ಬಿಕ್ಕಟ್ಟು ಸುಖಾಂತ್ಯ:ಆಡ್ವಾಣಿಗೆ ಹುಟ್ಟು ಹಬ್ಬದ ಉಡುಗೊರೆ

ನವದೆಹಲಿ : ಕಳೆದ ೧೪ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ಬಿ.ಜೆ.ಪಿ.ಯೊಳಗಿನ ಬಿಕ್ಕಟ್ಟು ಕೊನೆಗೂ ಶಮನಗೊಂಡಿದೆ. ಪರಸ್ಪರ ಹಾವು-ಮುಂಗುಸಿಗಳಂತಿದ್ದ ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಜನಾ ರ್ಧನರೆಡ್ಡಿ, ಕೇಂದ್ರನಾಯಕಿಸುಷ್ಮಾ ಸ್ವರಾಜ್ ನಿವಾಸದ ಮುಂದೆ ನಗು ಮೊಗದೊಂದಿಗೆ ಪ್ರತ್ಯಕ್ಷವಾಗಿ ಪತ್ರಿಕಾಗೋಷ್ಠಿ ನಡೆಸಿದರು. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೋರಾಡು ವುದಾಗಿ ಘೊಷಿಸಿದರು. ಆದರೆ ಉಭಯ ಬಣಗಳ ರಾಜಿ ಸೂತ್ರ ವೇನೆಂಬ ವಿಚಾರಗಳನ್ನು ಪತ್ರಿಕಾಗೋಷ್ಠಿ ಯಲ್ಲಿ ಹಾಜರಿದ್ದ ಯಾವುದೇ ನಾಯ ಕರು ಬಹಿರಂಗಪಡಿಸಲಿಲ್ಲ. ಬಿಕ್ಕಟ್ಟು ಪರಿ ಹಾರವಾಗಿದೆ. ಬಿ.ಜೆ.ಪಿ. ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಹುಟ್ಟು ಹಬ್ಬಕ್ಕೆ ನೀಡಿರುವ ಉಡುಗೊರೆ ಇದು ಎಂದು ಸುಷ್ಮಾ ಸ್ವರಾಜ್ ಬಣ್ಣಿಸಿದರು. ಉಭಯ ಬಣದೊಳಗಿದ್ದ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಾಗಿದೆ ಎಂದಷ್ಟೇ ಅವರು ಹೇಳಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ, ಜನಾರ್ಧನ ರೆಡ್ಡಿ ಪರಸ್ಪರ ಕೈಕುಲುಕಿ ಕ್ಯಾಮೆರಾಗಳಿಗೆ ಫೋಸು ನೀಡಿದರು. ಭಾನುವಾರ ಬೆಳಿಗ್ಗೆಯಿಂದಲೇ ಕರ್ನಾ ಟಕ ಭವನ ಹಾಗೂ ಸುಷ್ಮಾ ಸ್ವರಾಜ್ ಅವರ ನಿವಾಸ ರಾಜಕೀಯ ಚಟುವಟಿಕೆ ಗಳ ತಾಣವಾಗಿತ್ತು. ಎರಡು ಬಣದಲ್ಲೂ ಉದ್ವೇಗ-ಕಾತುರ ಇತ್ತು ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆ ಸುತ್ತಿದ್ದ ಜನಾರ್ಧನ ರೆಡ್ಡಿ, ಹೈದರಾಬಾದ್ ನಲ್ಲಿದ್ದ ಶಾಸಕರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು.ಬೆಳವಣಿಗೆಗಳನ್ನು ತಿಳಿಸುತ್ತಿದ್ದರು. ಸುಷ್ಮಾ ನಿವಾಸದಲ್ಲಿ ಕೊನೆ ಕ್ಷಣದ ಸಂಧಾನಕ್ಕೆ ತೆರಳುವ ಮುನ್ನ ಸುದ್ದಿಗಾರ ರೊಂದಿಗೆ ಜನಾರ್ಧನ ರೆಡ್ಡಿ, ಸಂಜೆ ಯೊಳಗೆ ಸಿಹಿ ಸುದ್ದಿ ಸಿಗುತ್ತದೆ ಎಂದರು. ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಇದೇ ಮಾತುಗಳನ್ನು ಹೇಳಿ, ಸೋಮ ವಾರದಿಂದ ನೆರೆಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪರಿಹಾರ ಹಂಚು ವುದಾಗಿ ತಿಳಿಸಿದರು. ಈನಡುವೆ ಮುಖ್ಯಮಂತ್ರಿಗಳ ಬೆಂಬಲಕ್ಕೆ ಸಚಿವರ ದಂಡು ಆಗಮಿಸಿ ವರಿಷ್ಠರನ್ನು ಭೇಟಿ ಮಾಡಿತು. ಆಡ್ವಾಣಿ, ರಾಜನಾಥ್ ಸಿಂಗ್, ಅನಂತಕುಮಾರ್,ವೆಂಕಯ್ಯನಾಯ್ಡುಉಪಸ್ಥಿತಿ ಯಲ್ಲಿ ಸುಷ್ಮಾ ಸ್ವರಾಜ್ ನಡೆಸಿದ ಸಂಧಾನದ ಮಾತುಕತೆ ಫಲ ಕೊಟ್ಟಿತು. ಅನಂತಕುಮಾರ್ ಅವರು ಕೊಟ್ಟ ಸಿಹಿಯನ್ನು ಯಡಿಯೂರಪ್ಪ ಹಾಗೂ ಜನಾರ್ಧನ ರೆಡ್ಡಿ ಪರಸ್ಪರ ತಿನ್ನಿಸಿ, ಮುನಿಸಿಗೆ ಮುಕ್ತಾಯ ಹೇಳಿದರು. ಬಿಕ್ಕಟ್ಟು ಶಮನದ ತರಾತುರಿಯನ್ನು ಅವ ಲೋಕಿಸಿದರೆ, ಇದೊಂದು ತಾತ್ಕಾ ಲಿಕ ಪರಿ ಹಾರಎಂದೇಅರ್ಥೈಸಲಾಗುತ್ತಿದೆ.ನಾಯಕರು ತಮ್ಮ ಮೊಗದಲ್ಲಿ ಬಲವಂತದ ನಗು ಸೂಸು ತ್ತಿದ್ದಾರೆ.ಒಳಗಿನ ಧಾವಾಗ್ನಿ ಶಮನಗೊಂಡಿಲ್ಲ ಎಂಬುದುಸ್ಪಷ್ಟ. ನಾಯಕತ್ವ ಬದಲಾವಣೆಯಾಗ ಬೇಕು ಎಂದು ಪಟ್ಟು ಹಿಡಿದಿದ್ದ ರೆಡ್ಡಿ ಬಣ, ಮುಖ್ಯಮಂತ್ರಿಗಳೊಂದಿಗೆ ಮಾತನಾಡುವ ಪ್ರಶ್ನೆಯೇಇಲ್ಲ.ಸಾಮೂಹಿಕರಾಜಿನಾಮೆಗೂ ಸಿದ್ಧಎಂದುಬೆದರಿಕೆಹಾಕಿತ್ತು.ಈ ಒತ್ತಡದಲ್ಲಿ ಹೈಕಮಾಂಡ್ ಸಂಧಾನ ನಡೆಸಿ, ರಾಜಿ ಸೂತ್ರ ಗಳನ್ನು ತನ್ನ ಪ್ರತಿಷ್ಠೆಯ ಉಳಿವಿಗಾಗಿ ಗೌಪ್ಯ ವಾಗಿಟ್ಟಿದೆ. ಒಂದು ಮೂಲದ ಪ್ರಕಾರ ಶೋಭಾ ಕರಂದ್ಲಾಜೆ ತಲೆದಂಡ, ಸುಷ್ಮಾ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ, ಇವು ಎರಡೂ ಬಣಗಳು ಒಪ್ಪಿದ ರಾಜಿಸೂತ್ರಎನ್ನಲಾಗಿದೆ.ಆದರೆನಿಜ ಬೇರೆಯೇ ಇದೆ ಎಂದು ಹೇಳಲಾಗುತ್ತಿದೆ. ಶೋಭಾ ಸೇರಿದಂತೆ ೪ ಸಚಿವರ ತಲೆದಂಡ, ರೆಡ್ಡಿ ಬಣದ ಆರು ಶಾಸಕರಿಗೆ ಸಚಿವ ಸ್ಥಾನ, ಯಡಿಯೂರಪ್ಪ ಅವರ ಅವಧಿ ಮೊಟುಕು, ಮುಂತಾದಷರತ್ತುಗಳಿಗೆ ಒಪ್ಪಿಗೆ ನೀಡಲಾಗಿದೆ.

No Comments to “ಬಿಕ್ಕಟ್ಟು ಸುಖಾಂತ್ಯ:ಆಡ್ವಾಣಿಗೆ ಹುಟ್ಟು ಹಬ್ಬದ ಉಡುಗೊರೆ”

add a comment.

Leave a Reply

You must be logged in to post a comment.