logo
Last updated: 2010-02-11 13:52:10
E-Paper
Archives
February 2010
M T W T F S S
« Jan   Mar »
1234567
891011121314
15161718192021
22232425262728

ಸದಸ್ಯತ್ವ ರದ್ದು ತೀರ್ಪು :ಹೈಕೋರ್ಟ್ಗೆ ಮಧ್ಯಕಾಲೀನ ಅರ್ಜಿ

ಹಾಸನ : ನಗರಸಭಾ ಅಧ್ಯಕ್ಷೆ ಅಂಬಿಕಾ ರವಿಶಂಕರ್ ಸೇರಿದಂತೆ ಐವರು ನಗರಸಭಾ ಸದಸ್ಯರನ್ನು ಅನರ್ಹಗೊಳಿಸಿರುವ ಜಿಲ್ಲಾಧಿಕಾರಿ ಗಳ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ಮಧ್ಯಕಾಲೀನ ಅರ್ಜಿ ಸಲ್ಲಿಸಲಾಗಿದೆ. ಬುಧವಾರ ಹೈಕೋರ್ಟ್ಗೆ ತಡೆ ಯಾಜ್ಞೆ ಕೋರಿ ಅರ್ಜಿ ಸಲ್ಲಿಸ ಲಾಯಿತು. ಗುರುವಾರ ಈ ಕುರಿತಂತೆ ಮಧ್ಯಂತರ ತೀರ್ಪು ಹೊರ ಬೀಳಲಿದೆ. ನಗರಸಭಾ ಸದಸ್ಯ ಯತೀಶ್ (ಪ್ರಸ್ಸಿ) ಹಾಗೂ ಕಾಂಗ್ರೆಸ್ ಮುಖಂಡರು ಕಳೆದ ನಾಲ್ಕು ನಾಲ್ಕು ದಿನಗಳಿಂದಲೂ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿ ದ್ದಾರೆ. ವಜಾಗೊಂಡಿರುವ ಸದಸ್ಯ ವೆಂಕಟೇಶ್ ಹಾಗೂ ವಿಜಿ ಅವರ ಪರ ಅರ್ಜಿ ಸಲ್ಲಿಸಲಾಗಿದೆ. ಈ ನಡುವೆ ನಗರಸಭಾ ಅಧ್ಯಕ್ಷೆ ಅಂಬಿಕಾ ರವಿಶಂಕರ್, ನೇತ್ರಾವತಿ ಗಿರೀಶ್ ಹಾಗೂ ಏಜಾಜ್ ಪಾಷಾ ಅವರ ಕುರಿತು ಪ್ರತ್ಯೇಕವಾಗಿ ತಡೆ ಯಾಜ್ಞೆ ಕೋರಿ ಅರ್ಜಿ ಸಲ್ಲಿಕೆ ಆಗಿದೆ. ಎರಡು ಪ್ರತ್ಯೇಕ ಮಧ್ಯಕಾಲೀನ ಅರ್ಜಿ ಸ್ವೀಕರಿಸಿದ ಹೈಕೋರ್ಟ್ ತಿರ ಸ್ಕರಿಸುವುದು ಅಥವಾ ಪುರಸ್ಕರಿಸುವುದು ಗುರುವಾರ ಗೊತ್ತಾಗಲಿದೆ. ವೆಂಕಟೇಶ್ಹಾಗೂವಿಜಿಕಾಂಗ್ರೆಸ್ಪಕ್ಷ ತ್ಯಜಿಸಿಲ್ಲ. ಹಾಗಾಗಿ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಆಗಿಲ್ಲ. ಈ ಸದಸ್ಯರಿಬ್ಬರ ವಜಾ ಆದೇಶಕ್ಕೆ ತಡೆಯಾಜ್ಞೆ ನೀಡು ವಂತೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಐವರು ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದು ಹೊರ ಬಂದಿಲ್ಲ. ಅವರು ಪ್ರತ್ಯೇಕವಾಗಿ ನಾಗ ರಿಕ ಪಕ್ಷ ರಚಿಸಿಕೊಂಡಿದ್ದಾರೆ. ಈ ಕ್ರಮ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಅಲ್ಲ ವೆಂದು ಅಂಬಿಕಾ ರವಿಶಂಕರ್ ಪರ ವಕೀಲರು ವಾದಿಸಿದ್ದಾರೆ. ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಲಿದೆಯೇ ಅಥವಾ ಅರ್ಜಿಯನ್ನು ವಜಾ ಮಾಡಲಿದೆಯೇ? ಎಂಬುದನ್ನು ಕಾಲವೇ ನಿರ್ಧರಿಸಲಿದೆ.


Thursday, February 11th, 2010 at 1:52 pm

SocialTwist Tell-a-Friend

Be the first to write to Editor

Write to the Editor