ದಾಸರಕೊಪ್ಪಲು ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆ ರದ್ದು

ರೈತರ ಕೃಷಿ ಜಮೀನನ್ನು ವಾಪಸ್ ಕೊಡ ಲಾಗುವುದು. ಕರ್ನಾಟಕ ಗೃಹಮಂಡಳಿಗೆ ಭೂಮಿ ಕೊಡುವುದಿಲ್ಲ. ವಸತಿ ಯೋಜನೆಯನ್ನೂ ಕೂಡ ಕೈಬಿಡಲಾಗಿದೆ ಎಂದು ವಿವರಿಸಿದರು. ಶುಕ್ರವಾರ ಸಂಜೆ ಶಾಸಕ ನೆ.ಲ.ನರೇಂದ್ರ ಬಾಬು, ಬೆಂಗಳೂರು ಸುತ್ತಮುತ್ತ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಸದನದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಂಗ ಳೂರು ಸೇರಿದಂತೆ ಹಾಸನದ ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಲಾಗು ವುದು ಎಂದು ವಾಗ್ದಾನ ನೀಡಿದರು. ಈಗಾಗಲೇ ಸ್ವಾಧೀನಕ್ಕೆ ಸಂಬಂಧಿಸಿದಂತೆ ೪(೧) ಹಾಗೂ ೬(೧) ಅಧಿಸೂಚನೆ ಆದೇಶ ವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಮುಖ್ಯ ಮಂತ್ರಿಗಳು ಘೊಷಿಸುತ್ತಿದ್ದಂತೆ ಸದನದಲ್ಲಿ ಪಕ್ಷ ಭೇದ ಮರೆತು ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಶಾಸಕ ಹೆಚ್.ಎಸ್.ಪ್ರಕಾಶ್ ಪತ್ರಿಕೆ ಯೊಂದಿಗೆ ಮಾತನಾಡಿ, ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು. ಇದಕ್ಕೆ ಮುನ್ನ ವಿಧಾನ ಪರಿಷತ್ನಲ್ಲಿಯೂಈ ವಿವಾದ ಪ್ರತಿಧ್ವನಿಸಿತು. ಪರಿಷತ್ನ ಪ್ರತಿಪಕ್ಷ ನಾಯಕಿ ಮೋಟಮ್ಮ, ಹಾಸನ ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆ ಭಾಗದ ರೈತರು ಕಳೆದ ೧೨ ದಿವಸಗಳಿಂದಲೂ ಧರಣಿ ನಡೆಸುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಈಗಾಗಲೇ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಉನ್ನತ ಅಧಿಕಾರಿಗಳ ತಂಡವನ್ನು ಕಳು ಹಿಸಿ, ಪರಿಶೀಲನೆ ನಡೆಸಲಾಗುವುದು.ಆಭಾಗದ ರೈತರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಕಟ್ಟಾ ಸುಬ್ರಹಣ್ಯನಾಯ್ಡು ಮಧ್ಯಾಹ್ನ ಪರಿ ಷತ್ನಲ್ಲಿ ಈ ಉತ್ತರ ನೀಡುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಭೂ ಸ್ವಾಧೀನ ರದ್ದುಪಡಿಸಬೇಕು ಎಂದು ಪಟ್ಟು ಹಿಡಿದಿದ್ದರು. ಈನಡುವೆ ಸಂಜೆ ಮುಖ್ಯಮಂತ್ರಿಗಳು ವಿಧಾನ ಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಆಗ ನೆ.ಲ.ನರೇಂದ್ರಬಾಬು ಅವರು ಭೂ ಸ್ವಾಧೀನ ಕುರಿತಂತೆ ಚರ್ಚೆ ನಡೆಸಿ, ಸ್ಪಷ್ಟನೆ ಬಿಗಿ ಪಟ್ಟು ಹಿಡಿ ದಿದ್ದರು. ಮುಖ್ಯಮಂತ್ರಿಗಳು ಚರ್ಚೆ ನಂತರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲಾಗುವುದು ಎಂದು ತಿಳಿಸಿದರು

No Comments to “ದಾಸರಕೊಪ್ಪಲು ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆ ರದ್ದು”

add a comment.

Leave a Reply

You must be logged in to post a comment.