ಹೋರಾಟಶಕ್ತಿಕಳೆದುಕೊಂಡಿರುವವಿರೋಧಪಕ್ಷಗಳು:ದೇವೇಗೌಡ
ಹಾಸನ : ದೇಶದ ರಾಜಕೀಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅಧಿಕೃತ ವಿರೋಧ ಪಕ್ಷಗಳು ತಮ್ಮ ಹೊಣೆ ನಿಭಾಯಿಸದಿರುವುದರಿಂದ ಆಡಳಿತ ಪಕ್ಷಗಳಿಗೆ ಯಾರೂ ಕಡಿವಾಣ ಹಾಕ ದಂತಾಗಿದೆ. ಇದೊಂದು ಘೊರ ದುರಂತ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಳವಳ ವ್ಯಕ್ತ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡು ತ್ತಿದ್ದ ಆವರು ಪ್ರಜಾಪ್ರಭುತ್ವದಲ್ಲಿ ಆಡಳಿತ ಹಾಗು ವಿರೋಧ ಪಕ್ಷಗಳು ಗಾಡಿಯ ಗಾಲಿಗಳಿದ್ದಂತೆ, ಎರಡೂ ಸಮಾನವಾಗಿ ತಿರುಗಿದಾಗ ಮಾತ್ರ ಅದು ಸುಲಲಿತವಾಗಿ ಚಲಿಸುತ್ತದೆ. ಇಲ್ಲದಿದ್ದರೆ ಮುರಿದು ಬೀಳುತ್ತದೆ. ಈಗ ಇದೇ ಸ್ಥಿತಿಯಲ್ಲಿ ದೇಶ ಸಿಲುಕಿದೆ ಎಂದು ವಿಷಾದಿಸಿದರು. ಇಲ್ಲಿ ಯಾವುದೇ ಪಕ್ಷಗಳನ್ನು ಬೊಟ್ಟು ಮಾಡಿ ಹೇಳುತ್ತಿಲ್ಲ. ಅಧಿಕೃತ ವಿರೋಧ ಪಕ್ಷಗಳ ಆಂತರಿಕ ಸಮಸ್ಯೆಗಳು ಅವುಗಳ ಹೋರಾಟ ಶಕ್ತಿಯನ್ನು ಕುಂದಿಸಿವೆ. ರಾಷ್ಟ್ರದಲ್ಲಿ ಬಿ.ಜೆ.ಪಿ. ಹಾಗು ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಇದಕ್ಕಿಂತ ಭಿನ್ನವೇನೂ ಆಗಿಲ್ಲ ಎಂದು ಮರುಕ ವ್ಯಕ್ತಪಡಿಸಿದರು. ಇಂತಹ ಗಂಡಾಂತರಕ್ಕೆ ದೇಶವನ್ನು ನಾವೇ ದೂಡಿದ್ದೇವೆ. ಇದರ ವಿರುದ್ಧ ಯಾರಿಗೆ ದೂರು ಕೊಡಬೇಕು ಎಂದು ಪರಿತಪಿಸಿದ ದೇವೇಗೌಡ, ಸರ್ಕಾರದ ಆಡಳಿತದಲ್ಲಿ ಏರುಪೇರು ಇದ್ದಾಗ ಅದರ ವಿರುದ್ಧ ಹೋರಾಡಲು ವಿರೋಧ ಪಕ್ಷಗಳಿಗೆ ನೈತಿಕ ಬಲವಿರಬೇಕು. ತುರ್ತು ಪರಿಸ್ಥಿತಿ ಕಾಲದಲ್ಲೂ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಲಕ್ಷಾಂತರ ನಾಯಕರು ಪ್ರತಿಭಟಿಸಿ ಜೈಲು ಸೇರಿದರು. ಇಂದು ಅಂತಹ ಹೋರಾಟ ಮನೋಭಾವ ಇಲ್ಲವಾಗಿದೆ ಎಂದು ವಿಷಾದಿಸಿದರು. ಇಂದಿನ ಪ್ರತಿಭಟನೆ ಸಾಂಕೇತಿಕವಾ ಗಿದ್ದು, ಪಕ್ಷದ ಎಲ್ಲಾ ನಾಯಕರು ಶನಿವಾರ ಸಭೆ ಸೇರಿ ಶಾಂತಿಯುತ ಹೋರಾಟಕ್ಕೆ ಕಾರ್ಯತಂತ್ರ ರೂಪಿಸುವುದಾಗಿ ತಿಳಿಸಿದರು.