ಗಣಿರೆಡ್ಡಿಗಳಮೂರನೇಬೇಡಿಕೆಈಡೇರಿಕೆ

ಬೆಂಗಳೂರು ರಾಜ್ಯ ರಾಜಕಾರಣ ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ರಣಕಹಳೆ ಮೊಳಗಿಸಿದ್ದ ಗಣಿ ರೆಡ್ಡಿಗಳ ಒಂದೊಂದೇ ಬೇಡಿಕೆ ಈಡೇ ರತೊಡಗಿದೆ. ಬಳ್ಳಾರಿಯಿಂದ ಎತ್ತಂಗಡಿಯಾಗಿದ್ದ ಡಿ.ಸಿ., ಎಸ್.ಪಿ. ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಮರು ನೇಮಕ ಮಾಡಲಾಗಿದೆ. ಬಳ್ಳಾರಿ ಹಾಗೂ ಗದಗ ಜಿಲ್ಲೆಯಿಂದ ವರ್ಗಾ ವಣೆಗೊಂಡಿದ್ದ ಜಿಲ್ಲಾಧಿಕಾರಿಗಳನ್ನು ಅಲ್ಲಿಗೇ ನಿಯೋಜಿಸಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಬಿ.ಶಿವಪ್ಪ ಅವರನ್ನು ಮರು ನೇಮಕ ಮಾಡಲಾಗಿದೆ. ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಕರುಣಾಕರ ರೆಡ್ಡಿ, ವರ್ಗಾವಣೆಯು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿ ದರು. ಪದೇ ಪದೇ ವರ್ಗಾವಣೆಯಿಂದ ಆಡಳಿತಕ್ಕೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ನಡುವೆ ಮುಖ್ಯಮಂತ್ರಿಗಳು ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಯಾಗ ಕೈಗೊಂಡರು. ಬಿಕ್ಕಟ್ಟು ಶಮನಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿರು ವುದಾಗಿ ಹೇಳಿದರು. ಹಣಬಲ ಹಾಗೂ ತೋಳ್ಬಲಕ್ಕೆ ತಾವು ಜಗ್ಗುವುದಿಲ್ಲ ಎಂದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ರೆಡ್ಡಿ ಧಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಮುನ್ನ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿ, ಅರಣ್ಯ ಸಂಪತ್ತನ್ನು ಕೆಲವೇ ಕೆಲ ವರು ಲೂಟಿ ಮಾಡುತ್ತಿದ್ದಾರೆ. ಆದರೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

No Comments to “ಗಣಿರೆಡ್ಡಿಗಳಮೂರನೇಬೇಡಿಕೆಈಡೇರಿಕೆ”

add a comment.

Leave a Reply