ಮೇ.೮-೧೨ಕ್ಕೆ ಗ್ರಾ.ಪಂ. ಚುನಾವಣ

ಬೆಂಗಳೂರು : ಕೊನೆಗೂ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮೇ.೮ ಮತ್ತು ೧೨ರಂದು ಎರಡು ಹಂತಗಳಲ್ಲಿ ರಾಜ್ಯದ ೫೫೭೪ ಗ್ರಾಮ ಪಂಚಾಯತ್ಗಳಿಗೆ ಚುನಾ ವಣೆ ನಡೆಯಲಿದೆ ಮತ್ತು ಮೇ.೧೭ಕ್ಕೆ ಫಲಿತಾಂಶ ಪ್ರಕಟ ವಾಗುತ್ತದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ. ಬೆಂಗಳೂರಿನಲ್ಲಿ ಇದನ್ನು ಅಧಿಕೃತ ವಾಗಿ ಪ್ರಕಟಿಸಿರುವ ಚುನಾವಣಾ ಆಯುಕ್ತ ಸಿ.ಆರ್.ಚಿಕ್ಕಮಠ್, ಮೇ.೮ ರಂದು ೧೬ ಜಿಲ್ಲಾ ವ್ಯಾಪ್ತಿಗಳಲ್ಲಿ ಹಾಗೂ ಮೇ.೧೨ರಂದು ೧೫ ಜಿಲ್ಲಾ ವ್ಯಾಪ್ತಿಗಳಲ್ಲಿ ಚುನಾವಣೆ ನಡೆಯುತ್ತದೆ. ಏಪ್ರಿಲ್ ೧೫ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಮೇ.೮ರಂದು ನಡೆಯುವ ಮೊದಲ ಹಂತದ ಚುನಾವಣೆ ನಡೆಯುವ ವ್ಯಾಪ್ತಿ ಯಲ್ಲಿ ನಾಮಪತ್ರ ಸಲ್ಲಿಸಲು ಏಪ್ರಿಲ್ ೨೬ ಕಡೆಯ ದಿನ. ಏಪ್ರಿಲ್ ೨೭ಕ್ಕೆ ನಾಮ ಪತ್ರಗಳ ಪರಿಶೀಲನೆ ನಡೆಯುತ್ತದೆ. ಏಪ್ರಿಲ್ ೨೯ಕ್ಕೆ ನಾಮಪತ್ರ ಹಿಂಪಡೆ ಯಲು ಕೊನೆಯ ದಿನ. ಈ ಕುರಿತು ಏಪ್ರಿಲ್ ೧೯ಕ್ಕೆ ಅಧಿಸೂಚನೆ ಪ್ರಕಟ ಗೊಳ್ಳುತ್ತದೆ ಎಂದು ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೇ.೧೨ರಂದು ನಡೆಯುವ ಎರಡನೇ ಹಂತದ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಏಪ್ರಿಲ್ ೨೮ ಕೊನೆಯ ದಿನವಾಗಿದ್ದು, ಏಪ್ರಿಲ್ ೨೯ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ.೩ಕ್ಕೆ ನಾಮಪತ್ರ ಹಿಂದಕ್ಕೆ ಪಡೆಯಲು ಕಡೆಯ ದಿನ. ಇದರ ಅಧಿಸೂಚನೆ ಏಪ್ರಿಲ್ ೨೧ರಂದು ಪ್ರಕಟಗೊಳ್ಳಲಿದೆ. ಮೇ.೮ ಮತ್ತು ೧೨ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು, ಮೇ.೧೭ಕ್ಕೆ ಮತ ಎಣಿಕೆ ನಡೆಯುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಚಿಕ್ಕಮಠ್ ವಿವರಣೆ ನೀಡಿದ್ದಾರೆ.

No Comments to “ಮೇ.೮-೧೨ಕ್ಕೆ ಗ್ರಾ.ಪಂ. ಚುನಾವಣ”

add a comment.

Leave a Reply

You must be logged in to post a comment.