ಯೂನಿಟ್ವಿದ್ಯುತ್ಗೆ೩೦ಪೈಸೆಹೆಚ್ಚಳ

ಬೆಂಗಳೂರು : ನಿರಂತರವಾಗಿ ವಿದ್ಯುತ್ ನೀಡಲಾಗದಿದ್ದರೂ, ದರವನ್ನು ಏರಿಸಲು ಸರ್ಕಾರನಿರ್ಧರಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರ,ಪ್ರತಿಯೂನಿಟ್ಗೆ೧೦ಪೈಸೆಯಿಂದ ೩೦ಪೈಸೆಯವರೆಗೆ ಏರಿಸಿದೆ.ಪರಿಷ್ಕೃತದರಗಳು ಡಿಸೆಂಬರ್೧ರಿಂದಲೇ ಜಾರಿಗೆಬರಲಿದೆಎಂದು ಕರ್ನಾಟಕವಿದ್ಯುತ್ನಿಯಂತ್ರಣಾಆಯೋಗ ತಿಳಿಸಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ವಿದ್ಯುತ್ ಶಾಕ್ ನೀಡ ಲಾಗಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಹೊಸದರಗಳುಜಾರಿಗೆಬರುತ್ತದೆಎಂದುಹೇಳ ಲಾಗಿತ್ತು. ಆದರೆ ಡಿ. ೧ ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ವಿದ್ಯುತ್ ವಿತರಣಾ ಕಂಪೆನಿಗಳು ಪ್ರತಿ ಯೂನಿಟ್ಗೆ೫೧ಪೈಸೆಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗಕ್ಕೆ ಕಳೆದ ಜೂನ್ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ರಾಜ್ಯ ದ್ಯಾಂತ ಸಾರ್ವಜನಿಕರ ಅಭಿಪ್ರಾಯ ಸಂಗ್ರ ಹಿಸಿದ ಆಯೋಗವು, ಅಂತಿಮವಾಗಿ ಯೂನಿಟ್ಗೆ ೩೦ ಪೈಸೆ ಹೆಚ್ಚಿಸಲು ತೀರ್ಮಾನಿಸಿದೆ. ಈನಡುವೆ ಕೆ.ಎಂ.ಎಫ್. ಕೂಡ ನಂದಿನಿ ಹಾಲಿನದರ ಹೆಚ್ಚಿಸಲುಯೋಚಿಸಿದ್ದು,ಹೊಸ ವರ್ಷದಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಇಂಧನಸಚಿವಈಶ್ವರಪ್ಪ ತಿಳಿಸಿದ್ದಾರೆ. ವಿದ್ಯುತ್ಕೊರತೆಉಂಟಾಗಿದ್ದು,ಮುಂದಿನ ದಿನಗಳಲ್ಲಿ ಮಳೆ ಬೀಳುವ ಸಂಭವವಿದೆ. ಮಳೆ ಬಂದುಜಲಾಶಯ ತುಂಬಿದರೆವಿದ್ಯುತ್ಅಭಾವ ಉಂಟಾಗದುಎಂದುಅವರುಗಳುಹೇಳಿದ್ದಾರೆ. ಪಟ್ಟಣಗಳಲ್ಲಿ ದಿನಕ್ಕೆ ನಾಲ್ಕು, ಗ್ರಾಮೀಣ ಪ್ರದೇಶಗಳಲ್ಲಿ ಎಂಟು ಗಂಟೆಗಳಕಾಲವಿದ್ಯುತ್ ಕಡಿತಗೊಳಿಸುತ್ತಿರುವಸರ್ಕಾರಕ್ಕೆವಿದ್ಯುತ್ದರ ಏರಿಸುವ ನೈತಿಕತೆ ಇಲ್ಲ ಎಂದು ಬಳಕೆದಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.

No Comments to “ಯೂನಿಟ್ವಿದ್ಯುತ್ಗೆ೩೦ಪೈಸೆಹೆಚ್ಚಳ”

add a comment.

Leave a Reply

You must be logged in to post a comment.