ಇಂದು ಬಿ.ಜೆ.ಪಿ. ಶಾಸಕಾಂಗ ಪಕ್ಷದ ಸಭ

ಬೆಂಗಳೂರು : ಸರ್ಕಾರಕ್ಕೊಂದು ಬಿ.ಜೆ.ಪಿ. ಸಮನ್ವಯ ಸಮಿತಿ ರಚನೆಯಾಗಿದೆ. ಈ ಬೆಳವಣಿಗೆಯ ನಡುವೆಯೇ ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವೆಂಕಯ್ಯ ನಾಯ್ಡು ಈಗಾಗಲೇ ಬೆಂಗಳೂರಿಗೆ ಆಗ ಮಿಸಿದ್ದಾರೆ. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸಭೆಯಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ಪಕ್ಷದಲ್ಲಿನ ಭಿನ್ನಮತ ಕುರಿತಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀವ್ರ ವಾಗಿ ಚರ್ಚೆ ನಡೆಯಲಿದೆ. ಸಂಪುಟ ಪುನರ್ರಚನೆ ದಿನಾಂಕವನ್ನು ಸಭೆಯಲ್ಲಿ ನಿರ್ಧರಿಸಲಾಗುವುದು. ಜಗದೀಶ್ ಶೆಟ್ಟರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಸಚಿವ ಸ್ಥಾನಕ್ಕಾಗಿ ಪುನಃ ಲಾಬಿಗಳು ಆರಂಭವಾಗಿವೆ. ರೇಣುಕಾ ಚಾರ್ಯ ನೇತೃತ್ವದಲ್ಲಿ ಪ್ರತ್ಯೇಕ ಶಾಸಕರ ಸಭೆ ನಡೆದಿದೆ. ಈ ಸಭೆಯಲ್ಲಿ ಶಾಸಕ ರಾದ ಬೆಳ್ಳುಬಿ,ಸಂಪಂಗಿಮತ್ತಿತರರು ಇದ್ದರು. ಸಚಿವ ಕರುಣಾಕರ ರೆಡ್ಡಿ ನಿವಾಸದಲ್ಲಿ ಅತೃಪ್ತ ಶಾಸಕರ ಗುಂಪೊಂದು ಸಭೆ ನಡೆಸಿ, ತಮ್ಮ ಮುಂದಿನ ರಾಜಕೀಯ ಹೆಜ್ಜೆ ಕುರಿತು ಚರ್ಚೆ ನಡೆಸಿದೆ. ಮಂಗಳವಾರ ನಡೆಯುವ ಬಿ.ಜೆ.ಪಿ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಷ್ಠಾ ವಂತ ಶಾಸಕರನ್ನು ಗುರುತಿಸಬೇಕೆಂದು ಒತ್ತಡ ಹೇರಲಿದೆ. ಇದೇ ಸಂದರ್ಭದಲ್ಲಿ ಸಮನ್ವಯ ಸಮಿತಿ ಸಭೆಯನ್ನು ರಚಿಸಲಾಗಿದೆ. ಯಡ್ಡಿ ಬೆಂಬಲಿಗರೇ ಸಮಿತಿಯಲ್ಲಿ ಸಿಂಹಪಾಲು ಪಡೆದಿದ್ದಾರೆ. ಇದು ರೆಡ್ಡಿ ಬಣದವರ ಕೆಂಗಣ್ಣಿಗೆ ಗುರಿಯಾಗಿದೆ. ಜಗದೀಶ್ ಶೆಟ್ಟರ್ ಅವರೊಂದಿಗೆ ರೆಡ್ಡಿ ಬಣದವರನ್ನು ಸಂಪುಟಕ್ಕೆ ಸೇರ್ಪಡೆ ಗೊಳಿಸಿಕೊಳ್ಳಬೇಕೆಂದು ತೀವ್ರ ಒತ್ತಡ ಹೇರಲಾಗಿತ್ತು. ಆದರೆ ಶೆಟ್ಟರ್ ಅವ ರೊಬ್ಬರೇ ಸಂಪುಟಕ್ಕೆ ಸೇರ್ಪಡೆಯಾಗಿ ದ್ದಾರೆ. ಈಗ ಸಚಿವ ಆಕಾಂಕ್ಷಿಗಳು ಅತೃಪ್ತಗೊಂಡು ಈ ಸ್ಥಾನಕ್ಕೆ ಬಿರುಸಿನ ಲಾಬಿ ನಡೆಸುತ್ತಿದ್ದಾರೆ. ಮುಂದೆ ಏನಾ ಗುತ್ತದೋ ಕಾದು ನೋಡೋಣ.

untitled1.JPG

 

No Comments to “ಇಂದು ಬಿ.ಜೆ.ಪಿ. ಶಾಸಕಾಂಗ ಪಕ್ಷದ ಸಭ”

add a comment.

Leave a Reply