ಬೇಲೂರು:ಕಳ್ಳರಿಬ್ಬರಿಗೆ ಎಂಟು ತಿಂಗಳು ಜೈಲು

ಬೇಲೂರು:ಪ್ರತ್ಯೇಕ ಎರಡು ಕಳವು ಪ್ರಕರಣಗಳ ಆರೋಪಿಗಳಿಗೆ ಜೆ.ಎಂ.ಎಫ್.ಸಿ. ನ್ಯಾಯಾಲಯವು ಸಜೆ ಹಾಗೂ ದಂಡ ವಿಧಿಸಿದೆ. ೫-೮-೨೦೦೯ರಂದು ಸನ್ಯಾಸಿ ಹಳ್ಳಿಯ ಶನೇಶ್ವರಸ್ವಾಮಿ ದೇವಾ ಲಯದ ಕಳವು ಮಾಡಿದ್ದ ಶ್ರವಣಬೆಳ ಗೊಳ ಹೋಬಳಿ ಮಲ್ಲೇನಹಳ್ಳಿಯ ಶ್ರೀನಿವಾಸ್ಅಲಿಯಾಸ್ಸೀನಎಂಬಾತನಿಗೆ ೮ ತಿಂಗಳ ಸಾದಾ ಸಜೆ ಹಾಗೂ ೧ ಸಾವಿರ ರೂ. ದಂಡ ವಿಧಿಸಲಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ವಸತಿಗೃಹದಲ್ಲಿದ್ದ ಮೇರಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆಸಿದ್ದ ಶನಿ ವಾರಸಂತೆಯ ಗುಂಡೂರಾವ್ ಬಡಾ ವಣೆಯ ರಮೇಶ್ ಎಂಬಾತನಿಗೂ ೮ ತಿಂಗಳ ಸಾದಾ ಸಂಜೆ ಹಾಗೂ ೧ ಸಾವಿರ ರೂ. ದಂಡ ವಿಧಿಸಲಾಗಿದೆ. ಸರ್ಕಲ್ ಇನ್ಸ್ಪೆಕ್ಟರ್ ಜೆ.ರಘು ನ್ಯಾಯಾಲಯ ದಲ್ಲಿ ಮೊಕದ್ದಮೆ ಹೂಡಿದ್ದರು. ಕಳ್ಳಭಟ್ಟಿ ವಶ : ಅರೇಹಳ್ಳಿ ಹೋಬಳಿ ಬಿಟ್ಟೇಶ್ವರ ಗ್ರಾಮದ ವಿಠಲ ಶೆಟ್ಟಿ ಎಂಬುವವರ ಮನೆಯ ಹಿಂಭಾಗದ ಗುಡಿಸಲಿನಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದುದ್ದನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿ ೪೭೦ ಲೀಟರ್ ಬೆಲ್ಲದ ಕೊಳೆ ಹಾಗೂ ೪ ಲೀಟರ್ ಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಆರೋಪಿ ನಾಗೇಶ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿ, ಆತನಿಗಾಗಿ ಹುಡುಕ ಲಾಗುತ್ತಿದೆ. ಅಬಕಾರಿ ಉಪ ಆಯುಕ್ತ ಹೈದರ್ ಆಲಿ ಖಾನ್, ಉಪ ಅಧೀಕ್ಷಕಿ ರೂಪಶ್ರೀ, ನಿರೀಕ್ಷಕ ಸಂತೋಷ್, ಉಪ ನಿರೀಕ್ಷಕಿ ನೂರ್ ಜಹಾರ್, ಸಿಬ್ಬಂದಿಗಳಾದ ಸೋಮ ಶೆಟ್ಟಿ, ಹರೀಶ್, ಕೃಷ್ಣಮೂರ್ತಿ, ರಾಮೇಗೌಡ, ಪುಟ್ಟಸ್ವಾಮಿಗೌಡ, ದಾಳಿಯಲ್ಲಿ ಪಾಲ್ಗೊಂಡಿದ್ದರು. ಟ್ರಾನ್ಸ್ಫಾರ್ಮರ್ ಬಿಡಿಭಾಗ ಕಳವು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕೊಣನೂರು ಶಾಖೆಗೆ ಸೇರಿರುವ ಅರಕಲಗೂಡು ತಾಲ್ಲೂಕಿನ ಸಿದ್ದಾಪುರ ಗೇಟ್ ಬಳಿ ಹೊಸದಾಗಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ನಿಂದ ಬಿಡಿ ಭಾಗಗಳನ್ನು ಫೆಬ್ರವರಿ ೮ರ ರಾತ್ರಿ ಅಪಹರಿಸಲಾಗಿದೆ. ಬಿಡಿಭಾಗಗಳ ಬೆಲೆಯನ್ನು ತಿಳಿಸಿಲ್ಲ. ಸಹಾಯಕಅಭಿಯಂತರ ಈರಣ್ಣ ಕೊಣನೂರು ಪೊಲೀಸರಿಗೆ ದೂರು ನೀಡಿದ್ದಾರೆ.

No Comments to “ಬೇಲೂರು:ಕಳ್ಳರಿಬ್ಬರಿಗೆ ಎಂಟು ತಿಂಗಳು ಜೈಲು”

add a comment.

Leave a Reply

You must be logged in to post a comment.