ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಧರಣಿ

ಹಾಸನ:ಗ್ರಂಥಾಲಯಮೇಲ್ವಿಚಾರಕರ ಕುಟುಂಬಕ್ಕೆಪರಿಹಾರನೀಡುವಂತೆಒತ್ತಾಯಿಸಿ ಬುಧವಾರ ಮೇಲ್ವಿಚಾರಕರ ಸಂಘದ ನೂರಾರುಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದರು. ಬೆಳಿಗ್ಗೆ ನಗರದ ಜಿಲ್ಲಾ ಕೇಂದ್ರದ ಬಳಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಗ್ರಂಥಾಲಯ ಮೇಲ್ವಿಚಾರಕ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ಹತ್ತು ನಿಮಿಷಕ್ಕೂ ಹೆಚ್ಚು ವೇಳೆ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆ ನಡೆಸಿದರು. ಮೆರವಣಿಗೆ ವೇಳೆ ಘೊಷಣೆಗಳು ಕೇಳಿ ಬಂದವು. ಮಧ್ಯಾಹ್ನ ೨-೩೦ರ ಹೊತ್ತಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕರಿಗೆ ಮನವಿ ಸಲ್ಲಿಸಿದರು. ಗ್ರಾಮೀಣ ಗ್ರಂಥಾಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮೇಲ್ವಿಚಾರ ಕರು ಕಳೆದ ೨೧ ವರ್ಷಗಳಿಂದ ಪೂರ್ಣ ಕಾಲಿಕ ಸೇವೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಅಲ್ಪ ವೇತನದಲ್ಲಿ ಕುಟುಂಬ ನಿರ್ವಹಣೆ ಮಾಡಲಾಗದೆ ಹಲವು ಆತ್ಮ ಹತ್ಯೆಗೆ ಶರಣಾಗಿದ್ದಾರೆ ಎಂದು ಮನವಿ ಯಲ್ಲಿ ತಿಳಿಸಿದ್ದಾರೆ. ರಾಜ್ಯಾದ್ಯಂತ ಸುಮಾರು ೫೦ ಮೇಲ್ವಿಚಾರಕರು ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಜನ ಮೇಲ್ವಿಚಾರಕರು ಮರಣ ಹೊಂದಿ ದ್ದಾರೆ. ಇವರಿಗೆ ಯಾವುದೇ ಭದ್ರತೆ ಇಲ್ಲದೆ, ಸರ್ಕಾರದಿಂದ ಸವಲತ್ತು ಗಳೂ ಸಿಗದೆ ವಂಚಿತರಾಗಿದ್ದಾರೆಂದು ಹೇಳಿದ್ದಾರೆ. ನಿಧನ ಹೊಂದಿರುವ ಮೇಲ್ವಿ ಚಾರಕ ಕುಟುಂಬದ ಹಿತದೃಷ್ಟಿಯಿಂದ ೨ ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರಲ್ಲದೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಧರಣಿಯ ನೇತೃತ್ವವನ್ನು ಸಂಘದ ಅಧ್ಯಕ್ಷ ಕೆ.ವಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಎಸ್.ಆನಂದ ಮತ್ತಿ ತರರು ವಹಿಸಿದ್ದರು.

One Comment to “ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಧರಣಿ”

 1. shankar says:

  Sir
  I requested
  I am gulbrga university journalism student.
  fourth semester runing ,our desertation work is impact of readers in small news paper gulbarga stuy.
  But history of local news paper in karntaka sources not availbale.i requesting the any sources avialbale of your press office and other books sent the our E-mailud

Leave a Reply

You must be logged in to post a comment.