ಜನಮತ ಶೋಭಾ ‘ಬಲಿಪಶು’ : ಮಹಿಳೆಯರ ಆಕ್ರೋಶ

ಹಾಸನ : ಶೋಭಾ ತಲೆದಂಡಕ್ಕೆ ಜಿಲ್ಲಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಪಕ್ಷಭೇದು ಮರೆತು ಮಹಿಳೆಯರು ಶೋಭಾ ಕರಂದ್ಲಾಜೆ ರಾಜಿನಾಮೆ ಕುರಿತು ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರಿಕೆ ಕೆಲವರನ್ನು ಸಂಪರ್ಕಿಸಿ, ಅಭಿಪ್ರಾಯ ಕಲೆ ಹಾಕಿತು. ಅವರು ತಮ್ಮ ನಿಲುವು ವ್ಯಕ್ತಪಡಿಸಿದ್ದು ಹೀಗೆ. ಕಾಮಾಕ್ಷಿರಾಜು, ಜಿ.ಪಂ. ಅಧ್ಯಕ್ಷೆ ಸಚಿವೆ ಸ್ಥಾನದಲ್ಲಿದ್ದ ಒಬ್ಬರೇ ಮಹಿಳೆಯನ್ನು ತೆಗೆದಿದ್ದು ಬೇಸರ ವಾಗಿದೆ. ಸಚಿವೆ ಸ್ಥಾನದಿಂದ ಶೋಭಾ ಅವರನ್ನು ಕೆಳಗಿಳಿಸಬಾರದಿತ್ತು. ನೇತ್ರಾವತಿ ಗಿರೀಶ್ ನಗರಸಭೆ ಅಧ್ಯಕ್ಷೆ ಯಾಗಿ ಚೆನ್ನಾಗಿ ಕೆಲಸ ಮಾಡ್ತಿದ್ರು. ಅದನ್ನು ಸಹಿಸಲಾರದೆ ಕೆಲವರಲ್ಲಿ ಮೂಡಿರಬಹುದಾದ ಅಸೂಯೆಯ ಪರಿಣಾಮವೂ ಇದಾಗಿರಬಹುದು. ಇಂದಿನ ದಿನಗಳಲ್ಲಿ ಸಮಾಜವೂ ಹಾಗೆಯೇ ಆಗಿದೆ. ಒಳ್ಳೆಯ ಕೆಲಸ ಮಾಡುವವರಿಗೆ ಅಡ್ಡಿ-ಆತಂಕಗಳು, ಅಡಚಣೆಗಳು ಬರುವುದು ಜಾಸ್ತಿ ಅಲ್ವಾ? ಒಟ್ಟಿನಲ್ಲಿ ಉತ್ತಮ ಕೆಲಸಗಾರ್ತಿ ಶೋಭಾ ಅವ ರನ್ನು ಸಂಪುಟದಿಂದ ಹೊರ ಸರಿಯು ವಂತೆ ಮಾಡಬಾರದಿತ್ತು. ನಂಜಮ್ಮ, ಜಿಲ್ಲಾಪಂಚಾಯಿತಿಸದಸ್ಯೆ ಜವಾಬ್ದಾರಿಗಳನ್ನು ಹೊತ್ತುಕೊಂಡು ಸಾಕಷ್ಟು ಕೆಲಸಗಳನ್ನು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಮಾಡ್ತಾ ಇದ್ರು. ಪಕ್ಷದಲ್ಲಿ ಅವರವರ ನಡುವಿನ ಕಲಹಕ್ಕೆ ಸಂಪುಟ ದಲ್ಲಿದ್ದ ಒಬ್ಬರೇ ಮಹಿಳೆಯನ್ನು ಸಚಿವೆಯ ಸ್ಥಾನದಿಂದ ತೆಗೆದು ಹಾಕ ಬಾರದಿತ್ತು. ಪ್ರೇಮಮ್ಮ ನಿಂಗಪ್ಪ ಜಿಲ್ಲಾ ಫಂಚಾಯಿತಿ ಸದಸ್ಯೆ. ಶೋಭ ಅವರು ಅತ್ಯುತ್ತಮವಾಗಿ ಕೆಲಸ ಮಾಡ್ತಿದ್ರು. ಪಕ್ಷದ ಒಳಗೆ ಏನಿತ್ತೋ ಗೊತ್ತಿಲ್ಲ. ಹಾಗಿದ್ದೂ ಉತ್ತರ ಕರ್ನಾಟಕ ನೆರೆಪೀಡಿತವಾದಂತಹ ಇಂತಹ ಸಂಕಷ್ಟದ ಸಂದರ್ಭದಲ್ಲಿ ಪಕ್ಷದೊಳಗೆ ಇಲ್ಲ ಸಲ್ಲದ ಗದ್ದಲ ಮಾಡಿ ಕೊಂಡು ಅವ್ರನ್ನ ಕೈ ಬಿಡಬಾರದಿತ್ತು. ಮಹಿಳೆಯಾಗಿ ಆಕೆ ಉತ್ತಮವಾಗಿ ಆಡ ಳಿತ ಮಾಡ್ಕೊಂಡು ಹೋಗ್ತಾ ಇದ್ರು. ಅವರನ್ನು ಕೈ ಬಿಟ್ಟು ಮುಖ್ಯಮಂತ್ರಿಗಳ ತೀರ್ಮಾನ ಸೂಕ್ತವಾಗಿಲ್ಲ. ಇಂದಿರಾ ತಾಲ್ಲೂಕು ಚುಟುಕು ಸಾಹಿತ್ಯ ಸಾಹಿತ್ಯ ಪರಿಷತ್ ಅಧ್ಯಕ್ಷೆ, ಚನ್ನರಾಯಪಟ್ಟಣ. ಸಚಿವೆ ಸ್ಥಾನಕ್ಕೆ ರಾಜಿನಾಮೆ ಪಡೆ ದಿರುವುದು ಅಕ್ಷಮ್ಯ. ರಂಗಾಯಣದಲ್ಲಿ ಬಿ.ಜಯಶ್ರೀ ಅವರನ್ನು ಕೂಡ ಹಾಗೆ ಮಾಡಿದ್ರು. ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ನಿಜವಾದ ಸ್ಥಾನ ಮಹಿಳೆಗೆ ಇಂದಿಗೂ ದೊರೆತಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿ ‘ಗಂಡಸು’ ಅಂತ ಇದ್ದುದು ಶೋಭ ಕರಂದ್ಲಾಜೆ ಮಾತ್ರ. ಈ ಹಿಂದೆ ರೇಣುಕಾಚಾರ್ಯ ಅವರ ವಿಚಾರದಲ್ಲೂ ಸಾಕಷ್ಟು ಹದಗೆಟ್ಟ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದ್ರೆ ಅವರ ವಿರುದ್ಧ ಯಾವುದೇ ತೀರ್ಮಾನ ವನ್ನು ತೆಗೆದುಕೊಳ್ಳಲಿಲ್ಲ. ಇಲ್ಲಿ ಮಹಿಳೆ ಯಾಗಿ ಶೋಭಾ ಅವರ ವಿರುದ್ಧ ತೆಗೆದು ಕೊಂಡಿರುವುದು ಕ್ರಮ ಖಂಡನೀಯ. ಡಾ।। ಅಶ್ವಿನಿ, ಎಸ್.ಡಿ.ಎಂ. ಆಯುರ್ವೇದಿಕ್ಕಾಲೇಜು,ಉಪನ್ಯಾಸಕಿ. ಯಾವುದೋ ಪರಿಸ್ಥಿತಿಯ ಒತ್ತಡಕ್ಕೆ, ಯಾರದೋ ಸ್ವಾರ್ಥಕ್ಕೆ, ಮತ್ತ್ಯಾವ ಕಾರಣಕ್ಕೂ ಅವರನ್ನು ಸಚಿವೆ ಸ್ಥಾನದಿಂದ ರಾಜಿನಾಮೆ ನೀಡಿಸಿ, ಸಂಪುಟದಿಂದ ಹೊರಗಟ್ಟಬಾರದಿತ್ತು. ದಸರಾ ಸಂದರ್ಭ ದಲ್ಲಿರಬಹುದು. ಬೇರೆಲ್ಲಾ ತಮ್ಮ ಖಾತೆ ಯೊಳಗಿನ ಕಾರ್ಯಗಳನ್ನು ಜವಾಬ್ದಾರಿ ಯುತವಾಗಿ ಮಾಡ್ರಾ ಇದ್ರು.ಆದ್ರೆ ಪಕ್ಷ ದಲ್ಲಿನ ಅವರವರ ನಡುವಿನ ಭಿನ್ನಾಭಿ ಪ್ರಾಯದಿಂದ ಶೋಭಾ ಅವರನ್ನು ಬಲಿ ಪಶು ಮಾಡಬಾರದಿತ್ತು.

No Comments to “ಜನಮತ ಶೋಭಾ ‘ಬಲಿಪಶು’ : ಮಹಿಳೆಯರ ಆಕ್ರೋಶ”

add a comment.

Leave a Reply

You must be logged in to post a comment.