ಜಗದೀಶ್ಶೆಟ್ಟರ್ಗೆಮಖ್ಯಮಂತ್ರಿಸ್ಥಾನಬಿಟ್ಟುಕೊಡಲುಒತ್ತಾಯ
ಹಾಸನ : ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಠಮಾರಿತನ ಧೋರಣೆ ಬಿಟ್ಟು ಜಗ ದೀಶ್ ಶೆಟ್ಟರ್ ಅವರಿಗೆ ಈ ಸ್ಥಾನ ಬಿಟ್ಟು ಕೊಡಬೇಕೆಂದು ರಾಜ್ಯ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಬಿ.ಬಿ.ಶಿವಪ್ಪ ಒತ್ತಾಯಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯಡಿಯೂರಪ್ಪ ಅವರು ಭಿನ್ನಮತ ಅಳಿಸಿ, ಪಕ್ಷದ ಉಳಿವಿಗೆ ಸಹ ಕಾರ ನೀಡಬೇಕೆಂದು ಸಲಹೆ ನೀಡಿದರು. ಈಗ ಬಿ.ಜೆ.ಪಿ.ಯಲ್ಲಿ ಗೊಂದಲ ಸೃಷ್ಟಿ ಆಗಿದೆ. ಮನೆಯ ಯಜಮಾನರಾದವರು ಜವಾಬ್ದಾರಿ ತೆಗೆದುಕೊಂಡು ಗೊಂದಲ ನಿವಾರಿಸುವ ಕಡೆ ಗಮನ ಹರಿಸಬೇಕೆಂದು ಮನವಿ ಮಾಡಿಕೊಂಡರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆದರೆ ರೆಡ್ಡಿ ಧಣಿಗಳ ಕೈಗೊಂಬೆ ಆಗು ವುದಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಶೆಟ್ಟರ್ ಸಂಘ ಪರಿವಾರದಿಂದ ಬಂದಿ ದ್ದಾರೆ. ಪ್ರತಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಕೆಲಸ ಇರುವುದರಿಂದ ಅವರೇಸೂಕ್ತಎಂದುಪ್ರತಿಪಾದಿಸಿದರು. ಈ ಹಿಂದೆ ಸರ್ಕಾರ ರಚನೆ ವೇಳೆಯಲ್ಲಿ ರೆಡ್ಡಿ ಸಹೋದರರನ್ನು ಯಡಿ ಯೂರಪ್ಪ ಬಳಸಿಕೊಂಡರು. ಈಗ ಅವರ ನಡುವೆ ವೈಮನಸ್ಸು ಇದೆ. ಇದನ್ನು ಬಗೆ ಹರಿಸಿಕೊಳ್ಳಬೇಕೆಂದು ತಿಳಿಸಿದರು. ಬಿ.ಜೆ.ಪಿ. ಬಿಕ್ಕಟ್ಟು ಬಗೆಹರಿಸಲು ಹೈ ಕಮಾಂಡ್ ಪ್ರಯತ್ನ ಮುಂದುವರೆದಿದೆ. ಆದರೆ ಪರಿಹಾರ ದೊರೆತಿಲ್ಲ ಎಂಬ ಮಾತ್ರಕ್ಕೆ ಹೈಕಮಾಂಡ್ ಈ ವಿಚಾರದಲ್ಲಿ ಸೋತಿದೆ ಎಂಬ ಅರ್ಥವಲ್ಲ ಎಂದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆದರೆ ತಮಗೇನು ಲಾಭವಾಗದು. ತಾವು ಯಾವ ಹುದ್ದೆಯನ್ನೂ ಕೇಳಿಲ್ಲ ಎಂದ ರಲ್ಲದೆ, ಈಗಲೂ ತಮಗೆ ಯಡಿಯೂರಪ್ಪ ನವರ ಬಗ್ಗೆ ನಿಷ್ಠೆ ಇದೆ. ನಿಷ್ಠೆಯಿಂದ ಪಕ್ಷ ಹಾಳಾಗಬಾರದು. ಹಾಗಾಗಿ ಅವರು ಸ್ಥಾನ ತ್ಯಜಿಸಬೇಕು ಎಂದರು. ಯಡಿಯೂರಪ್ಪ ಅವರ ಹಠಮಾರಿ ಧೋರಣೆಯಿಂದ ಪಕ್ಷ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಭಿನ್ನಮತ ಬಗೆ ಹರಿಸಲು ಹೈಕಮಾಂಡ್ಗೆ ವ್ಯವದಾನವೂ ಉಳಿದಿಲ್ಲ ಎಂದು ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಹಿಂದೆಂದೂ ಕಾಣದ ನೆರೆ ಹಾವಳಿಯಾಗಿದ್ದು,ಈ ಜಲಕ್ಷಾಮದಿಂದ ೧೫ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಪರಿ ಹಾರ ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ ಬಿ.ಜೆ.ಪಿ.ಯಲ್ಲಿನ ಆಂತರಿಕ ಬಿಕ್ಕಟ್ಟು ರಾಜ್ಯದಜನತೆಸಹಿಸದರೀತಿಆಗಿದೆ.ಎಲ್ಲರೂ ಬೇಸರಗೊಂಡಿದ್ದಾರೆ. ಹಾಗಾಗಿ ಯಡಿ ಯೂರಪ್ಪನವರುಪದತ್ಯಾಗ ಮಾಡಬೇಕೆಂದು ತಿಳಿಸಿದರು.