ಅಕ್ರಮಸಕ್ರಮಯೋಜನೆ:ಸಂಪುಟಸಭೆಒಪ್ಪಿಗೆ

ಬೆಂಗಳೂರು:ಅಕ್ರಮ-ಸಕ್ರಮ ಯೋಜನೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಕ್ರಮ-ಸಕ್ರಮ ಯೋಜನೆ ಜಾರಿ ಗೊಂಡಿದೆ. ಇದಕ್ಕೆ ಹಲವು ರಿಯಾ ಯಿತಿಗಳನ್ನು ಘೊಷಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಮೂರು ತಿಂಗಳ ಅವಕಾಶ ವನ್ನೂ ನೀಡಲಾಗಿದೆ. ಸಚಿವ ಸಂಪುಟ ಸಭೆ ನಂತರ ಸುದ್ದಿ ಗಾರರಿಗೆ ವಿವರ ನೀಡಿದ ಸಾರಿಗೆ ಸಚಿವ ಆರ್.ಅಶೋಕ್,ಈಯೋಜನೆಯಲ್ಲಿ ವಸತಿ ಕಟ್ಟಡಕ್ಕೆ ಶೇ.೫೦ರಷ್ಟು ದಂಡ ರಿಯಾಯಿತಿ ನೀಡಲಾಗಿದೆ ಎಂದು ವಿವ ರಿಸಿದರು. ನಾಗರಿಕರಿಗೆ ಹೆಚ್ಚಿನ ರಿಯಾಯಿತಿ ಯನ್ನು ನೀಡಲಾಗಿದೆ. ಈ ಬಾರಿ ಹೊರತುಪಡಿಸಿ, ಮುಂದೆ ಅಕ್ರಮ- ಸಕ್ರಮ ಯೋಜನೆ ಜಾರಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಯಚೂರಿನಲ್ಲಿ ಚಿನ್ನದ ಗಣಿ ಗಾರಿಕೆಯನ್ನು ಸರ್ಕಾರದ ವತಿ ಯಿಂದಲೇ ನಡೆಸಲು ತೀರ್ಮಾನಿಸ ಲಾಗಿದೆ. ಹಾಗಾಗಿ ಗಣಿ ಕಾರ್ಮಿಕರಿಗೆ ಸಹಾಯಕವಾಗಲಿದೆ. ಹಲವಾರು ವರ್ಷಗಳಿಂದಲೂ ಈ ಬೇಡಿಕೆಯನ್ನು ಈಡೇರಿಸಲಿಲ್ಲ. ಇದ ಲ್ಲದೆ, ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಮುಂದೆ ತುಮಕೂರು ನಗರಕ್ಕೆ ಸರ್ಕಾರ ಹೆಚ್ಚಿನ ಅನುದಾನದ ನೆರವನ್ನು ಒದಗಿಸಲಿದೆ. ಮೈಸೂರಿನ ಚಾಮಲಾಪುರ ವಿದ್ಯುತ್ ಘಟಕವನ್ನು ಕೈ ಬಿಡಲು ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ. ಚುನಾ ವಣೆ ನಡೆಯುವ ಹಿನ್ನಲೆಯಲ್ಲಿ ಸಂಪುಟ ಸಭೆಯು ಹಲವು ಮಹತ್ವದ ತೀರ್ಮಾನ ಗಳನ್ನು ಕೈಗೊಂಡಿದೆ. ಸಂಪುಟ ಸಭೆಯಲ್ಲಿ ಬಹುತೇಕಎಲ್ಲಾ ಸಚಿವರೂಪಾಲ್ಗೊಂಡಿದ್ದರು.

No Comments to “ಅಕ್ರಮಸಕ್ರಮಯೋಜನೆ:ಸಂಪುಟಸಭೆಒಪ್ಪಿಗೆ”

add a comment.

Leave a Reply

You must be logged in to post a comment.