logo
Last updated: 2009-11-14 18:04:29
E-Paper
Archives
November 2009
M T W T F S S
« Oct   Dec »
 1
2345678
9101112131415
16171819202122
23242526272829
30  

೬ ಬೈಕ್ ಕದ್ದಿದ್ದವನ ಬಂಧನ

ಹಾಸನ: ಆರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆಲೂರು ತಾಲ್ಲೂಕು ಕಿರಗಡಲು ಗ್ರಾಮದ ಮರಗೆಲಸದ ಆಚಾರಿ ಅಪ್ಪಣ್ಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಾಹನಗಳ ತಪಾಸಣೆ ಸಂದರ್ಭ ದಲ್ಲಿ ಬೈಕ್ನಲ್ಲಿ ಬಂದ ಆರೋಪಿಯನ್ನು ಪರಿಶೀಲಿಸಿದಾಗ ಯಾವುದೇ ದಾಖಲಾತಿ ಗಳನ್ನು ಹೊಂದಿಲ್ಲದಿರುವುದು ಪತ್ತೆ ಯಾಯಿತು. ಆತನನ್ನು ಬಂಧಿಸಿ ವಿಚಾರಣೆ ಗೊಳ ಪಡಿಸಿದಾಗ ಸ್ನೇಹಿತನೊಂದಿಗೆ ಸೇರಿ ಆರು ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡನು. ಹಾಸನದ ಶಾಂತಿ ಸ್ಟೋರ್ಸ್ ಮುಂಭಾಗ ನಿಂತಿದ್ದ ಕೆ.ಎ. ೧೩, ಹೆಚ್. ೨೦೦೫ ನಂಬರಿನ ಟಿ.ವಿ.ಎಸ್. ಚಾಂಪ್, ಮೋತಿ ಹೋಟೆಲ್ ಮುಂಭಾಗದಲ್ಲಿ ನಿಂತಿದ್ದ ಕೆ.ಎ. ೧೩, ಜೆ. ೩೬೬೪ ನಂಬರಿನ ಕ್ಯಾಲಿಬರ್ ಹಾಗೂ ಕೆ.ಎ.೧೩, ಜೆ.೬೭೨೧ ನಂಬರಿನ ಟಿ.ವಿ.ಎಸ್. ಎಕ್ಸೆಲ್, ದೇವಿಗೆರೆ ರಸ್ತೆ ಬಳಿ ಇದ್ದ ಕೆ.ಎ.೦೨, ಇ.ವಿ. ೬೯೩೮ ನಂಬರಿನ ಹೀರೊ ಹೊಂಡಾ ಹಾಗೂ ಕೆ.ಎ.೦೨, ಇ.ಎಲ್. ೮೭೧೬ ನಂಬರಿನ ಹೀರೊ ಹೊಂಡಾ ಬೈಕ್ಗಳನ್ನು ಆರೋಪಿ ಕದ್ದಿದ್ದನು. ಇವುಗಳ ಬೆಲೆ ೧.೫ ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದು ಮತ್ತೊಬ್ಬ ಆರೋಪಿಯನ್ನು ಹುಡುಕುತ್ತಿದ್ದಾರೆ. ಕಲ್ಯಾಣ ಮಂಟಪದಲ್ಲಿ ಕಳವು ಅರಸೀಕೆರೆಯ ಸಿದ್ದರಾಮೇಶ್ವರ ಸಮುದಾಯ ಭವನಕ್ಕೆ ಮದುವೆಗೆಂದು ಬಂದಿದ್ದ ಬೆಂಗಳೂರು ಜಿಲ್ಲೆಯ ಆವಲ ಹಳ್ಳಿ ಗ್ರಾಮದ ವೀರಭದ್ರಸ್ವಾಮಿ ಎಂಬು ವರ ಸೂಟ್ಕೇಸ್ ಬೀಗ ಮುರಿದು ೫೦ ಸಾವಿರ ರೂ. ಬೆಲೆಯ ಚಿನ್ನಾಭರಣಗಳನ್ನು ಅಪಹರಿಸಲಾಗಿದೆ. ಅಡಿಕೆ ಕಳವು : ಅರಕಲಗೂಡು ತಾಲ್ಲೂಕು ಕೆಲ್ಲೂರು ಗ್ರಾಮದ ಸುರೇಶ್ ಎಂಬುವರು ಕಣದಲ್ಲಿ ಒಣ ಹಾಕಿದ್ದ ೨೪ ಸಾವಿರ ರೂ. ಬೆಲೆಯ ೨ ಕ್ವಿಂಟಾಲ್ ಅಡಿಕೆ ಯನ್ನು ಕಳವು ಮಾಡಲಾಗಿದೆ.


Saturday, November 14th, 2009 at 6:04 pm

SocialTwist Tell-a-Friend

Be the first to write to Editor

Write to the Editor