ಇನ್ನೂ ಮುಗಿಯುದ ತೇಪ

ಬೆಂಗಳೂರು : ಮತ್ತೆ ಮುನಿದಿದ್ದಾರೆಂದು ಹೇಳಲಾಗಿರುವ ಸಚಿವರಾದ ಜನಾರ್ಧನ ರೆಡ್ಡಿ ಹಾಗು ಶ್ರೀರಾಮುಲು ಅವರುಗಳನ್ನು ಓಲೈ ಸುವ ಯತ್ನಕ್ಕೆ ಅನಂತಕುಮಾರ್ ಮುಂದಾಗಿದ್ದು, ಮುಖ್ಯಮಂತ್ರಿ ನಿವಾಸದಲ್ಲಿ ಗುರುವಾರ ಮಹತ್ವದ ಸಭೆ ನಡೆಸಿದರು. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅದಿರು ಸಂಪತ್ತು ಲೂಟಿ ಸಂಬಂಧ ಮುಖ್ಯಮಂತ್ರಿಗಳು ಹೇಳಿದ್ದಾ ರೆನ್ನಲಾದ ಹೇಳಿಕೆ ವಿರುದ್ಧ ಸಚಿವರಾದ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಆಕ್ಷೇಪಿಸಿ, ಹೊರ ಬಂದಿದ್ದರೆಂಬ ಪ್ರಕರಣದ ಹಿನ್ನಲೆಯಲ್ಲಿ ಗುರುವಾರದ ಸಭೆಗೆ ಮಹತ್ವ ಬಂದಿತ್ತು. ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಯಡಿಯೂರಪ್ಪ , ಜನಾರ್ಧನ ರೆಡ್ಡಿ, ಶ್ರೀರಾಮುಲು ಹಾಗು ಮುಖ್ಯಮಂತ್ರಿಗಳ ಕೆಲವು ಆಪ್ತ ಸಚಿವರು ಪಾಲ್ಗೊಂಡಿದ್ದರು. ಸಮನ್ವಯ ಸಮಿತಿ ರಚನೆ, ಜಗದೀಶ ಶೆಟ್ಟರ ಸಂಪುಟ ಸೇರ್ಪಡೆ, ಅವರಿಗೆ ಖಾತೆ ಹಂಚಿಕೆ ಹಾಗು ಸಚಿವ ಸಂಪುಟದ ಪುನರ್ರಚನೆ ಸೇರಿದಂತೆ ರಾಜೀ ಸೂತ್ರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು ಎನ್ನಲಾಗಿದೆ. ಆದರೆ ಸಭೆ ನಂತರ ಈ ಎಲ್ಲ ಊಹಾಪೋಹಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಯಡಿಯೂರಪ್ಪ, ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಹಾಗು ಪರಿಹಾರ ಹಂಚಿಕೆ, ವಿಧಾನಸಭಾ ಅಧಿ ವೇಶನ ಬಗ್ಗೆ ಸಭೆಯಲ್ಲಿ ಚರ್ಚಿಸ ಲಾಯಿತು. ಡಿ. ೧೪ ರಿಂದ ಚಳಿ ಗಾಲದ ಅಧಿವೇಶನ ಆರಂಭಗೊಳ್ಳಲಿದೆ ಎಂದು ವಿವರಿಸಿದರು. ಸಭೆ ಮುಗಿಸಿ ಜಗದೀಶ ಶೆಟ್ಟರ ನಿವಾಸಕ್ಕೆ ತೆರಳಿದ ಜನಾರ್ಧನ ರೆಡ್ಡಿ ಹಾಗು ಶ್ರೀರಾಮುಲು ಶೆಟ್ಟರೊಂದಿಗೆ ಸಮಾಲೋಚನೆ ನಡೆಸಿದರು. ಅವರು ಸಚಿವ ಸಂಪುಟ ಸೇರಲು ಒಪ್ಪಿದ್ದು, ನ. ೧೬ ರಂದು ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿ, ನ. ೧೭ ರಂದು ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಅವರ ಸ್ಥಾನಕ್ಕೆ ಕಾನೂನು ಸಚಿವ ಸುರೇಶ್ಕುಮಾರ್ ಅಥವಾ ಬೋಪಯ್ಯ ಅವರನ್ನು ನೇಮಿಸುವ ಚಿಂತನೆ ನಡೆಯುತ್ತಿದೆ.

No Comments to “ಇನ್ನೂ ಮುಗಿಯುದ ತೇಪ”

add a comment.

Leave a Reply