ಕೆ.ಎಸ್.ಈಶ್ವರಪ್ಪಬಿ.ಜೆ.ಪಿ.ಗೆನೂತನಸಾರಥಿ

ಬೆಂಗಳೂರು : ಬಿ.ಜೆ.ಪಿ. ನೂತನ ರಾಜ್ಯಾಧ್ಯಕ್ಷರಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಗುರುವಾರ ಅವಿ ರೋಧವಾಗಿ ಆಯ್ಕೆಯಾಗುವ ಮೂಲಕ ಮೂರನೇ ಬಾರಿಗೆ ಅಧ್ಯಕ್ಷ ಗಾದಿಯ ಜವಾಬ್ದಾರಿ ವಹಿಸಿಕೊಂಡ ಶ್ಲಾಘನೆಗೆ ಒಳಗಾಗಿದ್ದಾರೆ. ಬಿ.ಜೆ.ಪಿ. ರಾಜ್ಯ ಘಟಕದ ನೂತನ ಸಾರಥ್ಯ ವಹಿಸಿಕೊಂಡಿರುವ ಈಶ್ವರಪ್ಪ ಅವರು ಗುರುವಾರ ಸಂಜೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿ.ಜೆ.ಪಿ. ವರಿಷ್ಠರು ಅಭಿನಂದನೆ ಸಲ್ಲಿಸಿದ್ದಾರೆ. ಜ.೩೦ರಂದು ನಗರದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ನಿರ್ಗಮಿತ ಅಧ್ಯಕ್ಷ ಡಿ.ವಿ. ಸದಾನಂದಗೌಡ ಅವರು ಈಶ್ವರಪ್ಪ ನವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಜನವರಿ ೨೦ರಂದು ನಡೆದ ರಾಜ್ಯ ಬಿ.ಜೆ.ಪಿ. ಉನ್ನತ ಮಟ್ಟದ ಸಭೆಯಲ್ಲಿ ಈಶ್ವರಪ್ಪ ಅವರ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿತ್ತು. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭಾನುವಾರ ರಾತ್ರಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಣಯಕ್ಕೆ ಅನುಮೋದನೆ ನೀಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗೂ ಮುನ್ನ ಬಿ.ಜೆ.ಪಿ. ರಾಜ್ಯಾಧ್ಯಕ್ಷಗಿರಿಗೆ ಶಾಸಕ ಸಿ.ಟಿ.ರವಿ, ಸಚಿವ ಅರವಿಂದ ಲಿಂಬಾ ವಳಿ, ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಶೋಭಾ ಕರಂದ್ಲಾಜೆ, ಮಾಜಿ ಸಂಸದ ಸಿ.ಹೆಚ್.ವಿಜಯ್ ಶಂಕರ್ ಅವರು ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಕೊನೆಯ ಹಂತದ ಮಹತ್ವದ ಬೆಳವಣಿಗೆ ಎಂಬಂತೆ ಈಶ್ವರಪ್ಪ ಅವರ ಹೆಸರೇ ಅಂತಿಮಗೊಂಡಿತ್ತು. ಆಡಳಿತ ಪಕ್ಷವನ್ನು ಪದೇ ಪದೇ ಕಾಡುತ್ತಿರುವ ಭಿನ್ನಮತದ ಕೂಗು ಹಾಗೂ ಕುರುಬ ಸಮುದಾಯಕ್ಕೆ ಪ್ರಾತಿ ನಿಧ್ಯ ನೀಡುವ ಮೂಲಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವ ರಿಗೆ ಎದುರಾಳಿಯನ್ನಾಗಿಸುವ ತಂತ್ರ ಗಾರಿಕೆಯ ಹಿನ್ನಲೆಯಲ್ಲಿ ಈಶ್ವರಪ್ಪನವ ರನ್ನು ಅಧ್ಯಕ್ಷ ಪಟ್ಟಕ್ಕೆ ಏರಿಸಲಾಗಿದೆ ಎಂಬುದು ರಾಜ್ಯ ರಾಜಕಾರಣದ ಪಡ ಸಾಲೆಯಲ್ಲಿ ಕೇಳಿ ಬರುತ್ತಿದೆ. ಹಿಂದುಳಿದ ಕುರುಬ ಸಮುದಾಯಕ್ಕೆ ಆದ್ಯತೆ ನೀಡುವ ಹಿನ್ನಲೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿ.ಜೆ.ಪಿ. ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡ ಲಾಗಿದೆ. ಆ ಮೂಲಕ ಪ್ರತಿಪಕ್ಷ ಕಾಂಗ್ರೆಸ್ನ ಸಿದ್ದರಾಮಯ್ಯ ಅವರನ್ನು ಹಣಿಯಲು ಈ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.

No Comments to “ಕೆ.ಎಸ್.ಈಶ್ವರಪ್ಪಬಿ.ಜೆ.ಪಿ.ಗೆನೂತನಸಾರಥಿ”

add a comment.

Leave a Reply

You must be logged in to post a comment.