ಇಳಿಕೆಯಾಗದಈರುಳ್ಳಿಬೆಲೆ:ಕ್ಯಾರೆಟ್-ಬೀನ್ಸ್ತುಟ್ಟಿ
ಹಾಸನ :ಕ್ಯಾರೆಟ್ ಕೆ.ಜಿ.ಗೆ ೪೦ ರೂ., ಬೀನ್ಸ್ ೩೨ ರೂ. ಎಂದರೆ ನಂಬುತ್ತೀರಾ? ಮಂಗಳವಾರದ ಸಂತೆಯಲ್ಲಿ ಈ ದರದಲ್ಲಿ ಕ್ಯಾರೆಟ್ ಹಾಗೂ ಬೀನ್ಸ್ ಮಾರಾಟವಾಯಿತು. ಗ್ರಾಹಕರು ಈ ದರ ಕೇಳುತ್ತಿದ್ದಂತೆಯೇಹೌಹಾರಿದರು. ಕಳೆದ ವಾರದಿಂದ ಬೀನ್ಸ್ ಹಾಗೂ ಕ್ಯಾರೆಟ್ ಬೆಲೆ ಏರುತ್ತಲೇ ಇದೆ. ಈ ಬಾರಿ ವಿಪರೀತ ಮಳೆಯ ಕಾರಣ ಕ್ಯಾರೆಟ್ ಹಾಗೂ ಬೀನ್ಸ್ಗೆ ರೋಗ ತಗುಲಿಕೊಂಡಿದೆ. ಹಾಗಾಗಿ ಉತ್ತಮ ಇಳುವರಿ ಇಲ್ಲ. ಹಾಸನದ ಸುತ್ತಮುತ್ತ ಬೆಳೆಯುವ ಬೀನ್ಸ್, ಇಲ್ಲಿನ ಮಾರುಕಟ್ಟೆಗೆ ಬರು ತ್ತಿಲ್ಲ. ಜಮೀನಿನಲ್ಲಿಯೇ ಬೀನ್ಸ್ ಕರಗಿ ಹೋಗಿದೆ.ಈಹಿನ್ನಲೆಯಲ್ಲಿ ಬೀನ್ಸ್ನ ಬೆಲೆ ಏರುತ್ತಲೇ ಇದೆ. ಕ್ಯಾರೆಟ್ ಕೂಡ ಇದಕ್ಕೇನೂ ಹೊರತಾಗಿಲ್ಲ. ಕಳೆದ ಎರಡು ತಿಂಗಳಿನಿಂದಲೂ ಈರುಳ್ಳಿ ಬೆಲೆ ಏರಿಕೆಯಾಗಿದ್ದರೂ, ಕಡಿಮೆಯಾಗಿಲ್ಲ. ಮಂಗಳವಾರ ಕೂಡ ಕೆ.ಜಿ.ಈರುಳ್ಳಿ೩೦ರೂ.ದರನಿಗದಿಯಾಗಿತ್ತು. ಉತ್ತರ ಕರ್ನಾಟಕದಲ್ಲಿ ವಿಪರೀತ ಮಳೆಯ ಪರಿಣಾಮ ಈರುಳ್ಳಿ ಕೊಳೆತು ಹೋಗಿದೆ. ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಭಾಗಗಳಿಂದ ನಗರಕ್ಕೆ ಬರುತ್ತಿದ್ದ ಈರುಳ್ಳಿ ಪ್ರಮಾಣ ಕಡಿಮೆ ಯಾಗಿದೆ. ಇದರಿಂದ ಈರುಳ್ಳಿ ಬೆಳೆ ಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಾಸನ ನಗರದ ಹಲವು ಸಗಟು ವರ್ತಕರು ಕ್ಯಾರೆಟ್ ಹಾಗೂ ಬೀನ್ಸ್ ಅನ್ನು ಖರೀದಿಸಲು ಚಿಕ್ಕಮಗಳೂರು, ಶಿವಮೊಗ್ಗಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಚಿಕ್ಕಮಗಳೂರಿನಲ್ಲಿ ಕಿಲೋ ಬೀನ್ಸ್ಗೆ ೨೮ ರೂ. ಇದೆ. ಶಿವಮೊಗ್ಗದಲ್ಲಿಯೂ ಹತ್ತಿರ ಹತ್ತಿರ ಇಷ್ಟೇ ದರ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಗಟು ವರ್ತಕರು, ನಗರದಲ್ಲಿ ಬೀನ್ಸ್ ಮತ್ತು ಕ್ಯಾರೆಟ್ಗೆ ವಿಪರೀತ ಬೇಡಿಕೆ ಇದೆ. ಪೂರೈಕೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ದರ ನಿಗದಿಪಡಿಸಿದರೂ, ಮಾರಾಟವಾಗುತ್ತದೆ.ಆದರೆದಾಸ್ತಾನೇಇಲ್ಲ ಎಂದು‘ಜನತಾಮಾಧ್ಯಮ’ಕ್ಕೆತಿಳಿಸಿದರು. ಹೊರ ಜಿಲ್ಲೆಗಳಿಂದ ಬೀನ್ಸ್- ಕ್ಯಾರೆಟ್ಗಳನ್ನು ತಂದು ಮಾರಾಟ ಮಾಡಿದರೆ ಅಲ್ಪ ಸ್ವಲ್ಪ ಲಾಭ ಉಳಿಯ ಬಹುದು ಎಂದು ಹೇಳುತ್ತಾರೆ ಸಗಟು ವರ್ತಕ ನಾಗಣ್ಣ.