ಮಹಿಳಾಮೀಸಲಾತಿಮಸೂದೆಗೆರಾಜ್ಯಸಭೆಅಸ್ತು ಸ್ಪೀಕರ್ ಆರಂಭದಲ್ಲಿ ರದ್ದುಪಡಿಸಿ, ಧ್ವನಿ

ನವದೆಹಲಿ : ಕಳೆದ ೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸ ಲಾತಿ ಮಸೂದೆಯು ತೀವ್ರ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಬಹು ಮತದೊಂದಿಗೆ ಅಂಗೀಕಾರ ಪಡೆದು ಕೊಂಡಿದ್ದು, ಯು.ಪಿ.ಎ. ಸರ್ಕಾರವು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಮಸೂದೆಯು ೧೮೬-೧ ಮತಗಳ ಅಂತರದಲ್ಲಿ ರಾಜ್ಯಸಭೆಯಲ್ಲಿ ಅಂಗೀ ಕಾರ ಪಡೆದುಕೊಂಡಿದೆ. ರಾಜ್ಯಸಭೆಯ ಒಟ್ಟು ೨೩೩ ಸದಸ್ಯರ ಪೈಕಿ ೧೮೭ ಸದಸ್ಯರು ಮಾತ್ರ ಮತದಾನದಲ್ಲಿ ಪಾಲ್ಗೊಂಡಿದ್ದರು. ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ, ತೃಣಮೂಲ ಕಾಂಗ್ರೆಸ್ ಸೇರಿದಂತೆ ೪೬ ಸದಸ್ಯರು ಮತದಾನದಿಂದ ಹೊರಗುಳಿ ದಿದ್ದಾರೆ. ಕೆಲವರನ್ನು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣವನ್ನು ಮುಂದೊಡ್ಡಿ ಸದನದಿಂದ ಮಾರ್ಷಲ್ಗಳು ಹೊರ ಹಾಕಿದ್ದರೆ, ಇನ್ನಿತರರು ಗೈರು ಹಾಜ ರಾಗಿದ್ದರು. ಮಸೂದೆಯು ರಾಜ್ಯಸಭೆಯಲ್ಲಿ ಸುಲಭವಾಗಿ ಅಂಗೀಕಾರ ಪಡೆದು ಕೊಂಡಿರುವುದರಿಂದ ಮುಂದಿನ ಹಂತ ದಲ್ಲಿ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಲಿದೆ. ಬಳಿಕ ದೇಶದ ಎಲ್ಲಾ ರಾಜ್ಯಗಳ ವಿಧಾನಸಭೆಯಲ್ಲಿ ಮಸೂದೆ ಮಂಡನೆಯಾಗಿ, ಇಲ್ಲಿ ಶೇ.೫೦ಕ್ಕಿಂತ ಹೆಚ್ಚು ಬಹುಮತ ಬಂದಲ್ಲಿ ಮಸೂದೆಯು ಶಾಸನ ರೂಪಕ್ಕೆ ಬರಲಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ. ಇದಕ್ಕೂ ಮೊದಲು ಕೆಲವು ಪಕ್ಷಗಳ ಸದಸ್ಯರು ಸದನದಲ್ಲಿ ತೀವ್ರ ಕೋಲಾ ಹಲ ಸೃಷ್ಟಿಸಿದ ಹಿನ್ನಲೆಯಲ್ಲಿ ಮಸೂದೆಯ ಮೇಲಿನ ಚರ್ಚೆಯನ್ನು ಸ್ಪೀಕರ್ ಆರಂಭದಲ್ಲಿ ರದ್ದುಪಡಿಸಿ, ಧ್ವನಿ ಮತದ ಮೂಲಕ ಮಸೂದೆಯನ್ನು ಮತಕ್ಕೆ ಹಾಕಲು ನಿರ್ಧರಿಸಿದರು. ಆದರೆ ಪ್ರಮುಖ ಪ್ರತಿಪಕ್ಷ ಬಿ.