logo
Last updated: 2009-11-26 18:12:53
E-Paper
Archives
November 2009
M T W T F S S
« Oct   Dec »
 1
2345678
9101112131415
16171819202122
23242526272829
30  

ಭ್ರಷ್ಟರಚಿನ್ನದಗಣಿಯಾಗಿರುವಆಲೂರು:ತಲೆಎತ್ತಿರುವ ಆಯಿಲ್,ಮರಳುದಂಧೆ,ಜೂಜುಅಡ್ಡೆಗಳು

ಹಾಸನ :ಆಲೂರು ಪೊಲೀಸರು ಈಗ ಸುದ್ದಿಯಲ್ಲಿ ದ್ದಾರೆ. ಹಿಂದೆಂದೂ ಇಲ್ಲದಷ್ಟು ಭ್ರಷ್ಟಾಚಾರ, ಆಪಾದನೆ ಗಳು ಅವರ ಬೆನ್ನು ಹತ್ತಿವೆ. ಆಯಿಲ್ ದಂಧೆ, ಮರಳು ಸಾಗಾಣಿಕೆ, ಜೂಜು ಅಡ್ಡೆಗಳು, ಇವರ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ.ಅಪರಾಧಪ್ರಕರಣಗಳಲ್ಲಿಸಿಕ್ಕಿಬೀಳುವವರು ದಂಡಿಯಾಗಿ ಮಡಗಿದರೆ ಸುಲಭವಾಗಿ ಪಾರಾಗ ಬಹುದು. ಒಟ್ಟಿನಲ್ಲಿ ಆಲೂರು ಠಾಣೆ ಭ್ರಷ್ಟರ ಚಿನ್ನದ ಗಣಿಯಾಗಿದ್ದು, ಹೊಟ್ಟೆ ಬಿರಿಯುವಂತೆ ಉಣ್ಣುತ್ತಿದ್ದಾರೆ. ಈ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಇದ್ದರೂ, ಇಲಾಖೆಗೆ ನಿನ್ನೆ ಮೊನ್ನೆಯಷ್ಟೇ ಬಂದಿರುವ ಸಬ್ ಇನ್ಸ್ ಪೆಕ್ಟರ್ ಉದಯರವಿಯದೇ ಕಾರುಬಾರು. ಎಲ್ಲಿ ತಡಕಿ ದರೆ, ಎಷ್ಟು ಸಿಗುತ್ತದೆ ಎನ್ನುವುದನ್ನು ಕ್ಷಣಮಾತ್ರದಲ್ಲಿ ಊಹಿಸಿ,ಲೂಟಿಹೊಡೆಯುವಚಾಣಾಕ್ಷ.ಈತನತಿಂಗಳ ರೋಲ್ಕಾಲ್ ೫೦ ಸಾವಿರ ರೂ. ದಾಟುತ್ತಿದೆ. ಠಾಣೆಯ ಜೀಪ್ ಚಾಲಕ ಲಿಂಗರಾಜು ಹಾಗೂ ಪೇದೆ ಹರೀಶ್ ಎಂಬುವವರನ್ನು ಮಾಮೂಲು ವಸೂಲಿಗೆ ನೇಮಿಸಲಾಗಿದೆ. ಇವರು ತಮ್ಮ ಪಾಲನ್ನು ಎತ್ತಿಟ್ಟುಕೊಂಡು ಉಳಿದಿದ್ದನ್ನು ಉದಯರವಿಗೆ ಒಪ್ಪಿಸು ತ್ತಾರೆ. ಇಲ್ಲಿನ ಸರ್ಕಲ್ ಇನ್ಸ್ಪೆಕ್ಟರ್ ರಾಜು ಇವೆಲ್ಲವನ್ನೂ ಕಂಡು ಕಾಣದಂತೆ ಇದ್ದಾರೆ. ಇವರ ಮೌನ ಅವರ ಪ್ರಾಮಾಣಿಕತೆಯನ್ನೂ ಸಂದೇಹಿಸುತ್ತಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗಿರುವ ಆಯಿಲ್ ಪೈಪ್ಲೈನ್ಗೆ ಕಾರ್ಜುವಳ್ಳಿ ಬಳಿ ತೂತು ಕುಕ್ಕಿ ಪೆಟ್ರೋಲ್-ಡೀಸೆಲ್ ಕದ್ದ ಪ್ರಕರಣ ಉದಯರವಿ ಭ್ರಷ್ಟತೆಗೆ ತಾಜಾ ನಿದರ್ಶನವಾಗಿದೆ. ಇದೇ ಮಾದರಿ ಆಯಿಲ್ ಕಳ್ಳತನ ಅರೇಹಳ್ಳಿಯಲ್ಲಿ ಮೊದಲುನಡೆದಿತ್ತು.ಇದರಅರೋಪಿದಿನೇಶ್ಶೆಟ್ಟಿಯೇ ಕಾರ್ಜುವಳ್ಳಿ ಪ್ರಕರಣಕ್ಕೂ ಕೀ ಪ್ಲೇಯರ್. ಈತ ನೊಂದಿಗೆ ಬಾಳೆಕೊಪ್ಪಲಿನ ದರ್ಶನ್, ಆತನ ತಂದೆ ಕಾಂತ ರಾಜು, ಪೈಪ್ಲೈನ್ ವಾಚರ್ ಹೆಚ್.ಎ.ಗಿರೀಶ್ ಕೈ ಜೋಡಿಸಿದ್ದರು. ಇವರನ್ನು ಬುಧವಾರ ಬಂಧಿಸಲಾಗಿದೆ. ಇವರೆಲ್ಲರಿಂದಲೂ ಸಾಕಷ್ಟು ಕಿತ್ತಿದ್ದ ಉದಯರವಿ, ಇವರನ್ನೇ ನಾಪತ್ತೆ ಮಾಡಿದ್ದನು. ಇನ್ನು ಒಂದು ಹೆಜ್ಜೆ ಹೋಗಿ ಅವರೆಲ್ಲರಿಗೂ ನಿರೀಕ್ಷಣಾ ಜಾಮೀನು ಕೊಡಿ ಸಲುಪರದಾಡಿದ್ದನು.ಇವೆಲ್ಲವೂಹಿರಿಯಅಧಿಕಾರಿಗಳಿಗೆ ಗೊತ್ತಾಗಿ ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಉದಯರವಿ ಗೈರು ಹಾಜರಿಯಲ್ಲಿ ನಗರದ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿ ದರು. ಸಕಲೇಶಪುರ ಡಿ.ವೈ.ಎಸ್.ಪಿ. ಕಲಾ ಕೃಷ್ಣ ಸ್ವಾಮಿ ಅವರೇ ಈಗ ತನಿಖೆ ನಡೆಸುತ್ತಿದ್ದಾರೆ.


Thursday, November 26th, 2009 at 6:12 pm

SocialTwist Tell-a-Friend

Be the first to write to Editor

Write to the Editor