ಅದೇರಾಗ-ಅದೇಹಾಡು ಶೋಭಾ, ಬಳಿಗಾರ್ ತಲೆದಂಡ ಸೂತ್ರ

ಬೆಂಗಳೂರು: ಬಿ.ಜೆ.ಪಿ. ಬಿಕ್ಕಟ್ಟನ್ನು ಪರಿಹರಿಸಲು ದೆಹಲಿ ವರಿಷ್ಠರು ವಿಫಲ ರಾಗಿದ್ದು, ಅದಕ್ಕೆ ಪರಿಹಾರ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬುಲಾವ್ ಬಂದಿದ್ದು, ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದರು. ನಾಯಕ್ವ ಬದಲಾವಣೆಗೆ ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿರುವುದು ವರಿಷ್ಠರಿಗೆ ಕಗ್ಗಂಟಾಗಿದೆ. ಸುಷ್ಮಾ ಸ್ವರಾಜ್ ಸಂಧಾ ನವೂ ವಿಫಲಗೊಂಡಿದ್ದರಿಂದ ಪರಿಹಾರದ ಚೆಂಡುಈಗ ಮುಖ್ಯಮಂತ್ರಿ ಬಳಿಗೆ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಯಡಿ ಯೂರಪ್ಪ ಅವರಿಗೆ ಮನವರಿಕೆ ಮಾಡಿ ಪರಿಹಾರ ಸೂತ್ರ ಹುಡುಕುವುದು ವರಿಷ್ಠರ ಉದ್ದೇಶವಾಗಿದೆ. ರೆಡ್ಡಿ ಬಣ ಪಟ್ಟು ಸಡಿ ಲಿಸದಿದ್ದಲ್ಲಿ ರಾಜಿ ಸರ್ಕಸ್ ಬೆಂಗ ಳೂರಿಗೆ ಹಿಂದಿರುಗಿ, ಶಾಸಕರ ಸಹಿ ಸಂಗ್ರಹಿಸುವ ಚಿಂತನೆಯಲ್ಲೂ ಹೈ ಕಮಾಂಡ್ ಇದೆ. ಈ ಬೆಳವಣಿಗೆಯಿಂದ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸುಷ್ಮಾ ಸ್ವರಾಜ್ ನಿವಾಸದಲ್ಲೇ ಗಣಿ ರೆಡ್ಡಿ ಗಳನ್ನು ಮುಖಾಮುಖಿಯಾಗಿ ಭೇಟಿ ಮಾಡಿ ಚರ್ಚಿಸಲು ನಿರ್ಧರಿಸಿದ್ದಾರೆ. ಸುಷ್ಮಾ ಸ್ವರಾಜ್ ಮನೆಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧ ಗೊಂಡಿದೆ. ಯಡಿಯೂರಪ್ಪ ಅವರು ಕೂಡ ಗುರುವಾರ ಭಿನ್ನಮತಕ್ಕೆ ಪರಿಹಾರ ಕಂಡು ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ಚುನಾವಣೆ ಗೆದ್ದು ನಾಯಕತ್ವವನ್ನೇ ಬಿಟ್ಟು ಕೊಡು ವುದು ಯಾವ ನ್ಯಾಯ ಎನ್ನುವುದು ಯಡಿ ಯೂರಪ್ಪ ಅವರ ಪ್ರಶ್ನೆಯಾಗಿದ್ದು, ಅದೇ ಕಾರಣಕ್ಕಾಗಿ ಅವರನ್ನೇ ಮುಖ್ಯಮಂತ್ರಿ ಯಾಗಿ ಮುಂದುವರೆಸುವ ನಿರ್ಧಾರ ವರಿಷ್ಠ ದ್ದಾಗಿದೆ. ಆದರೆ ರೆಡ್ಡಿ ಬಣ ಅದನ್ನು ಒಪ್ಪುತ್ತಿಲ್ಲ. ಶೋಭಾ ಕರಂದ್ಲಾಜೆ ಹಾಗೂ ಮುಖ್ಯ ಕಾರ್ಯದರ್ಶಿ ಬಳಿಗಾರ್ ಅವರ ತಲೆ ದಂಡಕ್ಕೆ ಯಡಿಯೂರಪ್ಪ ಈಗಾಗಲೇ ಸಮ್ಮತಿಸಿದ್ದು, ಶೋಭಾ ಕರಂದ್ಲಾಜೆ ಯವರ ರಾಜಿನಾಮೆಯ ಪತ್ರದೊಂದಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ. ಇದೇ ಸೂತ್ರವನ್ನು ವರಿಷ್ಠರು ಕೂಡ ರೆಡ್ಡಿ ಬಣದ ಮುಂದಿಟ್ಟಿದೆ.

No Comments to “ಅದೇರಾಗ-ಅದೇಹಾಡು ಶೋಭಾ, ಬಳಿಗಾರ್ ತಲೆದಂಡ ಸೂತ್ರ”

add a comment.

Leave a Reply