಕಮಾಂಡ್ಗೂ ಸವಾಲಾಗಿದೆ. ಈಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ನವದೆಹಲಿಗೆ ತೆರಳಲಿದ್ದಾರೆ. ರೆಡ್ಡಿ ಹಾಗೂ ಮುಖ್ಯ ಮಂತ್ರಿಗಳ ನಡುವಿನ ಬಿರುಕು ಸದ್ಯಕ್ಕೆ ಶಮನಗೊಂಡಿಲ್ಲ. ಮಂಗಳವಾರ ಕೂಡ ಸುಷ್ಮಾ ಸ್ವರಾಜ್, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸಭೆ ನಡೆಸಿದರು. ಆದರೆ ಸಂಧಾನ ಸಭೆ ಪ್ರಯೋಜನ ವಾಗಲೇ ಇಲ್ಲ. ಈ ಸಂಧಾನದ ಪರಿ ಹಾರವನ್ನು ರೆಡ್ಡಿ ಬಣದವರು ಗಣನೆಗೆ ತೆಗೆದುಕೊಂಡಿಲ್ಲ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ , ನಾಯಕತ್ವ ಬದಲಾಗಬೇಕು. ಕರ್ನಾ ಟಕ ರಾಜ್ಯದಲ್ಲಿ ಐದು ವರ್ಷ ಸರ್ಕಾರ ಆಡಳಿತ ನಡೆಸಿದರೆ ಸಾಲದು. ೫೦ ವರ್ಷ ಸರ್ಕಾರ ಇರಬೇಕು. ಹಾಗಾಗಿ ಬದಲಾವಣೆಯಾಗಲೇಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ. ನಾಳೆ ದೆಹಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೋಗಲಿದ್ದು, ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದಾರೆ.

No Comments to “ಸಿ.ಎಂ. ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು”

add a comment.

Leave a Reply