ಬಜೆಟ್ ಮುಗ್ಗಟ್ಟಿನಲ್ಲಿ ‘ಹೋರಿ’

ಮಾಗಡಿ ಪಾಂಡು ನಿರ್ದೇಶಿಸುತ್ತಿರುವ, ವಿನೋದ್ ಪ್ರಭಾಕರ್ ಅಭಿನಯದ ‘ಹೋರಿ’ ಚಿತ್ರ ಎಲ್ಲಿಗೆ ಬಂದಿದೆ ? ಅದರ ನಿರ್ಮಾಪಕ ಲಿಂಗೇಗೌಡರನ್ನು ಕೇಳಿದರೆ ‘ಸ್ವಾಮಿ, ‘ಹೋರಿ’ ವಿಪರೀತ ಹುಲ್ಲು ತಿನ್ತೆೈತೆ. ಈ ಕಡೆ ಕಟ್ಟಿ ಹಾಕೋದಕ್ಕೂ ಆಗದೆ, ವಿಲೇವಾರಿನೂ ಮಾಡಕ್ಕಾಗದೆ ಒಂದೇ ಒದೆತ. ಹಾಳು ಬಿದ್ದು ಹೋಗಲಿ ಎಂದು ಬಿಟ್ಟು ಹೋಗೋ ಹಾಗೂ ಇಲ್ಲ. ಬೇಜಾನ್ ದುಡ್ಡು ಹಾಕ್ಬಿಟ್ಟೀವ್ನಿ’ ಅಂತ ನೊಂದುಕೊಳ್ಳುತ್ತಾರೆ. ‘ಹೋರಿ’ ಸಿನಿಮಾ ಟೈಗರ್ ಪ್ರಭಾಕರ್ ಶಿಷ್ಯನೊಬ್ಬ, ಟೈಗರ್ ಪ ್ರ ಭ ಾ ಕ ರ ್ ಕಟ್ಟಾಭಿಮಾನಿಯಿಂದ ಹಣ ಹಾಕಿಸಿ, ಟೈಗರ್ ಪ್ರಭಾಕರ್ ಮಗ ವಿನೋದ್ನ ಹೀರೊ ಮಾಡಿಕೊಂಡು ತಯಾರಿಸುತ್ತಿ ರುವ ರೀಮೇಕ್ ಚಿತ್ರ. ನಾಲ್ಕು ತಿಂಗಳ ಹಿಂದೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ವಾಯ್ತು. ಮಲಯಾಳಂ ಚಿತ್ರ ‘ಮೀಸೆ ಮಾದವನ್’ ರೀಮೇಕ್ ಆದ ‘ಹೋರಿ’ ಗೆ ರಮನಿತೋ ಚೌಧರಿ, ಗೌರಿ ಮುಂಜಾಲ್ ನಾಯಕಿಯರು. ನಿರ್ದೇಶಕ ಪಾಂಡು ಮೊದಲಿಗೆ ಜಗ್ಗೇಶಣ್ಣನ ಕಾಲ್ಶೀಟ್ ಕೇಳಿದರಾದರೂ, ಅವರು ಆಗಾಕಿಲ್ಲ ಅಂದು ಬಿಟ್ಟರು. ಅಂಥ ಸಮಯದಲ್ಲಿ ಲಿಂಗೇಗೌಡ್ರು ಎಂಬುವವರನ್ನು ಪಾಂಡುಗೆ ಪರಿಚಯಿಸಿದವರು ಅದೇ ಲಿಂಗೇಗೌಡರ ಗೆಳೆಯ ಮಹೇಶ್, ಏನೋ ಆಗಿದ್ದು ಆಗಿದೆ. ಹೆಚ್ಚು ಕಡಿಮೆ ನೋಡಿಕೊಂಡು ಸಿನಿಮಾ ಮುಗಿಸಿಕೊಡಿ ಎಂದಿದ್ದಾರೆ. ಅದಕ್ಕೂ ಮುಂಚೆ ಪತ್ರಿಕಾಗೋಷ್ಠಿಯೊಂದರಲ್ಲಿ ‘ಹೋರಿ’ ಬಜೆಟ್ ಮೂರುವರೆ ಕೋಟಿ ಎಂದಿದ್ದರು ಪಾಂಡು. ಒಂದು ಕೋಟಿ ಅರವತ್ತು ಲಕ್ಷ ಅಂತ ಲಿಂಗೇಗೌಡರು ಆಫ್ ದಿ ರೆಕಾರ್ಡ್ ಹೇಳ್ತಿದ್ದರೆ ಪತ್ರಕರ್ತರು ‘ಎಂಗೆ ಹಿಂಗಾದ್ರೆ?ಎಂದಿದ್ದರು. ಅಲ್ಲಿಂದ ಆಚೆ ಬಂದ ಲಿಂಗೇಗೌಡರು ಸಿನಿಮಾದ ಬಜೆಟ್ ಮೂರುವರೆ ಕೋಟಿ ಅಂದರೆ ವ್ಯವಹಾರಕ್ಕೆ ಅನುಕೂಲ ಆಗುತ್ತೆ ಅಂತ ಡೈರೆಕ್ಟ್ರು ಹೇಳಿದ್ರು. ಅದಕ್ಕೆ ಹೇಳಿದೆ ಅಂತ ನಿಜಾನೇ ಹೇಳಿದ್ದರು. ಈಗ ಇನ್ನೂ ಒಂದು ಕೋಟಿ ಕೊಟ್ಟರಷ್ಟೇ ಸಿನಿಮಾ ಮುಗಿಸಿ ಕೊಡ್ತೀನಿ ಅಂತಿದ್ದಾರೆ ಪಾಂಡು.

No Comments to “ಬಜೆಟ್ ಮುಗ್ಗಟ್ಟಿನಲ್ಲಿ ‘ಹೋರಿ’”

add a comment.

Leave a Reply

You must be logged in to post a comment.