ಹಾಲಿನಜೊತೆಪೆಟ್ರೋಲ್ತುಟ್ಟಿ ಖಚಿತ

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳವು ನಂದಿನಿ ಹಾಲಿನ ಬೆಲೆಯನ್ನು ಲೀಟರ್ಗೆ ೩ ರಿಂದ ೪ ರೂ. ಏರಿಸಲು ಯೋಜಿಸಿದ್ದರೆ, ಅತ್ತ ಕೇಂದ್ರ ಸರ್ಕಾರ ಪೆಟ್ರೋಲ್ ದರ ನಿಯಂತ್ರಣ ವನ್ನು ಸ್ವತಂತ್ರಗೊಳಿಸಿ, ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಚಿಂತನೆಯಲ್ಲಿದೆ. ಹಾಲಿನ ದರ ಏರಿಕೆ ಪ್ರಸ್ತಾವನೆ ಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳುಹಿಸಲಾಗಿದ್ದು, ಅವರ ಒಪ್ಪಿಗೆ ಸಿಕ್ಕಿದ ತಕ್ಷಣ ಹೊಸ ದರ ಜಾರಿಗೆ ಬರಲಿದೆ. ಮಾರ್ಚ್ ಮೊದಲ ವಾರ ದಲ್ಲಿ ದರ ಹೆಚ್ಚಳವಾಗಬಹುದು ಎಂದು ಹಾಲು ಮಹಾಮಂಡಳದ ಅಧ್ಯಕ್ಷ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡು ತ್ತಿದ್ದ ಅವರು, ಉತ್ಪಾದನೆಯ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ದರ ಹೆಚ್ಚಳದ ಲಾಭಾಂಶದಲ್ಲಿ ಶೇ.೮೦ ರಿಂದ ೮೫ರಷ್ಟು ಪಾಲನ್ನು ರೈತರಿಗೆ ಕೊಡಲಾಗುವುದು. ಉಳಿದ ಲಾಭಾಂಶವನ್ನು ರೈತರ ಕ್ಷೇಮಾಭಿವೃದ್ಧಿಗೆ ಬಳಸಿಕೊಳ್ಳಲಾಗು ವುದು ಎಂದು ಅವರು ವಿವರಿಸಿದರು. ಹಾಲು ಉತ್ಪಾದನೆಯಲ್ಲಿ ರಾಜ್ಯ ದೇಶ ದಲ್ಲೇ ಎರಡನೇ ಸ್ಥಾನದಲ್ಲಿದೆ. ಪ್ರತಿ ನಿತ್ಯ ೪೦ ಲಕ್ಷಲೀಟರ್ಹಾಲನ್ನು ರಾಜ್ಯಉತ್ಪಾದಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಇನ್ನೂ ಒಂದೂವರೆಲಕ್ಷ ಲೀಟರ್ಹೆಚ್ಚುವರಿ ಹಾಲುಉತ್ಪತ್ತಿಯಾಗುತ್ತಿದೆ.ಬೆಲೆಯೂಕೂಡ ಇತರೆರಾಜ್ಯಗಳಿಗಿಂತ ಕಡಿಮೆಯಿದೆಎಂದರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲು ಕೇಂದ್ರ ಸರ್ಕಾರ ನಿರ್ಧ ರಿಸಿದ್ದು, ಯು.ಪಿ.ಎ. ಅಂಗ ಪಕ್ಷಗಳ ಜೊತೆ ಬುಧವಾರ ಚರ್ಚೆ ನಡೆಸಿತು. ಬೆಲೆ ಏರಿಕೆಗೆ ಶಿಫಾರಸ್ಸು ಮಾಡಿರುವ ಕಿರಿತಿ ಪಾರಿಖ್ ಸಮಿತಿಯ ವರದಿ ಯನ್ನು ಸಹ ಪರಿಶೀಲಿಸಲಾಯಿತು. ಪೆಟ್ರೋಲ್ ಹಾಗೂ ಡೀಸೆಲ್ ದರ ಗಳನ್ನು ಯಥಾಸ್ಥಿತಿಯಲ್ಲಿ ಮುಂದು ವರೆಸಿ, ಸೀಮೆಎಣ್ಣೆ ಹಾಗೂ ಎಲ್.ಪಿ.ಜಿ. ಗ್ಯಾಸ್ ದರವನ್ನು ಕ್ರಮವಾಗಿ ೬ ಮತ್ತು ೧೦೦ ರೂ.ಗೆ ಏರಿಸುವಂತೆ ಪಾರಿಖ್ ಸಮಿತಿ ಶಿಫಾರಸ್ಸು ಮಾಡಿದೆ. ಪೆಟ್ರೋಲ್ ದರ ನಿಯಂತ್ರಣ ವನ್ನು ಸರ್ಕಾರದಿಂದ ಸ್ವತಂತ್ರಗೊಳಿಸಿ, ಪೆಟ್ರೋಲಿಯಂನ ಇತರೆ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವಂತೆ ಚರ್ಚೆಯಲ್ಲಿ ಸಲಹೆಗಳು ವ್ಯಕ್ತವಾದವು. ಶಿಫಾರಸ್ಸಿನ ಅರ್ಧದಷ್ಟು ದರವನ್ನಾದರೂ ಏರಿಸು ವಂತೆ ಅಭಿಪ್ರಾಯಪಡಲಾಯಿತು ಎಂದು ತಿಳಿದು ಬಂದಿದೆ.

No Comments to “ಹಾಲಿನಜೊತೆಪೆಟ್ರೋಲ್ತುಟ್ಟಿ ಖಚಿತ”

add a comment.

Leave a Reply