೪ ತಿಂಗಳ ಅವಧಿ ಪೂರೈಸಿದ ನೇತ್ರಾವತಿ ಗಿರೀಶ್
ಹಾಸನ :ನಗರಸಭೆ ಅಧ್ಯಕ್ಷೆ ನೇತ್ರಾವತಿ ಗಿರೀಶ್ ನಾಲ್ಕು ತಿಂಗಳು ಅಧಿಕಾರ ಪೂರೈಸಿದ್ದು, ಮುಂದಿನ ಅವಧಿಯ ಅಧ್ಯಕ್ಷರ ಆಯ್ಕೆಗೆ ತಮ್ಮ ಸ್ಥಾನವನ್ನು ತೆರವುಗೊಳಿಸಬೇಕಾಗಿದೆ. ನಗರಸಭೆ ಅಧ್ಯಕ್ಷರ ಅವಧಿ ೧೩ ತಿಂಗಳು ಬಾಕಿಯಿದ್ದು, ಮೊದಲ ಅವಧಿ ಯ ನಾಲ್ಕೂವರೆ ತಿಂಗಳಿಗೆ ನೇತ್ರಾವತಿ ಗಿರೀಶ್ ಹಾಗೂ ಉಳಿದ ಅವಧಿಗೆ ಅಂಬಿಕಾ ರವಿಶಂಕರ್ ಅವರನ್ನು ಆಯ್ಕೆ ಮಾಡಲು ಜಿಲ್ಲಾ ಜೆ.ಡಿ.ಎಸ್. ಮುಖಂಡರು ನಿರ್ಧರಿಸಿದ್ದರು. ಈಗ ನೇತ್ರಾವತಿ ಗಿರೀಶ್ ಅವರ ಅಧಿ ಕಾರವಧಿ ಇನ್ನೂ ೧೫ ದಿನಗಳು ಮಾತ್ರವೇ ಬಾಕಿ ಇದೆ. ಮುಂದಿನ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆ ಆಗಬೇಕಾಗಿದ್ದು, ಇದಕ್ಕಾಗಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅಂಬಿಕಾ ರವಿಶಂಕರ್ ಜೆ.ಡಿ.ಎಸ್. ಮುಖಂಡರನ್ನು ಭೇಟಿಯಾಗಿ ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಜೆ.ಡಿ.ಎಸ್. ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಅಂಬಿಕಾ ರವಿಶಂಕರ್ ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಹೆಚ್.ಡಿ.ರೇವಣ್ಣ ಅವರು ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ.ಜವರೇಗೌಡ ಅವರನ್ನು ಸಂಪರ್ಕಿಸಿ, ಮುಂದಿನ ಅವಧಿಗೆ ಅಧ್ಯಕ್ಷರ ಆಯ್ಕೆಯನ್ನು ತೀರ್ಮಾ ನಿಸುವಂತೆ ಸೂಚನೆ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಜಿಲ್ಲೆಯ ಜೆ.ಡಿ.ಎಸ್. ಮುಖಂಡರು ಸಭೆ ಸೇರಿ ಅಧ್ಯಕ್ಷರ ಆಯ್ಕೆಯನ್ನು ನಿರ್ಧರಿಸಲಿದ್ದಾರೆ. ಏತನ್ಮಧ್ಯೆ ಆಡಳಿತ ಪಕ್ಷದ ಜೆ.ಡಿ.ಎಸ್. ಸದಸ್ಯರು, ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದಾರೆ. ಅಲ್ಲದೆ ನೇತ್ರಾವತಿ ಗಿರೀಶ್ ಹಾಗೂ ಅಂಬಿಕಾ ರವಿಶಂಕರ್ ಅವರು ಕೂಡ ವರಿಷ್ಠರ ತೀರ್ಮಾನಕ್ಕೆ ತಲೆಬಾಗಲಿದ್ದಾರೆ. ನೇತ್ರಾವತಿ ಗಿರೀಶ್ಗೆ ರಾಜಿನಾಮೆ ನೀಡಲು ವರಿಷ್ಠರು ಸೂಚಿಸುವರೇ? ಇನ್ನೆರೆಡು ದಿನದಲ್ಲಿ ಸ್ಪಷ್ಟ ಚಿತ್ರಣವೊಂದು ಹೊರಬೀಳಲಿದೆ. ವಿಶ್ವಸನೀಯ ಮೂಲಗಳ ಪ್ರಕಾರ ನೇತ್ರಾ ವತಿ ಗಿರೀಶ್ಗೆ ರಾಜಿನಾಮೆ ನೀಡಲು ಪಕ್ಷದ ಮುಖಂಡರುಶೀಘ್ರವೇಸೂಚನೆನೀಡಲಿದ್ದಾರೆ. ಅಲ್ಲಿಗೆ ಅಂಬಿಕಾ ರವಿಶಂಕರ್ ಹಾದಿ ಸುಗಮ ವಾದಂತಲ್ಲವೇ?