ಅಕಾಲಿಕ ಮಳೆ : ಜಿಲ್ಲೆಯಲ್ಲಿ ೧೦೦ ಕೋಟಿ ರೂ. ಕಾಫಿ ಹಾನಿ ನಿರೀಕ್ಷೆ
ಹಾಸನ: ಕಾಫಿ ಬೆಳೆಗಾರರು ಬಾಣಲೆ ಯಿಂದ ಬೆಂಕಿಗೆ ಬಿದ್ದಿದ್ದಾರೆ. ಕೆಲವು ವರ್ಷ ಗಳಿಂದಲೂ ಸತತ ನಷ್ಟದಿಂದ ಸಂಕಷ್ಟದಲ್ಲಿದ್ದ ಬೆಳೆಗಾರರು,ಈವರ್ಷವೂ ಕೈ ಸುಟ್ಟುಕೊಂಡಿ ದ್ದಾರೆ. ವಾಯುಭಾರ ಕುಸಿತದಿಂದಾಗಿ ಇತ್ತೀ ಚೆಗೆ ಬಿದ್ದ ಅರೆಕಾಲಿಕಮಳೆಯಿಂದಶೇ.೩೦ರಷ್ಟು ಫಸಲುಹಾಳಾಗಿದೆ.ಜಿಲ್ಲೆಯಲ್ಲಿ ಅಂದಾಜು೧೦೦ ಕೋಟಿ ರೂ., ರಾಷ್ಟ್ರಾದ್ಯಂತ ಸುಮಾರು ೫೦೦ ಕೋಟಿರೂ.ಹಾನಿಸಂಭವಿಸುವನಿರೀಕ್ಷೆಯಿದೆ. ಡಿಸೆಂಬರ್ಎರಡನೇವಾರದಲ್ಲಿಮತ್ತೊಂದು ವಾಯುಭಾರ ಕುಸಿತದ ಭೀತಿಯಿದೆ. ಮಳೆ ಬಿರುಸುಗೊಂಡರೆ ಇನ್ನೂ ಹೆಚ್ಚಿನಅನಾಹುತದ ಆತಂಕ ವಿದೆ. ಇದು ನಿಜವಾದಲ್ಲಿ ಕಾಫಿ ಬೆಳೆ ಗಾರರುಮುಳುಗೇಹೋಗುತ್ತಾರೆ. ಅರೇಬಿಕಾ ಶೇ.೭೦ರಷ್ಟು ಹಣ್ಣಾಗಿದ್ದು, ಕೊಯ್ಲು ನಡೆಯುತ್ತಿದೆ. ಕಳೆದ ೧೫ ದಿನ ಗಳಿಂದಲೂಸುರಿಯುತ್ತಿದ್ದ ಮಳೆ,ಹಣ್ಣುಕೀಳಲು ಅಡ್ಡಿಪಡಿಸಿತು. ಹಣ್ಣಿನ ಮೇಲೆ ಕೂತ ಮಳೆ ಹನಿಗಳು,ಹಣ್ಣನ್ನು ನೆಲಕಚ್ಚಿಸುತ್ತಿವೆ.ಕಾಯಿಲ್ಲದ ಗಿಡಗಳಲ್ಲಿ ಅವಧಿಗೆ ಮುನ್ನವೇ ಹೂ ಅರ ಳಿಸುತ್ತಿದೆ. ಕೂಲಿ ಕಾರ್ಮಿಕರಿಗೆ ಬರ ಬಂದಿರುವ ಇಂದಿನ ದಿನಗಳಲ್ಲಿ, ನೆಲಕ್ಕೆ ಬಿದ್ದ ಹಣ್ಣನ್ನು ಆಯುವುದು ತೀರಾ ಕಠಿಣ. ಹಣ್ಣನ್ನು ಬಿಟ್ಟರೆ ಕಾಯಿ ಕೊರಕ ಹುಳುಗಳು ಶಾಶ್ವತ ನೆಲೆ ಕಂಡು ಮುಂದಿನ ಫಸಲಿಗೆ ಮಾರಕವಾಗುತ್ತವೆ. ಈ ಸಂಕಷ್ಟದಿಂದ ಕೂಲಿಯೂ ದುಪ್ಪಟ್ಟಾ ಗುತ್ತಿದ್ದು, ಫಸಲಿನ ಪರಿಮಾಣಹಾಗೂಗುಣಮಟ್ಟ ನೆಗೆದು ಬಿದ್ದು ಹೋಗಿದೆ.