logo
Last updated: 2009-11-19 14:10:00
E-Paper
Archives
November 2009
M T W T F S S
« Oct   Dec »
 1
2345678
9101112131415
16171819202122
23242526272829
30  

ವಿದ್ಯುತ್ ಸಮಸ್ಯೆ:ಕತ್ತೆಗಳ ಅಣಕ ಪ್ರದರ್ಶನ-ರಸ್ತೆತಡೆ

ಹಾಸನ : ಅನಿಯಮಿತ ವಿದ್ಯುತ್ ಲೋಡ್ಶೆಡ್ಡಿಂಗ್ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಕತ್ತೆಗಳ ಅಣಕ ಪ್ರದರ್ಶನ ನಡೆಸಿದರಲ್ಲದೆ, ರಸ್ತೆ ತಡೆ ನಡೆಸಿ, ಧರಣಿ ನಡೆಸಿದರು. ಮಧ್ಯಾಹ್ನ ೧೨ ಗಂಟೆ ವೇಳೆಯಲ್ಲಿ ಅರಕಲಗೂಡಿಗೆ ತೆರಳುವ ಸಂತೆಪೇಟೆ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ನಂತರ ಎರಡು ಕತ್ತೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರ ಭಾವಚಿತ್ರ ವನ್ನು ಹಾಕಿಕೊಂಡು ಮೆರವಣಿಗೆನಡೆಸಿದರು. ಸಂತೆಪೇಟೆ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸ ಲಾಯಿತು. ರಸ್ತೆತಡೆಯಿಂದ ವಾಹನ ಸಂಚಾರಕ್ಕೆ ಭಾರೀಅಡಚಣೆಉಂಟಾಯಿತು. ಮೆರವಣಿಗೆಯು ನಗರದ ಸೆಸ್ಕ್ ಕಛೇರಿಯವರೆಗೂ ತೆರಳಿತು. ಕಛೇರಿಯ ಮುಂಭಾಗದಲ್ಲಿ ಪ್ರತಿಭಟನಾನಿರತರು ಕತ್ತೆಗಳೊಂದಿಗೆ ಪುನಃ ಧರಣಿ ಆರಂಭಿಸಿ ದರು. ಧರಣಿಯ ವೇಳೆ ಘೊಷಣೆ ಗಳೂ ಕೇಳಿ ಬಂದವು. ಈ ಸಂದರ್ಭದಲ್ಲಿ ಮಾತನಾಡಿದ ಧರಣಿನಿರತರು, ರಾಜ್ಯದ ಎಲ್ಲಾ ಜಲಾ ಶಯಗಳು ಭರ್ತಿಯಾಗಿದ್ದರೂ, ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಕ್ರಮವನ್ನು ಕಟುವಾಗಿ ಟೀಕಿಸಿದರು. ರಾಜ್ಯ ಬಿ.ಜೆ.ಪಿ. ಸರ್ಕಾರ ಜನರನ್ನು ಕತ್ತಲೆಯಲ್ಲಿಟ್ಟಿದೆ. ವಿದ್ಯುತ್ ಉತ್ಪಾ ದನೆಗೆ ಆದ್ಯತೆ ನೀಡುತ್ತಿಲ್ಲ. ರಾಜಕೀಯ ಮೇಲಾಟದಿಂದ ಈ ಸಮಸ್ಯೆ ಸೃಷ್ಟಿ ಯಾಗಿದೆ ಎಂದು ಹರಿಹಾಯ್ದರು. ಸಾಂಕೇತಿಕವಾಗಿ ಕತ್ತೆಗಳ ಅಣಕ ಪ್ರದರ್ಶನ ಮಾಡಲಾಗಿದೆ. ಸಮಸ್ಯೆ ಬಗೆ ಹರಿಯದಿದ್ದರೆ ಕತ್ತೆಗಳೊಂದಿಗೆ ವಿಧಾನ ಸೌಧಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆಹಾಕಲಿದ್ದಾರೆಎಂದುಎಚ್ಚರಿಸಿದರು. ಧರಣಿಯ ವೇಳೆ ಹೆಚ್.ಕೆ. ಮಹೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧು ಸೂಧನ್, ನಗರ ಘಟಕದ ಅಧ್ಯಕ್ಷ ಮುಷೀರ್ ಮತ್ತಿತರರು ಹಾಜರಿದ್ದರು.


Thursday, November 19th, 2009 at 2:10 pm

SocialTwist Tell-a-Friend

Be the first to write to Editor

Write to the Editor