ಶಿವರಾಂ ನಿವಾಸಕ್ಕೆ ಜೆ.ಡಿ.ಎಸ್. ಮುಖಂಡರ ಭೇಟಿ
ಹಾಸನ :ಮಹತ್ವದ ಬೆಳವಣಿಗೆ ಯೊಂದರಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಬಿ.ಶಿವರಾಂ ಅವರ ನಿವಾಸಕ್ಕೆ ಗುರುವಾರ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ.ಜವರೇಗೌಡ ಮತ್ತು ವಿಧಾನ ಪರಿಷತ್ತಿನ ಜೆ.ಡಿ.ಎಸ್. ಅಭ್ಯರ್ಥಿ ಪಟೇಲ್ ಶಿವರಾಂ ತೆರಳಿ ಅರ್ಧ ಗಂಟೆಗೂ ಹೆಚ್ಚು ವೇಳೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಪಟೇಲ್ ಶಿವರಾಂ ಅವರು ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದರು. ಇದಕ್ಕೆ ಬಿ.ಶಿವ ರಾಂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎನ್ನಲಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಜೆ.ಡಿ.ಎಸ್.ನ ಕಟ್ಟಾ ವಿರೋಧಿಯಾಗಿರುವ ಬಿ.ಶಿವರಾಂ ಅವ ರನ್ನು ಜೆ.ಡಿ.ಎಸ್. ಮುಖಂಡರು ಭೇಟಿ ನೀಡಿ, ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೂ ಕಾರಣವಾಗಿದೆ. ಇದೇ ವೇಳೆ ಬಿ.ಶಿವರಾಂ ಅವರು, ಜೆ.ಡಿ.ಎಸ್. ಅಭ್ಯರ್ಥಿ ಪಟೇಲ್ ಶಿವ ರಾಂ ಅವರಿಗೆ ಚುನಾವಣೆಯಲ್ಲಿ ಸಹಾಯ ಮಾಡುವುದಾಗಿ ವಾಗ್ದಾನ ನೀಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪಟೇಲ್ ಶಿವರಾಂ ಅವರು ನಿಷ್ಠಾವಂತ ರಾಜಕಾರಣಿ. ಆದರೆ ಇಂದು ರಾಜ ಕಾರಣ ದಲ್ಲಿ ಪ್ರಾಮಾಣಿಕತೆ ಕೊರತೆ ಹೆಚ್ಚಾಗಿದೆ. ಹಾಗಾಗಿ ಪಟೇಲ್ ಶಿವರಾಂ ಅವರಂತಹ ವರು ರಾಜಕಾರಣದಲ್ಲಿ ಇರುವುದು ಅತ್ಯಗತ್ಯ ಎಂದು ಬಿ.ಶಿವರಾಂ ಹೇಳಿದ್ದಾರೆ. ಶಿವಣ್ಣಗೌಡ ವಿಧಾನ ಪರಿಷತ್ ಚುನಾ ವಣೆಗೆ ಸ್ಪರ್ಧಿಸಿದ್ದಾರೆ. ನಾಮಪತ್ರವನ್ನು ವಾಪಸ್ಸು ತೆಗೆದುಕೊಳ್ಳುವಂತೆ ತಿಳಿ ಹೇಳು ತ್ತೇನೆ ಎಂದು ಭರವಸೆ ನೀಡಿದ್ದಾರೆ. ಮೈತ್ರಿಗೆ ಸಂಬಂಧಿಸಿದಂತೆ ಹೈ ಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಹೈಕಮಾಂಡ್ ಸೂಚನೆಯನ್ನು ಪಾಲಿಸು ತ್ತೇನೆ. ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಇದೆ. ಕಾರ್ಯಕರ್ತರ ಅಭಿಪ್ರಾಯ ವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಜೆ.ಡಿ.ಎಸ್. ಮುಖಂಡರ ಜೊತೆ ಮಾತುಕತೆ ವೇಳೆ ಹೇಳಿದ್ದಾರೆ ಇನ್ನು ೮-೧೦ ದಿನಗಳಲ್ಲಿ ತಮ್ಮೊಡನೆ ಪ್ರಚಾರಕ್ಕೆ ಬರು ವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್.ಕೆ.ಜವರೇಗೌಡ ಹಾಗೂ ಪಟೇಲ್ ಶಿವರಾಂಅವರುತೆರಳಿದ್ದ ವೇಳೆ ಹೆಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕಾರ್ಲೆ ಇಂದ್ರೇಶ್ ಕೂಡ ಹಾಜರಿದ್ದರು. ಈ ಸಂದರ್ಭದಲ್ಲಿ ೪ ಮಂದಿ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಇಬ್ಬರು ವಕೀ ಲರು ಹಾಗೂ ಕಾರ್ಯಕರ್ತರು ಇದ್ದರು. ಅವ ರನ್ನು ಹೊರ ಕಳುಹಿಸಿ ಈ ಮುಖಂಡರು ಮಾತುಕತೆ ನಡೆಸಿದ್ದಾರೆ.