ದೇವೇಗೌಡ-ಯಡ್ಯೂರಪ್ಪ ಮಖಾಮಖಿ

ಬೆಂಗಳೂರು :ನೈಸ್ ವಿವಾದ ತಾರಕ ಕ್ಕೇರಿದ ನಂತರ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನು ್ನ ಶನಿವಾರ ಸಂಜೆ ೪-೩೦ಕ್ಕೆ ಭೇಟಿ ಮಾಡಿದರು. ತಮ್ಮನ್ನು ವಾಚಾಮ ಗೋಚರ ನಿಂದಿಸಿದ್ದ ದೇವೇಗೌಡರನ್ನು ಪುಷ್ಪ ಗುಚ್ಛ ನೀಡುವುದರೊಂದಿಗೆ ಯಡಿ ಯೂರಪ್ಪ ಗೃಹ ಕಛೇರಿ ಕೃಷ್ಣಾಗೆ ಸ್ವಾಗತಿಸಿ ದರು. ರಾಜ್ಯ ರಾಜಕೀಯದಲ್ಲಿ ಈ ಐತಿ ಹಾಸಿಕ ರಾಜಕೀಯ ಬೆಳವಣಿಗೆ ದಾಖ ಲಾಯಿತು. ದೇವೇಗೌಡರು ನೈಸ್ ವಿರುದ್ಧ ಬೀದಿ ಗಿಳಿದು ಸತ್ಯಾಗ್ರಹ ನಡೆಸಿದ್ದರಲ್ಲದೆ, ರಾಜ್ಯ ಪಾಲರನ್ನೂ ಭೇಟಿಯಾಗಿದ್ದರು. ಇದೀಗ ನೇರ ವಾಗಿ ಸಿ.ಎಂ. ಭೇಟಿ ಮಾಡಿ ಮಾತುಕತೆ ನಡೆಸಿದರು. ನೈಸ್ ಕುರಿತ ಹಳೆಯ ಕಡತ ಗಳನ್ನೇ ದೇವೇಗೌಡರು ಸಮಾಲೋಚನೆ ಯಲ್ಲಿ ಮುಂದಿಟ್ಟರು. ಮುಖ್ಯಮಂತ್ರಿಗಳ ಜೊತೆ ಒಂದೂವರೆ ಗಂಟೆಗಳ ಚರ್ಚೆಯ ಬಳಿಕ ದೇವೇಗೌಡರು ಹೇಳಿದ್ದು, ಮುಖ್ಯಮಂತ್ರಿಗಳು ನಮ್ಮ ಎಲ್ಲ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು. ನೈಸ್ ಕುರಿತ ಎಲ್ಲ ದಾಖಲೆಗಳನ್ನು ಅವರಿಗೆ ನೀಡಲಾಯಿತು. ಸುಪ್ರೀಂ ಕೋರ್ಟ್ನ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳುವ ಭರ ವಸೆಯನ್ನು ನೀಡಿದರು ಎಂದು ತಿಳಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವ ರನ್ನು ಭೇಟಿ ಮಾಡುವುದಕ್ಕೂ ಮುನ್ನ ದೇವೇ ಗೌಡರು ಮಧ್ಯಾಹ್ನ ೧ ಗಂಟೆಗೆ ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ರಾಜ್ಯಪಾಲರಿಗೆ ಸಲ್ಲಿಸಿದ ನೈಸ್ ಕಡತಗಳನ್ನು ಮುಖ್ಯಮಂತ್ರಿ ಗಳಿಗೂ ಸಲ್ಲಿಸಿದರು. ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾ ದಲ್ಲಿ ಚರ್ಚೆ ನಡೆಯುತ್ತಿದ್ದರೆ, ಹೊರಗೆ ರೈತರು ಪ್ರತಿಭಟನೆಗಳಿಗೆ ಇಳಿದಿದ್ದರು. ನಮ್ಮನ್ನು ಮಾತುಕತೆಗೆಬಿಡಿಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ನಿಜವಾದ ಭೂಮಿ ಕಳೆದುಕೊಂಡ ರೈತರು ನಾವು ಎಂದು ಅವರು ಅಸಹನೆ ವ್ಯಕ್ತಪಡಿಸುತ್ತಿದ್ದರು. ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಆರ್.ಅಶೋಕ್, ಸುರೇಶ್ಕುಮಾರ್, ಉಮೇಶ್ ಕತ್ತಿ, ಡಿ.ಬಿ.ಚಂದ್ರೇಗೌಡ ಮುಂತಾದವರು ಸಮಾಲೋಚನೆಯಲ್ಲಿ ಉಪಸ್ಥಿತರಿದ್ದರು. ದೇವೇಗೌಡರ ಜೊತೆ ಸಿ.ಪಿ.ಎಂ. ಮುಖಂಡರಾದ ಜಿ.ಎನ್.ನಾಗ ರಾಜ್, ಶ್ರೀರಾಮ ರೆಡ್ಡಿ ಸೇರಿದಂತೆ ಹಲವು ರೈತ ಮುಖಂಡರು ಚರ್ಚೆಯಲ್ಲಿ ಭಾಗ ವಹಿಸಿದ್ದರು.

No Comments to “ದೇವೇಗೌಡ-ಯಡ್ಯೂರಪ್ಪ ಮಖಾಮಖಿ”

add a comment.

Leave a Reply

You must be logged in to post a comment.