ವಿದ್ಯುತ್ಸಮಸ್ಯೆಬಗೆಹರಿಯದಿದ್ದರೆರಾಜಕೀಯನಿವೃತ್ತಿ

ಬೆಂಗಳೂರು : ವಿದ್ಯುತ್ ಸಮಸ್ಯೆ ಬಗೆ ಹರಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದು ಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ಘೊಷಿಸಿದ್ದಾರೆ. ಸೋಮವಾರ ಗುಲ್ಬರ್ಗಾದಲ್ಲಿ ವಾಜ ಪೇಯಿ ಆರೋಗ್ಯ ಶ್ರೀ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯವು ಇನ್ನು ಮೂರೂ ವರೆ ವರ್ಷಗಳಲ್ಲಿ ವಿದ್ಯುತ್ ಸ್ವಾವ ಲಂಬನೆಯಾಗಲಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು. ವಿದ್ಯುತ್ ಸಮಸ್ಯೆಗೆ ಕೇಂದ್ರ ಸರ್ಕಾ ರವೇ ಕಾರಣ. ಆದರೆ ಅನಗತ್ಯವಾಗಿ ರಾಜ್ಯ ಸರ್ಕಾರದ ವಿರುದ್ಧ ಪುಡಿ ರಾಜ ಕಾರಣಿಗಳು ಮತ್ತು ಪ್ರತಿಪಕ್ಷದ ಮುಖಂಡರು ಟೀಕೆ ಮಾಡುತ್ತಿದ್ದಾರೆ ಎಂದು ಕೆಂಡಾಮಂಡಲವಾದರು. ಇದಕ್ಕೆ ಮುನ್ನ ಬಹಿರಂಗ ಸಭೆ ಯಲ್ಲಿಯೇ ಮುಖಮಂತ್ರಿ ಬಿ.ಎಸ್. ಯಡಿ ಯೂರಪ್ಪ ಮತ್ತು ಶಾಸಕ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯಿತು. ಮೊದಲಿಗೆ ಶಾಸಕ ಪಾಟೀಲ್, ನನ್ನ ಮನಸ್ಸಿಗೆ ನೋವಾಗಿದೆ. ಕಾರ್ಯಕ್ರಮ ಗಳಿಗೆ ಶಾಸಕರು ಬರುವ ಅಗತ್ಯವಿಲ್ಲ ಎಂದು ನೇರವಾಗಿ ಹೇಳಿ ಹೀಗೆ ಬಹಿ ರಂಗವಾಗಿಯೇ ಮುಖ್ಯಮಂತ್ರಿ ಯಡಿ ಯೂರಪ್ಪ ಅವರಲ್ಲಿ ಅಸಮಾಧಾನ ತೋಡಿಕೊಂಡರು.

No Comments to “ವಿದ್ಯುತ್ಸಮಸ್ಯೆಬಗೆಹರಿಯದಿದ್ದರೆರಾಜಕೀಯನಿವೃತ್ತಿ”

add a comment.

Leave a Reply