ಜೆ.ಪಿ. ಚರ್ಚೆ ಬೇಕೆಂದು ಆಗ್ರಹಿಸಿದ್ದರಿಂದ ಮಸೂದೆ ಮೇಲಿನ ಚರ್ಚೆಗೆ ಅವಕಾಶ ನೀಡ ಲಾಯಿತು. ಮಸೂದೆ ಮೇಲೆ ಮತಕ್ಕಾಗಿ ಧ್ವನಿಮತ ಅಂಗೀಕಾರ ಪಡೆದುಕೊಂಡ ಬಳಿಕ ಚರ್ಚೆ ಆರಂಭವಾಯಿತು. ಈ ಸಂದರ್ಭದಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಇತರ ನಾಯಕರಾದ ಡಿ.ಬರ್ದನ್, ಪ್ರಕಾಶ್ ಕಾರಟ್, ಬೃಂದಾ ಕಾರಟ್, ಪ್ರಧಾನಿ ಮನಮೋಹನ್ ಸಿಂಗ್, ಕಾನೂನು ಸಚಿವ ವೀರಪ್ಪ ಮೊಯ್ಲಿ ಸೇರಿದಂತೆ ಹಲವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗದ್ದಲ ವಿಷಾದಕರ : ಅರುಣ್ ಜೇಟ್ಲಿ- ಐತಿಹಾಸಿಕ ವಿಧೇಯಕಕ್ಕೆ ಅಂಗೀಕಾರ ನೀಡುವ ನಿಟ್ಟಿನಲ್ಲಿ ಸದನ ಅತ್ಯಂತ ಕೆಟ್ಟ ನಿದರ್ಶನಗಳನ್ನು ಕಂಡಿದ್ದು ದುರದೃಷ್ಟಕರ ಎಂದು ರಾಜ್ಯಸಭೆಯ ಪ್ರತಿ ಪಕ್ಷದ ನಾಯಕ ಅರುಣ್ ಜೇಟ್ಲಿ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಾ ಅಭಿಪ್ರಾಯಪಟ್ಟರು. ಇಂತಹ ಪ್ರಗತಿಪರ ಮಸೂದೆಗೆ ಇಷ್ಟು ವಿರೋಧ ಎದುರಾಗಬಾರದಿತ್ತು. ಮಹಿಳಾ ಕಲ್ಯಾಣದ ದೃಷ್ಟಿಯಿಂದ ಈ ಮಸೂದೆ ಅತ್ಯಗತ್ಯವಾಗಿದ್ದು, ಬಿ.ಜೆ.ಪಿ. ಸಂಪೂರ್ಣ ಬೆಂಬಲ ಸೂಚಿಸುತ್ತಿದೆ ಎಂದು ಅವರು ಹೇಳಿದರು. ದೇಶದಲ್ಲಿನ ಮಹಿಳೆಯರ ರಾಜ ಕೀಯ ಸ್ಥಿತಿಯನ್ನು ವಿಶ್ಲೇಷಣೆ ನಡೆಸಿದ ಜೇಟ್ಲಿ, ಮುಂದಿನ ದಿನಗಳಲ್ಲಿ ಹೆಚ್ಚು ಮಹಿಳೆಯರನ್ನು ರಾಜಕೀಯ ಕ್ಷೇತ್ರದಲ್ಲಿ ಕಾಣಲಿದ್ದೇವೆ ಎಂದರು.

No Comments to “ಮಹಿಳಾಮೀಸಲಾತಿಮಸೂದೆಗೆರಾಜ್ಯಸಭೆಅಸ್ತು ಸ್ಪೀಕರ್ ಆರಂಭದಲ್ಲಿ ರದ್ದುಪಡಿಸಿ, ಧ್ವನಿ”

add a comment.

Leave a Reply

You must be logged in to post a comment.