ಮಹಿಳೆಯಿಂದಲೇ ಪುರುಷ ಪರಿಪೂರ್ಣ: ಅಶೋಕ್
ಹಾಸನ : ಕನ್ನಡ ಭಾಷೆ ಹಾಗೂ ಮಹಿಳೆಯರ ಬಗ್ಗೆ ಗೌರವ ಭಾವನೆ ಇರಲಿ ಎಂದು ಸಾಹಿತಿ ಡಾ. ವಿಜಯ ದಬ್ಬೆ ಹೇಳಿದ್ದಾರೆ. ನಗರದ ಎ.ವಿ.ಕೆ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಯು.ಜಿ.ಸಿ. ಪ್ರಾಯೋಜಕತ್ವದ ರಾಜ್ಯಮಟ್ಟದ ೨ ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಗುರುದೇವ್ ಮಾತ ನಾಡಿ, ಮಹಿಳೆಯರನ್ನು ದೇವತೆ ಎಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಒಳ ಪ್ರಪಂಚಕ್ಕಷ್ಟೇ ಆಕೆಯನ್ನು ಸೀಮಿತಗೊಳಿ ಸುವ ಪ್ರಯತ್ನ ಹಿಂದಿನಿಂದಲೂ ನಡೆದು ಕೊಂಡು ಬಂದಿದೆ. ವಿಜಯ ದಬ್ಬೆ ಯಂತಹ ಹೋರಾಟಗಾರ್ತಿಯರು ನೂರಾರು ಜನ ಜನಿಸಲಿ ಎಂದು ಅವರು ಆಶಿಸಿದರು. ಸರ್ಕಾರದ ಸವಲತ್ತುಗಳು ಹಾಗೂ ಆಗತ್ಯ ಸ್ಥಾನಮಾನಗಳನ್ನು ಮಹಿಳೆಯರಿಗೆ ಕಲ್ಪಿಸುವಲ್ಲಿ ವಿಫಲರಾಗಿದ್ದೇವೆ. ಸಭೆ- ಸಮಾರಂಭಗಳಲ್ಲಷ್ಟೇ ಅವರ ಬಗ್ಗೆ ಕಾಳಜಿಯ ಮಾತುಗಳನ್ನಾಡಿ ಮರೆಯು ತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಖೇದ ವ್ಯಕ್ತಪಡಿಸಿದರು. ಕಮ್ಯೂನಿಸ್ಟ್ ದೇಶಗಳಿಗೆ ಹೋಲಿಸಿ ದಲ್ಲಿ ನಮ್ಮ ದೇಶದ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಇಂತಹ ವಿಚಾರ ಸಂಕಿರಣಗಳು ಹಾಗೂ ಜನಾಂದೋಲನ ಮೂಲಕ ಅವರಿಗೆ ಸೂಕ್ತ ಸ್ಥಾನಮಾನ ವನ್ನು ದೊರಕಿಸಿಕೊಡಬೇಕು. ಇಲ್ಲಿನ ಚಿಂತನೆಗಳು ಕೇವಲ ಕಾಗದದ ರೂಪದಲ್ಲಿ ಉಳಿಯದೆ ಅನುಷ್ಟಾನಗೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯದ ಮಹಾ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು ಮಾತನಾಡಿ, ಪ್ರಪಂಚ ಪರಿಕಲ್ಪನೆಗೆ ಶಕ್ತಿ ಸ್ವರೂಪಳಾದ ಮಹಿಳೆಯೇ ಆಧಾರ. ಮಹಿಳೆಯೇ ಇಲ್ಲದ ವಿಚಾರಗಳು ಅಪೂರ್ಣ. ಮಹಿಳೆಯಿಂದಲೇ ಪುರುಷ ಪರಿಪೂರ್ಣತೆ ಸಾಧಿಸಲು ಸಾಧ್ಯ ಎಂದು ಹೇಳಿದರು. ಪುರುಷರಿಗಿರುವ ಸ್ವತಂತ್ರ ಮಹಿಳೆ ಯರಿಗಿಲ್ಲವಾಗಿದೆ. ಗಂಡ ಸತ್ತರೆ ಪತ್ನಿಯ ಮೇಲೆ ಮಾನಸಿಕ ದೌರ್ಜನ್ಯ ನಡೆಸುವ ಪರಿಪಾಠ ಈಗಲೂ ಇದೆ. ಗಂಡ ಹೆಂಡತಿಯ ಮೇಲೆ ದೌರ್ಜನ್ಯ ನಡೆಸು ತ್ತಲೇ ಇದ್ದಾನೆ. ದೇವಿಯನ್ನು ಪೂಜಿಸುವ ನಾವು ಮನೆಯಲ್ಲಿ ತಾಯಿ ಹಾಗೂ ಪತ್ನಿ, ಸಹೋದರಿಯರನ್ನು ಯಾವ ಸ್ಥಾನದಲ್ಲಿಟ್ಟಿ ದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲವೂ ಕಾನೂನಿ ನಿಂದಲೇ ಸಾಧ್ಯವಿಲ್ಲ. ನಮ್ಮಲ್ಲಿ ಸ್ವಾಸ್ಥ್ಯ ಮೂಡಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ತಿಳಿಸಿದರು. ಹೆಣ್ಣು ಭ್ರೂಣಗಳನ್ನು ಇನ್ನೂ ಕೊಲ್ಲುತ್ತಲೇ ಹೋದಲ್ಲಿ ಮುಂದೊಂದು ದಿನ ದ್ರೌಪದಿಯಂತೆ ಒಬ್ಬಳನ್ನೇ ಐವರು ಮದುವೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಎಲ್ಲಿ ಮಹಿಳೆಗೆ ಪೂಜ್ಯ ಸ್ಥಾನ ದೊರಕುವುದಿಲ್ಲವೋ ಆಂತಹ ಸಂಸಾರ ಗಳು ವಿಫಲಗೊಳ್ಳುತ್ತವೆ. ಮಕ್ಕಳಿಗೂ ಸಂಸ್ಕಾರ ಸಿಗದು ಎಂದು ಎಚ್ಚರಿಸಿದರು. ಇಂದಿರಾಗಾಂಧಿಯಂತೆ ಯಾರೋ ಕೆಲವು ಮಹಿಳೆಯರು ಉನ್ನತ ಸ್ಥಾನಕ್ಕೇರಿದ ಕ್ಷಣ ಮಹಿಳೆಯರಿಗೆ ಸಲ್ಲಬೇಕಾದ ಸ್ಥಾನ ಗಳು ದೊರೆತಿವೆ ಎಂದು ಅರ್ಥೈಸುವುದು ತಪ್ಪು ಎಂದರು. ಮಲೆನಾಡು ತಾಂತ್ರಿಕ ಸಂಸ್ಥೆಯ ಖಜಾಂಚಿ ವೆಂಕಟೇಶಮೂರ್ತಿ, ಪ್ರಾಂಶು ಪ್ರಾಂಶುಪಾಲ ತಿಮ್ಮೇಗೌಡ ಹಾಜರಿದ್ದರು.